ಸ್ಪಿನ್ನರ್ಸ್​ ಕಣಕ್ಕಿಳಿಸಬೇಕೆಂಬ ಯೋಚನೆಯೇ ಬರಲಿಲ್ಲ: ವಿರಾಟ್​ ಕೊಹ್ಲಿ

ಪರ್ತ್​: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಸ್ಪಿನ್ನರ್​ಗಳನ್ನು ಕಣಕ್ಕಿಳಿಸಬೇಕೆಂಬ ಯೋಚನೆ ನನ್ನ ಮೆದುಳಿಗೆ ಹೊಳೆಯಲೇ ಇಲ್ಲ. ನಾಲ್ವರು ವೇಗಿಗಳಿಂದ ಆಸಿಸ್​​ ವಿರುದ್ಧ ದಾಳಿ ಮಾಡುವುದೇ ನಮ್ಮ ಕೆಲಸವೆಂದು ನಂಬಿದ್ದೆವು ಎಂದು ನಾಯಕ ವಿರಾಟ್​ ಕೊಹ್ಲಿ ತಿಳಿಸಿದ್ದಾರೆ.

ಆಸಿಸ್​​ ವಿರುದ್ಧ 146 ರನ್​ ಅಂತರದಲ್ಲಿ ಎರಡನೇ ಟೆಸ್ಟ್​ ಪಂದ್ಯ ಸೋತ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ನಾವು ಪಿಚ್​ ನೋಡಿದಾಗ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಆಲೋಚನೆಯೇ ಬರಲಿಲ್ಲ. ನಾಲ್ವರು ವೇಗಿಗಳಷ್ಟೇ ಸಾಕೆಂದುಕೊಂಡೆವು ಎಂದು ಹೇಳಿದರು.

ಸ್ಪಿನ್ನರ್​ ನಾಥನ್​ ಲ್ಯಾನ್​ ಉತ್ತಮವಾಗಿ ಬೌಲಿಂಗ್​ ಮಾಡಿದರು. ಪ್ರಾಮಾಣಿಕವಾಗಿ ಹೇಳುತ್ತೇನೆ ಸ್ಪಿನ್ನರ್ಸ್​ ಬಗ್ಗೆ ನನಗೆ ಯೋಚನೆಯೇ ಬರಲಿಲ್ಲ. ಈ ಟೂರ್ನಿಯಲ್ಲಿ ನಾಥನ್​ ಲ್ಯಾನ್​ ಪ್ರಮುಖ 8 ವಿಕೆಟ್​ ಕಬಳಿಸಿ ಆಸಿಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಬಾರಿಸಿದ ಶತಕದ(123) ಬಗ್ಗೆ ಕೇಳಿದಾಗ ಯಾವಾಗ ಪಂದ್ಯ ಗೆಲ್ಲುವುದಿಲ್ಲವೋ ಆಗ ನಿಮ್ಮ ಉತ್ತಮ ಪ್ರದರ್ಶನ ಅಸಮಂಜಸವಾಗುತ್ತದೆ ಎಂದು ಉತ್ತರಿಸಿದರು. ಅಲ್ಲದೆ, ಮುಂದಿನ ಪಂದ್ಯದ ಬಗ್ಗೆ ನಾವು ಗಮನವಹಿಸುತ್ತೇವೆ. ವಿಜಯದ ಕಾಣಿಕೆ ನೀಡುವ ಭರವಸೆ ಇದೆ ಎಂದರು.

ಆಸಿಸ್​ ಗೆಲುವನ್ನು ಕೊಂಡಾಡಿದ ಕೊಹ್ಲಿ ಆತಿಥೇಯರ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಒಳ್ಳೆಯ ಹಿಡಿತವಿತ್ತು. ಒಂದು ತಂಡವಾಗಿ ನಾವು ಕೂಡ ಈ ಮೈದಾನದಲ್ಲಿ ಒಳ್ಳೆಯ ಆಟವನ್ನು ಆಡಿದ್ದೇವೆ ಎಂದು ಹೇಳಲು ಬಯಸುತ್ತೇನೆ. ಆಸಿಸ್​ ನಮಗಿಂತಲೂ ಉತ್ತಮವಾಗಿ ಆಡಿದ್ದಾರೆ. ಈ ಗೆಲುವಿಗೆ ಅವರು ಅರ್ಹರು ಎಂದು ಹೊಗಳಿದರು. (ಏಜೆನ್ಸೀಸ್​)

ಮೊದಲ ಟೆಸ್ಟ್​ ಸೋಲಿನ ಮುಖಭಂಗಕ್ಕೆ 2ನೇ ಟೆಸ್ಟ್​ನಲ್ಲಿ​ ಉತ್ತರ: ಆಸಿಸ್ ದಾಳಿಗೆ ಭಾರತ ತತ್ತರ

ಬೈದಾಟದ ನಡುವೆ ಮರೆತರು ಹೋರಾಟ!