More

    ರೋರಿಂಗ್​ ರೋಹಿತ್-ಕೊಹ್ಲಿ ಕಮಾಲ್​: ಆಸೀಸ್​ ವಿರುದ್ಧ ಏಕದಿನ ಸರಣಿ ಜಯಿಸಿದ ಭಾರತ​

    ಬೆಂಗಳೂರು: ರೋಹಿತ್​ ಶರ್ಮ(119)ರ ಭದ್ರಬುನಾದಿ ಹಾಗೂ ನಾಯಕ ವಿರಾಟ್​ ಕೊಹ್ಲಿ(89) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್​ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸುವುದರೊಂದಿಗೆ 2-1 ಅಂತರಿಂದ ಸರಣಿ ವಶಪಡಿಸಿಕೊಂಡಿತು.

    ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್​ ಪಡೆ ನೀಡಿದ್ದ 287 ರನ್​ ಗುರಿ ಬೆನ್ನತ್ತಿದ ಭಾರತಕ್ಕೆ ರೋಹಿತ್​ ಶರ್ಮಾ- ಕೆ.ಎಲ್​.ರಾಹುಲ್​(19) ಮೊದಲ ವಿಕೆಟ್​ಗೆ 69 ರನ್​ ಜತೆಯಾಟವಾಡಿ ಉತ್ತಮ ಆರಂಭ ದೊರಕಿಸಿಕೊಟ್ಟರು. ರಾಹುಲ್​ ಬಳಿಕ ಕ್ರೀಸ್​ಗೆ ಇಳಿದ ನಾಯಕ ವಿರಾಟ್​ ಕೊಹ್ಲಿ, ರೋಹಿತ್​ ಜತೆಗೂಡಿ ಆಸೀಸ್​ ಬೌಲರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು. ಆರಂಭದಿಂದಲೂ ಉತ್ತಮ ಲಯದಲ್ಲೇ ಆಡಿಕೊಂಡು ಬಂದ ರೋಹಿತ್​ 119 ರನ್​ ಗಳಿಸಿ 29ನೇ ಏಕದಿನ ಶತಕ ಸಂಭ್ರಮಿಸಿ ಕ್ಯಾಚಿತ್ತು ನಿರ್ಗಮಿಸಿದರು.

    ಆಸಿಸ್​ ಬೌಲರ್​ಗಳನ್ನು ಕೊನೆವರೆಗೂ ಕಾಡಿದ ನಾಯಕ ಕೊಹ್ಲಿ (89) ರನ್​ ಗಳಿಸಿ ಟೀಮ್​ ಇಂಡಿಯಾದ ಗೆಲುವಿನ ಹೊಸ್ತಿಲಲ್ಲಿ ಔಟಾದರು. ಶ್ರೇಯಸ್​ ಅಯ್ಯರ್​ (44*) ರನ್​​ಗಳ ಉಪಯುಕ್ತ ಕಾಣಿಕೆ ನೀಡಿದರೆ, ಮನೀಶ್​ ಪಾಂಡೆ (8*) ರನ್​ ಗಳಿಸಿ ಅಜೇಯರಾಗಿ ಉಳಿದರು.

    ಅಂತಿಮವಾಗಿ ಟೀಮ್​ ಇಂಡಿಯಾ 47.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 289 ರನ್​ ಕಲೆಹಾಕುವ ಮೂಲಕ ಆಸೀಸ್ ವಿರುದ್ಧ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ 2-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.

    ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ಎದುರಿಸಲು ಆಸೀಸ್​ ಬೌಲರ್​ಗಳು ಕೊನೆವರೆಗೂ ಪರದಾಡಿದರು. ಆಸೀಸ್​ ಪರ ಜೋಶ್​ ಹಜಾಲ್​ವುಡ್​, ಆಸ್ಥಾನ್​ ಅಗರ್​ ಮತ್ತು ಆ್ಯಡಮ್​ ಝಂಪಾ ತಲಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಆಸೀಸ್​ ಪಡೆ ಕಾಡಿದ ಮಹಮ್ಮದ್​ ಶಮಿ: ಸ್ಮಿತ್​ ಶತಕದಾಸರೆಯಿಂದ ಟೀಮ್​ ಇಂಡಿಯಾಗೆ ಸವಾಲಿನ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts