ಎರಡನೇ ಟೆಸ್ಟ್​: ಟಾಸ್​ ಗೆದ್ದ ವೆಸ್ಟ್​ಇಂಡೀಸ್​ ಬ್ಯಾಟಿಂಗ್​ ಆಯ್ಕೆ

ಹೈದರಾಬಾದ್​: ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್​ ಇಂಡೀಸ್​ ತಂಡ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ರಾಜ್​ಕೋಟ್​ ಟೆಸ್ಟ್​ನಲ್ಲಿ ಭರ್ಜರಿ ಜಯಗಳಿಸುವ ಮೂಲಕ ಸರಣಿಯಲ್ಲಿ 1-0 ಇಂದು ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲೂ ಜಯ ಗಳಿಸಿ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಳ್ಳಲು ಸಜ್ಜಾಗಿದೆ. ಈ ಮೂಲಕ ಕಳೆದ ಐದು ವರ್ಷಗಳಿಂದ ತವರಿನಲ್ಲಿ ಸತತವಾಗಿ ಸರಣಿ ಗೆದ್ದಿರುವ ದಾಖಲೆಯನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.

ಟೆಸ್ಟ್​ಗೆ ಪದಾರ್ಪಣೆ ಮಾಡಿದ ಶಾರ್ದೂಲ್​

ರಾಜ್​ಕೋಟ್​ನಲ್ಲಿ ಆಡಿದ್ದ ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಲಾಗಿದೆ. ಹೈದರಾಬಾದ್​ ಟೆಸ್ಟ್​ನಲ್ಲಿ ಬಲಗೈ ಮಧ್ಯಮ ವೇಗಿ ಶಾರ್ದೂಲ್​ ಠಾಕೂರ್​ ಪದಾರ್ಪಣೆ ಮಾಡಿದ್ದಾರೆ. ಮೊಹಮ್ಮದ್​ ಶಮಿಗೆ ವಿಶ್ರಾಂತಿ ನೀಡಿ, ಶಾರ್ದೂಲ್​ಗೆ ಅವಕಾಶ ನೀಡಲಾಗಿದೆ. ಈ ಮೂಲಕ ಈ ವರ್ಷ ಭಾರತದ ಪರ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ 5ನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಈ ಮೊದಲು 2013ರಲ್ಲಿ ಮೊಹಮ್ಮದ್​ ಶಮಿ, ರೋಹಿತ್​ ಶರ್ಮಾ, ಅಜಿಂಕ್ಯ ರಹಾನೆ, ಶಿಖರ್​ ಧವನ್​ ಮತ್ತು ಭುವನೇಶ್ವರ್​ ಕುಮಾರ್​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. (ಏಜೆನ್ಸೀಸ್​)

ಭಾರತಕ್ಕೆ ಸರಣಿ ಗೆಲುವಿನ ತವಕ