Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಭಾರತ ಮಹಿಳೆಯರಿಗೆ ಸರಣಿ

Saturday, 15.09.2018, 2:04 AM       No Comments

ಗಾಲೆ: ಆತಿಥೇಯ ಶ್ರೀಲಂಕಾ ತಂಡದ ಪ್ರತಿಹೋರಾಟದ ನಡುವೆಯೂ ಪ್ರಭುತ್ವ ಸಾಧಿಸಿದ ಭಾರತ ಮಹಿಳಾ ತಂಡ 2ನೇ ಏಕದಿನ ಪಂದ್ಯದಲ್ಲಿ 7 ರನ್​ಗಳ ರೋಚಕ ಜಯ ದಾಖಲಿಸಿತು. ಇದರಿಂದ 3 ಪಂದ್ಯಗಳ ಸರಣಿಯನ್ನು ಭಾರತ, ಒಂದು ಪಂದ್ಯ ಬಾಕಿ ಇರುವಾಗಲೇ 2-0ಯಿಂದ ಗೆದ್ದುಕೊಂಡಿತು. ಗಾಲೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕಿ ಮಿಥಾಲಿ ರಾಜ್ (52ರನ್, 121 ಎಸೆತ, 4 ಬೌಂಡರಿ) ಹಾಗೂ ತಾನಿಯಾ ಭಾಟಿಯಾ (68 ರನ್, 66 ಎಸೆತ, 9 ಬೌಂಡರಿ) ಬಿರುಸಿನ ಬ್ಯಾಟಿಂಗ್ ನಡುವೆ ಭಾರತ ತಂಡ, 50 ಓವರ್​ಗಳಲ್ಲಿ 219 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಶ್ರೀಲಂಕಾ ತಂಡ 48.1 ಓವರ್​ಗಳಲ್ಲಿ 212 ರನ್​ಗಳಿಗೆ ಆಲೌಟ್ ಆಯಿತು. 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಭಾನುವಾರ ನಡೆಯಲಿದೆ.

ಭಾರತ: 50 ಓವರ್​ಗಳಲ್ಲಿ 219 (ಮಿಥಾಲಿ ರಾಜ್ 52, ತಾನಿಯಾ ಭಾಟಿಯಾ 68, ಡಿ. ಹೇಮಲತಾ 35, ಪ್ರಬೊಧನಿ 45ಕ್ಕೆ 2, ವೀರಾಕ್ಕೊಡಿ 36ಕ್ಕೆ 2, ಚಾಮರಿ ಅಟ್ಟಪಟ್ಟು 42ಕ್ಕೆ 3).

ಶ್ರೀಲಂಕಾ: 48.1 ಓವರ್​ಗಳಲ್ಲಿ 212 (ಚಾಮರಿ ಅಟ್ಟಪಟ್ಟು 57, ಶಶಿಕಲಾ ಸಿರಿವರ್ಧನೆ 49, ಮಾನ್ಸಿ ಜೋಶಿ 49ಕ್ಕೆ 2, ರಾಜೇಶ್ವರಿ ಗಾಯಕ್ವಾಡ್ 37ಕ್ಕೆ 2).

Leave a Reply

Your email address will not be published. Required fields are marked *

Back To Top