Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಎ 2ನೇ ಟೆಸ್ಟ್

Friday, 10.08.2018, 3:02 AM       No Comments

ಬೆಂಗಳೂರು: ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಿನ ಎರಡನೇ ಹಾಗೂ ಅಂತಿಮ ಚತುರ್ದಿನ ಟೆಸ್ಟ್ ಪಂದ್ಯ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ. 2 ಪಂದ್ಯಗಳ ಸರಣಿಯಲ್ಲಿ ಈಗಾಗಲೆ 1-0 ಮುನ್ನಡೆ ಸಾಧಿಸಿರುವ ದಿಗ್ಗಜ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಆತಿಥೇಯ ತಂಡ ಸರಣಿ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 30 ರನ್​ಗಳಿಂದ ಜಯ ದಾಖಲಿಸಿತ್ತು. ಕಳೆದ ಪಂದ್ಯದ ದ್ವಿಶತಕ ಸಾಧಕ ಕನ್ನಡಿಗ ಮಯಾಂಕ್ ಅಗರ್ವಾಲ್, ಶತಕ ಸಿಡಿಸಿದ್ದ ಪೃಥ್ವಿ ಷಾ ಹಾಗೂ 10 ವಿಕೆಟ್ ಗಳಿಸಿ ಮಿಂಚಿದ್ದ ಮೊಹಮದ್ ಸಿರಾಜ್ ಮತ್ತೊಮ್ಮೆ ಪ್ರವಾಸಿಗರನ್ನು ಕಾಡುವ ನಿರೀಕ್ಷೆ ಇದೆ. ಮೊದಲ ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಅಂಕಿತ್ ಭಾವ್ನೆ, ಶಾಬಾಜ್ ನದೀಮ್ ಜಯಂತ್ ಯಾದವ್, ಅಂಕಿತ್ ರಜಪೂತ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಕೋಚ್ ದ್ರಾವಿಡ್ ಆವರ್ತನಾ ಪದ್ಧತಿಯಂತೆ ಇವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಇಂಗ್ಲೆಂಡ್ ಪ್ರವಾಸದ ಕೊನೇ ಎರಡು ಟೆಸ್ಟ್ ಪಂದ್ಯಗಳಿಗೆ ಅವಕಾಶ ಗಿಟ್ಟಿಸುವ ಸಲುವಾಗಿ ಆಯ್ಕೆಗಾರರ ಗಮನಸೆಳೆಯಲು ಆಟಗಾರರ ಪಾಲಿಗೆ ಇದು ಉತ್ತಮ ವೇದಿಕೆಯಾಗಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಅಂತಿಮ ಹಂತದವರೆಗೆ ಹೋರಾಡಿದರೂ ಇನಿಂಗ್ಸ್ ಸೋಲು ಕಂಡ ಪ್ರವಾಸಿ ತಂಡ ಸರಣಿ ಸಮಬಲದ ತವಕದಲ್ಲಿದೆ.

Leave a Reply

Your email address will not be published. Required fields are marked *

Back To Top