ಭಾರತ vs ಆಸ್ಟ್ರೇಲಿಯಾ: 2ನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿ, ಬ್ಲೂ ಬಾಯ್ಸ್​ ಗೆಲ್ಲಲು 90 ರನ್​ ಗುರಿ

ಮೆಲ್ಬೋರ್ನ್​: ಆತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತದ ನಡುವೆ ನಡೆಯುತ್ತಿರುವ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಬ್ಲೂ ಬಾಯ್ಸ್​ ಗೆಲುವಿಗೆ 90 ರನ್​ ಬೇಕಾಗಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಆಸಿಸ್​ ಪಡೆ 19 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 132 ರನ್​ ಗಳಿಸಿತ್ತು. ಈ ವೇಳೆ ವರುಣನ ಆಗಮನದಿಂದ ಪಂದ್ಯ ಸ್ಥಗಿತಗೊಂಡಿತ್ತು. ಡಕ್ ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಗೆಲುವಿಗೆ 11 ಓವರ್​ಗಳಲ್ಲಿ 90 ರನ್​ ಗಳಿಸಬೇಕಿದೆ.

ತಂಡದ ಪರ ಬೆನ್​ ಮ್ಯಾಕ್​ಡೆರ್ಮೋಟ್​(32*), ಗ್ಲೇನ್​ ಮ್ಯಾಕ್ಸ್​ವೆಲ್​(19), ನ್ಯಾಥನ್​ ಕೌಲ್ಟರ್​ ನೇಲ್​(18) ರನ್​ ಕಾಣಿಕೆ ನೀಡಿದ್ದನ್ನು ಬಿಟ್ಟರೆ, ಉಳಿದ ಯಾವೊಬ್ಬ ಬ್ಯಾಟ್ಸ್​ಮನ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಬೆನ್​ ಮ್ಯಾಕ್​ಡೆರ್ಮೋಟ್​ 32 ರನ್​ ಹಾಗೂ ಆ್ಯಂಡ್ರಿವ್​ ಟೈ 12 ರನ್​ ಗಳಿಸಿ ಕ್ರೀಸ್​ನಲ್ಲಿದ್ದ ವೇಳೆ ಮಳೆ ಅಡ್ಡಿಯಾಯಿತು.

ಟೀಂ ಇಂಡಿಯಾ ಪರ ಭುವನೇಶ್ವರ ಕುಮಾರ್​ ಹಾಗೂ ಕೆ. ಖಲೀಲ್​ ಅಹಮದ್​ ತಲಾ ಎರಡು ವಿಕೆಟ್​ ಪಡೆದರೆ, ಉಳಿದಂತೆ ಜಸ್ಪ್ರಿತ್​ ಬೂಮ್ರಾ, ಕುಲದೀಪ್​ ಯಾದವ್​ ಹಾಗೂ ಕೃನಾಲ್​ ಪಾಂಡ್ಯ ತಲಾ ಒಂದೊಂದು ವಿಕೆಟ್​ ಕಬಳಿಸಿದರು. (ಏಜೆನ್ಸೀಸ್​)