More

    ಭಾರತ ಶುಭಾರಂಭ: ಎಫ್​ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿ

    ಭುವನೇಶ್ವರ: ಗೋಲುಗಳ ಸುರಿಮಳೆಗೈದ ಭಾರತದ ಪುರುಷರ ಹಾಕಿ ತಂಡ ಎಫ್​ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಕಳಿಂಗಾ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟೂರ್ನಿಯ ಮೊದಲ ಚರಣದ ಮೊದಲ ಪಂದ್ಯದಲ್ಲಿ ಮನ್​ಪ್ರೀತ್ ಸಿಂಗ್ ಪಡೆ 5-2 ಗೋಲುಗಳಿಂದ 2019ರ ಚಾಂಪಿಯನ್ ಹಾಗೂ ಯುರೋಪಿಯನ್ ಕಂಚಿನ ಪದಕ ವಿಜೇತ ನೆದರ್ಲೆಂಡ್ ತಂಡವನ್ನು ಸೋಲಿಸಿತು. ಇದರೊಂದಿಗೆ ಪ್ರೊ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭರ್ಜರಿ ನಿರ್ವಹಣೆ ತೋರಿದ ಭಾರತ ತಂಡ 3 ಅಂಕ ದಕ್ಕಿಸಿಕೊಂಡಿತು.

    ತವರು ಪ್ರೇಕ್ಷಕರ ಭರ್ಜರಿ ಬೆಂಬಲದೊಂದಿಗೆ ಕಣಕ್ಕಿಳಿದ ಭಾರತ ತಂಡ ಮೊದಲ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಗುರ್ಜಂತ್ ಸಿಂಗ್ ಆರಂಭಿಕ ಹಂತದಲ್ಲೇ ಫೀಲ್ಡ್ ಗೋಲು ಸಿಡಿಸಿದರು. ಇದಾದ ಕೆಲ ಹೊತ್ತಿನಲ್ಲೇ ರೂಪಿಂದರ್ ಪಾಲ್ ಸಿಂಗ್ (12ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಮುನ್ನಡೆ ಹಿಗ್ಗಿಸಿದರು. ಪ್ರತಿಯಾಗಿ ಎದುರಾಳಿ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಬಿಟ್ಟುಕೊಟ್ಟರೂ ಭಾರತ, ಮೊದಲ ಕ್ವಾರ್ಟರ್​ನಲ್ಲಿ 2-1ರಿಂದ ಮುನ್ನಡೆ ಕಾಯ್ದುಕೊಂಡಿತು. 2ನೇ ಕ್ವಾರ್ಟರ್​ನಲ್ಲಿ ನೆದರ್ಲೆಂಡ್ ಪ್ರತಿಹೋರಾಟ ನಡೆಸಿ ಮೊದಲಾರ್ಧದ ಅಂತ್ಯಕ್ಕೆ 2-2ರಿಂದ ಸಮಬಲ ಕಂಡಿತು.

    3ನೇ ಹಾಗೂ 4ನೇ ಕ್ವಾರ್ಟರ್​ನಲ್ಲಿ ಮತ್ತೆ ಬಿಗಿ ಹಿಡಿತ ಸಾಧಿಸಿದ ಭಾರತ, ಬಲಿಷ್ಠ ನೆದರ್ಲೆಂಡ್​ಗೆ ಸೋಲಿನ ರುಚಿ ತೋರಿಸಿತು. 3ನೇ ಕ್ವಾರ್ಟರ್​ನಲ್ಲಿ ಮಂದೀಪ್ ಸಿಂಗ್ (34) ಹಾಗೂ ಲಲಿತ್ ಉಪಾದ್ಯಯ (36), 4ನೇ ಹಾಗೂ ಅಂತಿಮ ಕ್ವಾರ್ಟರ್​ನಲ್ಲಿ ರೂಪಿಂದರ್ ಪಾಲ್ ಸಿಂಗ್ (46) ಗೋಲು ಸಿಡಿಸಿದರು. 2ನೇ ಪಂದ್ಯ ಭಾನುವಾರ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts