ಮೋದಿಗೇ ಮತ್ತೆ ದೆಹಲಿ ಗದ್ದುಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೆ ಸಂಸತ್ತಿನ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಇಂಡಿಯಾ ಟಿವಿ- ಸಿಎನ್​ಎಕ್ಸ್​ನ ಸಮೀಕ್ಷೆ ಹೇಳಿದೆ. ಶೇ. 41 ಜನ ಮೋದಿ ಬೆಂಬಲಿಸಿದರೆ ಶೇ. 23 ಜನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲಿಸಿದ್ದಾರೆ. ಬಿಎಸ್​ಪಿಯ ಮಾಯಾವತಿಗೆ ಶೇ. 7, ಬಿಹಾರ ಸಿಎಂ ನಿತೀಶ್​ಗೆ ಶೇ. 5, ಬಂಗಾಳ ಸಿಎಂ ಮಮತಾ ಹಾಗೂ ಎಸ್​ಪಿ ಮುಖಂಡ ಅಖಿಲೇಶ್ ಯಾದವ್​ಗೆ ತಲಾ ಶೇ. 3 ಮಂದಿ ಬೆಂಬಲ ಸಿಕ್ಕಿದೆ. ಭಾರತದಲ್ಲಿ ಅಚ್ಛೇ ದಿನ್ ಬಂದಿದೆ ಎಂಬುದನ್ನು ಶೇ. 46 ಮಂದಿ ಒಪ್ಪಿದ್ದು, ಶೇ.34 ಜನ ನಿರಾಕರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂ ದಿರ ನಿರ್ವಣಕ್ಕೆ ಸುಗ್ರೀವಾಜ್ಞೆ ಬೇಕೆಂಬುದು ಶೇ.40 ಜನರ ಅನಿಸಿಕೆ.

ಸಂಸದರು ಜಸ್ಟ್ ಪಾಸ್

ಸಂಸದರ ಕಾರ್ಯವೈಖರಿಯನ್ನು ಶೇ. 36 ಜನ ಬೆಂಬಲಿಸಿದರೆ ಶೇ.21 ಮಂದಿ ಸಾಧಾರಣ ಎಂದಿದ್ದಾರೆ. ಶೇ.28 ಮಂದಿ ಕಳಪೆ ಎಂದರೆ, ಶೇ.15 ಜನ ಪ್ರತಿಕ್ರಿಯಿಸಿಲ್ಲ.

ನಿರುದ್ಯೋಗದಿಂದ ಸೋಲು

ಹಿಂದಿ ಭಾಷಿಕ 3 ರಾಜ್ಯಗಳಲ್ಲಿ ಬಿಜೆಪಿ ಸೋಲಲು ನಿರುದ್ಯೋಗ ಕಾರಣ ಎಂದು ಶೇ. 31 ಜನ ಅಭಿಪ್ರಾಯಪಟ್ಟರೆ, ಶೇ. 22 ಜನ ರೈತರ ನಿರ್ಲಕ್ಷ್ಯ ಶೇ.15 ಮಂದಿ ಭ್ರಷ್ಟಾಚಾರ, ಶೇ.16 ಜನ ಇನ್ನಿತರ ಕಾರಣ ನೀಡಿದ್ದಾರೆ.

One Reply to “ಮೋದಿಗೇ ಮತ್ತೆ ದೆಹಲಿ ಗದ್ದುಗೆ”

Comments are closed.