2047ಕ್ಕೆ ಪ್ರಪಂಚದಲ್ಲೇ ಸಮೃದ್ಧ, ಬಲಿಷ್ಠ ರಾಷ್ಟ್ರವಾಗಲಿದೆ ಭಾರತ: ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ

ಬೆಂಗಳೂರು: ಭಾರತ 2047ರ ವೇಳೆಗೆ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರಲಿದ್ದು, ಪ್ರಪಂಚದಲ್ಲೇ ಹೆಚ್ಚು ಸಮೃದ್ಧ ಮತ್ತು ಬಲಿಷ್ಠವಾಗಿ ಬೆಳೆಯಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಬೆಂಗಳೂರು ಏರೋಸ್ಪೇಸ್ ವಿಭಾಗ ಆಯೋಜಿಸಿದ್ದ ಏಕೀಕೃತ ಕ್ರಯೋಜನಿಕ್ ಇಂಜಿನ್ ಉತ್ಪಾದನಾ ಸೌಲಭ್ಯ (ಐಸಿಎಂಎಫ್) ಉದ್ಘಾಟಿಸಿ ಮಾತನಾಡಿದರು. ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಕಾಲವನ್ನು ಪ್ರವೇಶಿಸುವುದರಿಂದ ಭವಿಷ್ಯದಲ್ಲಿ ಎಚ್​ಎಎಲ್ ಮತ್ತು ಇಸ್ರೋ ಸಂಸ್ಥೆಗಳು ಮಹತ್ವದ ಮತ್ತು ಸಕಾರಾತ್ಮಕ ಪಾತ್ರ ನಿರ್ವಹಿಸುತ್ತವೆ ಎಂದು ತಿಳಿಸಿದರು. ಎಚ್​ಎಎಲ್ ಮತ್ತು … Continue reading 2047ಕ್ಕೆ ಪ್ರಪಂಚದಲ್ಲೇ ಸಮೃದ್ಧ, ಬಲಿಷ್ಠ ರಾಷ್ಟ್ರವಾಗಲಿದೆ ಭಾರತ: ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ