More

    ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 7 ವಿಕೆಟ್ ಜಯ, ಸರಣಿ 1-1 ರಿಂದ ಸಮಬಲ

    ಅಹಮದಾಬಾದ್: ಆರಂಭಿಕ ಆಘಾತದಿಂದ ಮೈಕೊಡವಿ ಎದ್ದು ನಿಲ್ಲುವುದು ಭಾರತ ತಂಡಕ್ಕೆ ಅಭ್ಯಾಸವಾಗಿದೆ. ಇದೀಗ ವಿರಾಟ್ ಕೊಹ್ಲಿ ಪಡೆ ಮತ್ತೊಮ್ಮೆ ಅದನ್ನು ಸಾಧಿಸಿ ತೋರಿಸಿದೆ. ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸುವ ಮೂಲಕ ತಿರುಗೇಟು ನೀಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ. ಇದಕ್ಕೆ ನೆರವಾಗಿದ್ದು ಪದಾರ್ಪಣೆ ಪಂದ್ಯದಲ್ಲೇ ಅದ್ಭುತ ಇನಿಂಗ್ಸ್ ಕಟ್ಟಿದ ಇಶಾನ್ ಕಿಶನ್ (56 ರನ್, 32 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ವಿರಾಟ್ ಕೊಹ್ಲಿ (73*ರನ್, 49 ಎಸೆತ, 5 ಬೌಂಡರಿ, 3ಸಿಕ್ಸರ್) ಜೋಡಿಯ ಜತೆಯಾಟ.

    ಇದನ್ನೂ ಓದಿ: VIDEO: ಐಪಿಎಲ್ ಗೆ ಮುನ್ನ ಸನ್ಯಾಸಿ ಅವತಾರದಲ್ಲಿ ಎಂಎಸ್ ಧೋನಿ ಪ್ರತ್ಯಕ್ಷ

    ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ಪ್ರವಾಸಿಗರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಭಾರತೀಯರ ಕರಾರುವಾಕ್ ದಾಳಿ ನಡುವೆಯೂ ಇಂಗ್ಲೆಂಡ್ ತಂಡ ಸಂಘಟಿತ ಬ್ಯಾಟಿಂಗ್ ಬಲದಿಂದ 6 ವಿಕೆಟ್‌ಗೆ 164 ರನ್ ಕಲೆಹಾಕಿತು. ಪ್ರತಿಯಾಗಿ ಭಾರತ ತಂಡ, ಈ ಸ್ಪರ್ಧಾತ್ಮಕ ಮೊತ್ತವನ್ನು ಸರಾಗವಾಗಿ ಬೆನ್ನಟ್ಟಿ 17.5 ಓವರ್‌ಗಳಲ್ಲಿ 3 ವಿಕೆಟ್‌ಗೆ 166 ರನ್ ಗಳಿಸಿ ಜಯದ ನಗೆ ಬೀರಿತು.

    ಇದನ್ನೂ ಓದಿ: 4ನೇ ಬಾರಿ ವಿಜಯ್ ಹಜಾರೆ ಟ್ರೋಫಿ ಜಯಿಸಿದ ಮುಂಬೈ ತಂಡ

    ಇಂಗ್ಲೆಂಡ್: 6 ವಿಕೆಟ್‌ಗೆ 164 (ಜೇಸನ್ ರಾಯ್ 46, ಡೇವಿಡ್ ಮಲನ್ 24, ಜಾನಿ ಬೇರ್‌ಸ್ಟೋ 20, ಇವೊಯಿನ್ ಮಾರ್ಗನ್ 28, ಬೆನ್ ಸ್ಟೋಕ್ಸ್ 24, ವಾಷಿಂಗ್ಟನ್ ಸುಂದರ್ 29ಕ್ಕೆ 2, ಶಾರ್ದೂಲ್ ಠಾಕೂರ್ 29ಕ್ಕೆ 2, ಭುವನೇಶ್ವರ್ ಕುಮಾರ್ 28ಕ್ಕೆ 1, ಯಜುವೇಂದ್ರ ಚಾಹಲ್ 34ಕ್ಕೆ 1), ಭಾರತ: 17.5 ಓವರ್‌ಗಳಲ್ಲಿ 3 ವಿಕೆಟ್‌ಗೆ 166 (ಇಶಾನ್ ಕಿಶನ್ 56, ವಿರಾಟ್ ಕೊಹ್ಲಿ 73*, ರಿಷಭ್ ಪಂತ್ 26, ಸ್ಯಾಮ್ ಕರ‌್ರನ್ 22ಕ್ಕೆ 1, ಕ್ರಿಸ್ ಜೋರ್ಡಾನ್ 38ಕ್ಕೆ 1, ಆದಿಲ್ ರಶೀದ್ 38ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts