ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್​: ಆಸಿಸ್ ಪಡೆಗೆ ಫಾಲೋ ಆನ್​ ಹೇರಿದ ಟೀಂ ಇಂಡಿಯಾ​

ಸಿಡ್ನಿ: ಪ್ರವಾಸಿ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 300 ರನ್​ಗಳಿಗೆ ಸರ್ವಪತನ ಕಂಡ ಆಸಿಸ್​ ಪಡೆ ಫಾಲೋ ಆನ್​ ಭೀತಿಗೆ ಒಳಗಾಗಿದೆ.

322 ರನ್ ಮುನ್ನಡೆ ಪಡೆದಿರುವ ಭಾರತ ಆಸಿಸ್​ ಪಡೆಗೆ ಫಾಲೋ ಆನ್​ ಹೇರಿದೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 622 ರನ್​ ಗಳಿಸಿತ್ತು. ಗುರಿ ಬೆನ್ನತ್ತಿದ ಆಸಿಸ್​ ಪಡೆ ಸರ್ವಪತನ ಕಂಡು 300 ರನ್​ ಗಳಿಸಲಷ್ಟೇ ಶಕ್ತವಾಯಿತು.

ನಾಲ್ಕನೇ ದಿನದಾಟದಲ್ಲಿ ಮಳೆರಾಯ ಕೊಂಚ ಅಡ್ಡಿಪಡಿಸಿದನಾದರೂ ಟೀಂ ಇಂಡಿಯಾ ಆಸೀಸ್ ತಂಡದ ಉಳಿದ ನಾಲ್ಕು ವಿಕೆಟ್​ಗಳನ್ನು ಬೇಗನೆ ಕೆಡವಿದರು. ಭಾರತದ ಪರ ಸ್ಪಿನ್ನರ್ ಕುಲದೀಪ್​ ಯಾದವ್​ ನಾಲ್ಕನೇ ದಿನದಾಟಕ್ಕೆ ಉತ್ತಮ ನಿರ್ವಹಣೆ ತೋರಿದರು. ಮೊದಲ ಇನ್ನಿಂಗ್ಸ್​ನಲ್ಲಿ ಒಟ್ಟು 5 ವಿಕೆಟ್​ ಕಬಳಿಸಿ ಕುಲದೀಪ್​ ಗಮನ ಸೆಳೆದರು.

ಸದ್ಯ ಭಾರತ ನೀಡಿರುವ ಫಾಲೋ ಆನ್​ ಬೆನ್ನತ್ತಿರುವ ಆಸಿಸ್​ ಪಡೆ 4 ರನ್​ ಗಳಿಸಿ ಆಡುತ್ತಿದೆ. (ಏಜೆನ್ಸೀಸ್​)

ಭಾರತ ಪ್ರಬಲ, ಆಸೀಸ್ ವಿಲವಿಲ!