ಮಿಂಚಿದ ಧೋನಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆದ್ದ ಭಾರತ

ಮೆಲ್ಬೋರ್ನ್​: ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಇಂದು ನಡೆದ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​ ಧೋನಿ ಭಾರತಕ್ಕೆ ಸರಣಿ ಜಯ ದಕ್ಕಿಸಿಕೊಟ್ಟಿದ್ದಾರೆ.

ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡ ನೀಡಿದ 230 ರನ್​ಗಳ ಸಾಮಾನ್ಯ ಮೊತ್ತವನ್ನು ಬೆನ್ನು ಹತ್ತಿದ ಭಾರತ 49.2 ಓವರ್​ಗಳಲ್ಲಿ 03 ವಿಕೆಟ್​ಗಳ ನಷ್ಟದೊಂದಿಗೆ ಗುರಿ ತಲುಪಿತು. ಅತ್ಯಂತ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಧೋನಿ 87ರನ್​ ಗಳಿಸುವ ಮೂಲಕ ಅವಿಸ್ಮರಣೀಯ ಆಟವಾಡಿದರು.

ತಂಡ ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಿದ 10 ಸಾವಿರ ರನ್​ಗಳನ್ನು ಪೂರೈಸಿರುವ ಹಿರಿಯ ಆಟಗಾರ ಧೋನಿ ಹಿರಿಯಣ್ಣನಂತಯೇ ಆಡಿ ತಂಡಕ್ಕೆ ಜಯ ದಕ್ಕಿಸಿಕೊಟ್ಟರು. ಅಂತಿಮವಾಗಿ ಭಾರತವನ್ನು ಜಯದ ದಡ ತಲುಪಿಸಿ ಸರಣಿ ಗೆಲ್ಲುವಂತೆ ಮಾಡಿದರು.

ಧೋನಿಗೆ ಕೇಧಾರ್​ ಜಾದವ್​ (61) ಉತ್ತಮ ಜತೆಯಾದರು. ಆಕರ್ಷಕ ಅರ್ಧ ಶತಕ ಭಾರಿಸಿದ ಅವರು ಭಾರತದ ಗೆಲುವಿಗೆ ಧೋನಿಗೆ ಉತ್ತಮ ಸಾತ್​ ನೀಡಿದರು.

ಇನ್ನು ನಾಯಕ ವಿರಾಟ್​ ಕೊಹ್ಲಿ 46 ರನ್​ ಗಳಿಸಿ ಸ್ವಲ್ಪದರಲ್ಲಿ ಅರ್ಧಶತಕ ವಂಚಿತರಾದರೂ. ಅವರ ನಿರ್ಗಮನದಿಂದ ಉಂಟಾದ ನಿರಾಸೆ, ಆತಂಕವನ್ನು ಧೋನಿ ನಿವಾರಿಸಿದರು.

ಇತ್ತ ಬೌಲಿಂಗ್​ನಲ್ಲಿಯೂ ಭಾರತ ಮಿಂಚಿದೆ. ಚಹಾಲ್​ 6 ವಿಕೆಟ್​ ಕಿತ್ತು ಮಿಂಚಿದರು. ಭುವನೇಶ್ವರ್​ ಕುಮಾರ್​, ಮೊಹಮದ್​ ಶಮಿ ತಲಾ ಎರಡು ವಿಕೆಟ್​ ಪಡೆದರು.

ಅಂತಿಮವಾಗಿ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 2-1ಅಂತರದಲ್ಲಿ ಗೆದ್ದುಕೊಂಡಿತು.
ಇದಕ್ಕೂ ಮೊದಲು ಭಾರತ ಟೆಸ್ಟ್​ ಸರಣಿಯನ್ನೂ ತನ್ನದಾಗಿಸಿಕೊಂಡಿತು. ಮುಂದಿನ ಟಿ20 ಪಂದ್ಯದ ಮೇಲೆ ತಂಡ ತನ್ನ ಚಿತ್ತ ಹರಿಸಿದೆ.