26.7 C
Bengaluru
Sunday, January 19, 2020

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್​: 283 ರನ್​ಗೆ ಟೀಂ ಇಂಡಿಯಾ ಆಲೌಟ್​, 43 ರನ್​ ಹಿನ್ನಡೆ

Latest News

ಅಂತಜರ್ಲ ಬತ್ತಿದರೆ ಜೀವ ಸಂಕುಲ ನಾಶ

ಚಿತ್ರದುರ್ಗ: ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಸುವುದರಿಂದ ಅಂರ್ತಜಲ ಬರಿದಾಗಿ, ಜೀವ ಸಂಕುಲ ಹಾಗೂ ನೀರಿನ ಸೆಲೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಬೆಂಗಳೂರಿನ...

ಏಕದಿನ ಮಾದರಿ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಹಿಟ್​ ಮ್ಯಾನ್​ ರೋಹಿತ್​ ಶರ್ಮ!

ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್​ ಇಂಡಿಯಾದ ಆರಂಭಿಕ...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್ ವಿಡಿಯೋಗೂ ಎನ್​ಆರ್​ಸಿಗೂ ಸಂಬಂಧವಿದೆಯೇ?

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ...

ಬಸನಾಳ ಖಾತ್ರಿ ಗೋಕಟ್ಟೆ ವೀಕ್ಷಣೆ

ಕಲಬುರಗಿ: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸನಾಳ ಗ್ರಾಮದಲ್ಲಿ ನಿರ್ಮಿಸಲಾಗಿರುವ ಗೋಕಟ್ಟಾ ಇನ್ನಿತರ ಕಾಮಗಾರಿಗಳನ್ನು ನರೇಗಾ...

ಅಕ್ಷರ ಜಾತ್ರೆಗೆ ಅನುದಾನದ ಬರ !

ವಾದಿರಾಜ ವ್ಯಾಸಮುದ್ರ ಕಲಬುರಗಿಜ್ಞಾನಗಂಗೆ ಪರಿಸರದಲ್ಲಿ ಫೆಬ್ರವರಿ 5ರಿಂದ ನಡೆಯಲಿರುವ ಮೂರು ದಿನದ ಅಕ್ಷರ ಜಾತ್ರೆಗೆ ಅನುದಾನದ ಬರ ಉಂಟಾಗುವ ಆತಂಕ ಎದುರಾಗಿದೆ. ಸಮ್ಮೇಳನಕ್ಕೆ...

ಪರ್ತ್​: ಆತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 283 ರನ್​ಗೆ ಸರ್ವಪತನಗೊಂಡಿರುವ ಟೀಂ ಇಂಡಿಯಾ 43 ರನ್​ಗಳ ಹಿನ್ನೆಡೆ ಅನುಭವಿಸಿದೆ.

ಮೊದಲು ಬ್ಯಾಟ್​ ಮಾಡಿದ ಆಸಿಸ್​ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 326 ರನ್​​ ಗಳಿಸಿತ್ತು. ಗುರಿ ಬೆನ್ನತ್ತಿದ ಟೀಂ ಇಂಡಿಯಾ ಮೂರನೇ ದಿನಾದಟದ ಭೋಜನ ವಿರಾಮದ ಬಳಿಕ 283 ರನ್​ಗಳಿಗೆ ಸರ್ವಪತನಕಂಡಿದೆ. ಈ ಮೂಲಕ 43 ರನ್​ ಹಿನ್ನಡೆ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದೆ.

ಟೀಂ ಇಂಡಿಯಾ ನಿನ್ನೆ(ಶನಿವಾರ) ಮೂರು ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸಿ ಎರಡನೇ ದಿನದಾಟವನ್ನು ಅಂತ್ಯಗೊಳಿಸಿತ್ತು. ಇಂದು ರಹಾನೆ ಹಾಗೂ ನಾಯಕ ವಿರಾಟ್​ ಕೊಹ್ಲಿ ಮೂರನೇ ದಿನದಾಟವನ್ನು ಪ್ರಾರಂಭಿಸಿದರು. ಆದರೆ, ಆರಂಭದಲ್ಲಿ ರಹಾನೆ ಅವರ ವಿಕೆಟ್​ ಕಳೆದುಕೊಂಡು ತಂಡ ಸಂಕಷ್ಟದ ಸುಳಿಯಲ್ಲಿ ಸಿಲುಕಿತ್ತು. ಆದರೆ, ನಾಯಕ ವಿರಾಟ್​ ಕೊಹ್ಲಿ ಅವರ ಆಕರ್ಷಕ ಶತಕ ತಂಡಕ್ಕೆ ಮರುಜೀವ ನೀಡಿತು. ಅತ್ಯಧಿಕ ಅಂತರದಲ್ಲಿ ಹಿನ್ನೆಡೆ ಅನುಭವಿಸಬೇಕಿದ್ದ ತಂಡಕ್ಕೆ ರಹಾನೆ ಹಾಗೂ ಕೊಹ್ಲಿ ಜತೆಯಾಟ ಆಸರೆಯಾಯಿತು.

ತಂಡದ ಪರ ನಾಯಕ ಕೊಹ್ಲಿ(123), ರಹಾನೆ(51), ಹನುಮ ವಿಹಾರಿ(20), ರಿಷಭ್​ ಪಂತ್​(36), ಮಹಮ್ಮದ್​ ಶಮಿ(0), ಇಶಾಂತ್​ ಶರ್ಮಾ(1), ಉಮೇಶ್​ ಯಾದವ್​(4*) ಹಾಗೂ ಜಸ್ಪ್ರಿತ್​ ಬೂಮ್ರಾ(4) ರನ್​ ಗಳಿಸಿದರು.

ಆಸಿಸ್​ ಪರ ನಾಥನ್​ ಲಯಾನ್​ 5 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಮಿಚೆಲ್​ ಸ್ಟಾರ್ಕ್​ ಹಾಗೂ ಜೋಶ್​ ಹಜಾಲ್​ವುಡ್​​ ತಲಾ 2 ವಿಕೆಟ್​ ಪಡೆದರೆ, ಪ್ಯಾಟ್​ ಕ್ಯೂಮಿನ್ಸ್​ ಒಂದು ವಿಕೆಟ್​ಗೆ ತೃಪ್ತಿಪಟ್ಟರು.

ಸದ್ಯ 43 ರನ್​ಗಳ ಮುನ್ನಡೆಯಿಂದ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಆಸಿಸ್​ ಪಡೆ ಯಾವುದೇ ವಿಕೆಟ್​ ನಷ್ಟವಿಲ್ಲದೇ 21 ರನ್​ ಗಳಿಸಿದೆ. ಮಾರ್ಕಸ್​ ಹ್ಯಾರಿಸ್​ ಹಾಗೂ ಆ್ಯರೂನ್​ ಫಿಂಚ್​ ಕ್ರೀಸ್​ನಲ್ಲಿದ್ದಾರೆ.(ಏಜೆನ್ಸೀಸ್​​)

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...