More

    ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಭಾರತ ಭೇಟಿ; ಭಾರತ ಮತ್ತು ಯುಎಸ್​ ಅಧಿಕಾರಿಗಳ ಮಾತುಕತೆ

    ನವದೆಹಲಿ: ಅಮರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಅವರ ಭಾರತ ಭೇಟಿಗಾಗಿ ಭಾರತ ಮತ್ತು ಯುಎಸ್​ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.

    ಕಳೆದ ವರ್ಷದ ಜನವರಿ 26 ಗಣ ರಾಜ್ಯೋತ್ಸವಕ್ಕೆ ಟ್ರಂಪ್​ ಅವರನ್ನು ಭಾರತ ಆಹ್ವಾನಿಸಿತ್ತು. ಆದರೆ ಅವರಿಗೆ ಸಮಯಾವಕಾಶ ಒದಗಿರಲಿಲ್ಲ. ಕಳೆದ ಜನವರಿ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್​ ಅವರಿಗೆ ಕರೆಮಾಡಿ ಮಾತನಾಡಿದ್ದಾರೆ.

    ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡ ಇಬ್ಬರು, ಭಾರತ ಮತ್ತು ಅಮೆರಿಕ ಸಂಬಂಧ, ಮತ್ತು ಟ್ರಂಪ್​ ಅವರ ಭಾರತದ ಭೇಟಿ ಬಗ್ಗೆ ಮಾತನಾಡಿದರು.

    ಅಮೆರಿಕದಲ್ಲಿ ನವೆಂಬರ್​ನಲ್ಲಿ ಚುನಾವಣೆ ನಡೆಯಲಿದ್ದು ಅದಕ್ಕೂ ಮುನ್ನ ಟ್ರಂಪ್​ ಅವರು ಭಾರತಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಆಹ್ವಾನದ ಬಗ್ಗೆ ಟ್ರಂಪ್​ ಮಾಹಿತಿ ನೀಡಿದ್ದು, ಅವರು ಭಾರತಕ್ಕೆ ಆಹ್ವಾನಿಸಿದ್ದಾರೆ. ಸಮಯ ಸಿಕ್ಕಾಗ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದಿದ್ದಾರೆ.

    ಟ್ರಂಪ್​ ಅವರ ಭಾರತದ ಭೇಟಿಯಿಂದ ವ್ಯವಹಾರಗಳ ಸಂಬಂಧ ಸುಧಾರಿಸಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಮತ್ತು ಕಾಶ್ಮೀರದ 370ನೇ ವಿಧಿ ರದ್ಧತಿಯಾದ ಈ ಸಂದರ್ಭದಲ್ಲಿ ಟ್ರಂಪ್​ ಅವರ ಭೇಟಿ ವಿಶೇಷ ಎನಿಸಲಿದೆ. ಈ ಮೊದಲು 370ನೇ ವಿಧಿ ರದ್ಧತಿ ಬಗ್ಗೆ ಟ್ರಂಪ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts