ರಾಜ್​ಕೋಟ್​ ಟೆಸ್ಟ್​: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ರಾಜ್​ಕೋಟ್​: ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್​ ಮತ್ತು 272 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಇಂದ ಮುನ್ನಡೆ ಸಾಧಿಸಿದೆ.

ಎರಡನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 94 ರನ್​ ಗಳಿಸಿದ್ದ ವೆಸ್ಟ್​ ಇಂಡೀಸ್​ ತಂಡ 3ನೇ ದಿನದಾಟದ ಮೊದಲ ಅವಧಿಯಲ್ಲಿ 48 ಓವರ್​ಗಳಲ್ಲಿ 181 ರನ್​ ಗಳಿಸಿ ಆಲೌಟಾಯಿತು. ಫಾಲೋಆನ್​ ಪಡೆದ ವೆಸ್ಟ್​ ಇಂಡೀಸ್​ ತಂಡ ಎರಡನೇ ಇನಿಂಗ್ಸ್​ನಲ್ಲಿ 50.5 ಓವರ್​ಗಳಲ್ಲಿ ಕೇವಲ 196 ರನ್​ ಗಳಿಸಿ ಆಲೌಟಾಗುವ ಮೂಲಕ ಸೋಲನುಭವಿಸಿತು.

ಮೊದಲ ಇನಿಂಗ್ಸ್​ನಲ್ಲಿ ಭಾರತದ ಪರ ಆಕರ್ಷಕವಾಗಿ ಬೌಲಿಂಗ್​ ಮಾಡಿದ ಅಶ್ವಿನ್​ 37 ರನ್​ ನೀಡಿ 4 ವಿಕೆಟ್​ ಪಡೆದರು. ಎರಡನೇ ಇನಿಂಗ್ಸ್​ನಲ್ಲಿ ವೆಸ್ಟ್​ ಇಂಡೀಸ್​ ಪರ ಪಾವಲ್​ (83) ಆಕರ್ಷಕ ಅರ್ಧಶತಕ ಗಳಿಸಿ ತಂಡ 150ರ ಗಡಿ ದಾಟುವಲ್ಲಿ ನೆರವಾದರು. ಪಾವಲ್​ ಹೊರತು ಪಡಿಸಿ ಉಳಿದ ಯಾವ ಬ್ಯಾಟ್ಸ್​ಮನ್​ಗಳು ಕ್ರೀಸ್​ಗೆ ಕಚ್ಚಿ ನಿಂತು ಭಾರತೀಯ ಸ್ಪಿನ್ನರ್​ಗಳನ್ನು ಎದುರಿಸಲು ವಿಫಲವಾರದರು.

ಎರಡನೇ ಇನಿಂಗ್ಸ್​ನಲ್ಲಿ ಮಿಂಚಿದ ಭಾರತೀಯ ಸ್ಪಿನ್ನರ್​ಗಳು ಎಲ್ಲಾ 10 ವಿಕೆಟ್​ ಪಡೆದು ಮಿಂಚಿದರು. ಕುಲದೀಪ್​ ಯಾದವ್​ 57 ಕ್ಕೆ 5 ವಿಕೆಟ್​ ಪಡೆದರೆ, ರವೀಂದ್ರ ಜಡೇಜಾ 35 ಕ್ಕೆ 3 ಮತ್ತು ಅಶ್ವಿನ್​ 71 ಕ್ಕೆ 2 ವಿಕೆಟ್​ ಪಡೆದರು.

ರಾಜ್​ಕೋಟ್​ ಟೆಸ್ಟ್​: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಪ್ರಥಮ ಟೆಸ್ಟ್​ನಲ್ಲಿ 5 ವಿಕೆಟ್​ ಪಡೆಯುವ ಮೂಲಕ ಭಾರತದ ಎಡಗೈ ಸ್ಪಿನ್ನರ್​ ಕುಲದೀಪ್​ ಯಾದವ್ ಈ ಸಾಧನೆ ಮಾಡಿದ ಭಾರತದ ಮೊದಲ ಚೈನಾಮನ್​ ಬೌಲರ್​ ಎಂಬ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮುನ್ನ ಶ್ರೀಲಂಕಾದ ಲಕ್ಷ್ಮಣ್​ ಸಂದಖನ್​ 2017ರಲ್ಲಿ ಭಾರತದ ವಿರುದ್ಧ 5 ವಿಕೆಟ್​ ಪಡೆಯುವ ಮೂಲಕ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಚೈನಾಮನ್​ ಬೌಲರ್​ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಭಾರತ ಪ್ರಥಮ ಇನಿಂಗ್ಸ್​ 149.5 ಓವರ್​ಗಳಲ್ಲಿ 9 ವಿಕೆಟ್​ಗೆ 649 ಡಿಕ್ಲೇರ್​.

ವೆಸ್ಟ್​ ಇಂಡೀಸ್​ ಪ್ರಥಮ ಇನಿಂಗ್ಸ್​ 48 ಓವರ್​ಗಳಲ್ಲಿ 181 ಕ್ಕೆ ಆಲೌಟ್​

ವೆಸ್ಟ್​ ಇಂಡೀಸ್​ ದ್ವಿತೀಯ ಇನಿಂಗ್ಸ್​ 50.5 ಓವರ್​ಗಳಲ್ಲಿ 196 ಕ್ಕೆ ಆಲೌಟ್​

ವಿಂಡೀಸ್ ಮೇಲೆ ಭಾರತದ ಸವಾರಿ