More

    ಇಂದು ಭಾರತ-ಆಫ್ರಿಕಾ ಅಂತಿಮ ಏಕದಿನ: ಕ್ಲೀನ್‌ಸ್ವೀಪ್ ತವಕದಲ್ಲಿ ಹರ್ಮಾನ್‌ಪ್ರೀತ್ ಪಡೆ

    ಬೆಂಗಳೂರು: ಸತತ ಎರಡು ಪಂದ್ಯಗಳಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿರುವ ಭಾರತ ತಂಡ ಮಹಿಳೆಯರ ಏಕದಿನ ಸರಣಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲೂ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಕ್ಲೀನ್‌ಸ್ವೀಪ್ ಸಾಧಿಸುವ ತವಕದಲ್ಲಿದೆ.

    ಮೊದಲ ಪಂದ್ಯದಲ್ಲಿ ಏಕಪಕ್ಷೀಯವಾಗಿ ಗೆಲುವು ದಾಖಲಿಸಿದ ಹರ್ಮಾನ್‌ಪ್ರೀತ್ ಕೌರ್ ಪಡೆ, ಎರಡನೇ ಪಂದ್ಯದಲ್ಲಿ ರನ್‌ಮಳೆ ಹರಿಸಿದ ನಡುವೆಯೂ ಕೊನೇ ಓವರ್‌ನಲ್ಲಿ ಜಯದ ನಿಟ್ಟುಸಿರುಬಿಟ್ಟಿತ್ತು. ಉಪನಾಯಕಿ ಸ್ಮತಿ ಮಂದನಾ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿ ಭರ್ಜರಿ ಾರ್ಮ್‌ನಲ್ಲಿದ್ದು, ಹರ್ಮಾನ್‌ಪ್ರೀತ್ ಸಹ ಹಿಂದಿನ ಪಂದ್ಯದಲ್ಲಿ ಲಯಕ್ಕೆ ಮರಳಿದ್ದಾರೆ. ಏಕೈಕ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಆತ್ಮವಿಶ್ವಾಸಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. ಶೆಾಲಿ ವರ್ಮ, ಡಿ. ಹೇಮಲತಾ ಟೂರ್ನಿಯಲ್ಲಿ ರನ್‌ಬರ ಎದುರಿಸುತ್ತಿರುವುದು ಭಾರತಕ್ಕೆ ಹಿನ್ನಡೆ ಎನಿಸಿದೆ. ಅಂತಿಮ ಪಂದ್ಯಕ್ಕೆ ಇವರಿಬ್ಬರ ಪೈಕಿ ಒಬ್ಬರಿಗೆ ವಿಶ್ರಾಂತಿ ನೀಡಿ ಪ್ರಿಯಾ ಪೂನಿಯಾಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಜತೆಗೆ ಬೌಲಿಂಗ್ ವಿಭಾಗದಲ್ಲೂ ಶ್ರೇಯಾಂಕಾ ಪಾಟೀಲ್, ಸೈಕಾ ಇಶಾಕ್ ಚಾನ್ಸ್ ಪಡೆಯುವ ಸಾಧ್ಯತೆ ಇದೆ.

    ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನ ಆತಿಥ್ಯ ರಾಷ್ಟ್ರವಾಗಿ ಭಾರತ ಈಗಾಗಲೆ ಅರ್ಹತೆ ಪಡೆದುಕೊಂಡಿದ್ದು, ದ.ಆಫ್ರಿಕಾ ಅಂತಿಮ ಪಂದ್ಯ ಗೆಲ್ಲುವ ಮೂಲಕ ಕ್ಲೀನ್‌ಸ್ವೀಪ್ ಮುಖಭಂಗ ತಪ್ಪಿಸಿ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಹಂಬಲದಲ್ಲಿದೆ. ನಾಯಕಿ ಲೌರಾ ವೋಲ್ವರ್ಡ್, ಮಾರಿಜಾನ್ನೆ ಕಾಪ್ ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿ ಲಯಕ್ಕೆ ಮರಳಿದ್ದಾರೆ. ಏಕದಿನ ಸರಣಿ ಬಳಿಕ ಚೆನ್ನೈನಲ್ಲಿ ಏಕೈಕ ಟೆಸ್ಟ್ ಹಾಗೂ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

    ಆರಂಭ: ಮಧ್ಯಾಹ್ನ 1.30ಕ್ಕೆ
    ನೇರಪ್ರಸಾರ: ಸ್ಪೋರ್ಟ್ಸ್ 18,

    See also  ವಿರಾಟ್​ ಕೊಹ್ಲಿ ಇರೋವರೆಗೂ ಆರ್​ಸಿಬಿ ಕಪ್​ ಗೆಲ್ಲಲ್ಲ! ಉತ್ತಮ ಪ್ರದರ್ಶನ ನೀಡಿದ್ರೂ ತಪ್ಪದ ಕಳಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts