Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಭಾರತಕ್ಕೆ ಸತತ 10ನೇ ಸರಣಿ ಗೆಲುವಿನ ತವಕ

Saturday, 14.07.2018, 3:05 AM       No Comments

ಲಂಡನ್: ಆಂಗ್ಲರ ನಾಡಿನಲ್ಲಿ ಭರ್ಜರಿ ಆರಂಭ ಕಂಡು ಆತ್ಮವಿಶ್ವಾಸದ ಅಲೆಯಲ್ಲಿರುವ ಭಾರತ ಹಾಗೂ ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿರುವ ಆತಿಥೇಯ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯ ಶನಿವಾರ ನಡೆಯಲಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0ಯಿಂದ ಮುನ್ನಡೆ ಸಾಧಿಸಿದೆ. ಭಾರತೀಯ ಕ್ರಿಕೆಟ್​ನ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿರುವ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲೇ ಸರಣಿ ಜಯಿಸುವ ಅವಕಾಶ ವಿರಾಟ್ ಕೊಹ್ಲಿ ಪಡೆಗೆ ಲಭಿಸಿದೆ. ಜತೆಗೆ ಸತತ 10ನೇ ಏಕದಿನ ಸರಣಿ ಗೆಲುವಿನ ಸಾಧನೆ ಮೇಲೆ ಕಣ್ಣಿಟ್ಟಿದೆ. ಇದರಿಂದ ಭಾರತ ವಿಶ್ವ ನಂ.1 ಪಟ್ಟಕ್ಕೂ ಮತ್ತಷ್ಟು ಸನಿಹವಾಗಲಿದೆ. -ಏಜೆನ್ಸೀಸ್

ಭಾರತ ತಂಡ 2016ರ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಆಡಿದ ಎಲ್ಲ ಏಕದಿನ ಸರಣಿಗಳನ್ನು ಗೆದ್ದುಕೊಂಡಿದೆ. ಸತತ 9 ಏಕದಿನ ಸರಣಿ ಜಯಿಸಿರುವ ಭಾರತ, ಈ ನಡುವೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಾತ್ರ ಎಡವಿತ್ತು.

ವಿಶ್ವಕಪ್, ವಿಂಬಲ್ಡನ್​ನಿಂದ ಕ್ರಿಕೆಟ್ ಪಂದ್ಯ ಬೇಗನೆ ನಿಗದಿ!

ಭಾನುವಾರ ಫಿಫಾ ವಿಶ್ವಕಪ್ ಫೈನಲ್ ಹಾಗೂ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವಿರುವ ಕಾರಣ ಮೊದಲ ಏಕದಿನ ಪಂದ್ಯ ಮುಕ್ತಾಯದ ಬಳಿಕ ಕೇವಲ ಒಂದು ದಿನ ಅಂತರದಲ್ಲಿ ಈ ಪಂದ್ಯ ನಿಗದಿಪಡಿಸಲಾಗಿದೆ. ಆತಿಥೇಯರ ಮೂಲ ಯೋಜನೆಯಂತೆ ಪಂದ್ಯ ಭಾನುವಾರ ನಡೆಯಬೇಕಿತ್ತು.

ಸಂದಿಗ್ಧ ಸ್ಥಿತಿಯಲ್ಲಿ ಇಂಗ್ಲೆಂಡ್

ಟ್ರೆಂಟ್​ಬ್ರಿಜ್​ನ ಡ್ರೖೆಪಿಚ್​ನಲ್ಲಿ ಭಾರತದ ಕುಲದೀಪ್ ರಿಸ್ಟ್ ಸ್ಪಿನ್ ಮೋಡಿಗೆ ಆತಿಥೇಯ ಬ್ಯಾಟ್ಸ್​ಮನ್​ಗಳು ಮಂಡಿಯೂರಿದ್ದರು. ಸ್ಟೋಕ್ಸ್ ಹಾಗೂ ಬಟ್ಲರ್ ಕೆಲಕಾಲ ಪ್ರತಿರೋಧ ನೀಡಿದರೂ ಕುಲದೀಪ್ ಮ್ಯಾಜಿಕ್​ಗೆ ಶರಣಾದರು. ಆರಂಭಿಕರೂ ಮೊದಲ ವಿಕೆಟ್​ಗೆ 70ರನ್ ಕಲೆಹಾಕಿದರೂ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ತಂಡಕ್ಕೆ ಭಾರಿ ಹೊಡೆತ ನೀಡಿತ್ತು. ಈಗಾಗಲೇ ಟಿ20 ಸರಣಿಯನ್ನು ಕಳೆದುಕೊಂಡಿರುವ ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ನಾಯಕ ಇವೋಯಿನ್ ಮಾರ್ಗನ್, ಬೇರ್​ಸ್ಟೋ, ಜೋ ರೂಟ್, ಬಟ್ಲರ್, ಸ್ಟೋಕ್ಸ್​ರಂಥ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆಂಗ್ಲರು ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದ್ದಾರೆ.

ಆತ್ಮವಿಶ್ವಾಸದಲ್ಲಿ ಭಾರತ

81 ದಿನಗಳ ಪ್ರವಾಸದ ಮೊದಲ ಹಣಾಹಣಿಯಾಗಿದ್ದ ಟಿ20 ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿರುವ ಭಾರತ, ಮತ್ತೊಂದು ಸರಣಿ ಜಯದ ಮೇಲೆ ಕಣ್ಣಿಟ್ಟಿದೆ. ಸಾಕಷ್ಟು ಪೂರ್ವ ತಯಾರಿಯೊಂದಿಗೆ ಆಂಗ್ಲರ ನಾಡಿಗೆ ತೆರಳಿರುವ ಭಾರತ, ಯೋಜನಾ ಬದ್ಧ ಪ್ರದರ್ಶನದೊಂದಿಗೆ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿ ಸುಲಭ ಜಯ ದಾಖಲಿಸಿರುವ ಭಾರತ ತಂಡ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.


ಟೆಸ್ಟ್​ನಲ್ಲೂ ಕುಲ್​ಚಾ ಆಡಿಸುವಾಸೆ!

ನಾಟಿಂಗ್​ಹ್ಯಾಂ: ಭಾರತದ ನಿಗದಿತ ಓವರ್​ಗಳ ತಂಡದ ಸಕ್ಸಸ್​ಫುಲ್ ರಿಸ್ಟ್ ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಅವರನ್ನು ಮುಂಬರುವ ಆಂಗ್ಲರೆದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಆಡಿಸಲು ನಾಯಕ ವಿರಾಟ್ ಕೊಹ್ಲಿ ಆಸಕ್ತಿ ವಹಿಸಿದ್ದಾರೆ. ಕುಲದೀಪ್ ಇದುವರೆಗೆ 2 ಟೆಸ್ಟ್ ಪಂದ್ಯಗಳನ್ನಾಡಿದ್ದರೆ, ಚಾಹಲ್ ಇನ್ನು ಪದಾರ್ಪಣೆ ಮಾಡಿಲ್ಲ. ‘ಕುಲ್​ಚಾ’ ಎಂದೇ ಜನಪ್ರಿಯತೆ ಪಡೆದಿರುವ ಈ ಜೋಡಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿ, ಚಾಹಲ್-ಕುಲದೀಪ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.

ಟ್ರೆಂಟ್​ಬ್ರಿಜ್​ನಲ್ಲಿ ಗುರುವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ಬಳಿಕ ಮಾತನಾಡಿದ ಕೊಹ್ಲಿ, ಕುಲದೀಪ್ ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಈಗಾಗಲೇ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಆಂಗ್ಲರ ಪಡೆ ಅವರ ಬೌಲಿಂಗ್ ಎದುರು ಪರದಾಡಿದೆ ಎಂದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಕುಲದೀಪ್ (25ಕ್ಕೆ 6) ಮಾರಕ ದಾಳಿಗೆ ನಲುಗಿ 49.5 ಓವರ್​ಗಳಲ್ಲಿ 268 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ, ಆರಂಭಿಕ ರೋಹಿತ್ ಶರ್ಮ (137 ರನ್, 114 ಎಸೆತ, 15 ಬೌಂಡರಿ, 4 ಸಿಕ್ಸರ್) ಸಿಡಿಸಿದ ಪ್ರವಾಸದ ಸತತ 2ನೇ ಹಾಗೂ ಏಕದಿನ ಕ್ರಿಕೆಟ್​ನ 18ನೇ ಶತಕದ ನೆರವಿನಿಂದ 40.1 ಓವರ್​ಗಳಲ್ಲಿ 2 ವಿಕೆಟ್​ಗೆ 269ರನ್​ಗಳಿಸಿ ಗೆಲುವಿನ ನಗೆ ಬೀರಿತು. ಶಿಖರ್ ಧವನ್ (40) ಸ್ಪೋಟಕ ಆರಂಭ ಒದಗಿಸಿ ಔಟಾದರೆ, ಬಳಿಕ ಬಂದ ನಾಯಕ ಕೊಹ್ಲಿ (75 ರನ್, 82 ಎಸೆತ, 7 ಬೌಂಡರಿ), ರೋಹಿತ್ ಜತೆಗೂಡಿ 2ನೇ ವಿಕೆಟ್​ಗೆ 167 ರನ್ ಪೇರಿಸಿದರು. -ಪಿಟಿಐ

Leave a Reply

Your email address will not be published. Required fields are marked *

Back To Top