ಜುಲೈನಿಂದ ವಿಶ್ವ ಟೆಸ್ಟ್​​​​ ಚಾಂಪಿಯನ್​ಶಿಪ್​​​​​​​​​ ಟೂರ್ನಿ; ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕೆರಬಿಯನ್​​​ ಎದುರಾಳಿ

ಮುಂಬೈ: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​​​​​​​​ ಟೂರ್ನಿಯ ನಂತರ ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​​ ಟೂರ್ನಿ ಆರಂಭವಾಗಲಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ವೆಸ್ಟ್​​ ಇಂಡೀಸ್​ ವಿರುದ್ಧ ಹೋರಾಟ ನಡೆಸಲಿದೆ.

ಎರಡು ವರ್ಷಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ವಿಶ್ವದ 9 ಪ್ರಮುಖ ತಂಡಗಳು ಸ್ಪರ್ಧಿಸಲಿವೆ. ಪ್ರತಿ ತಂಡವನ್ನು 6 ತಂಡಗಳ ವಿರುದ್ಧ 2 ರಿಂದ 5 ಸರಣಿಗಳನ್ನು ಆಡಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್​​ ಸಮಿತಿ (ಐಸಿಸಿ) ತಿಳಿಸಿದೆ.

ಮೂರು ಸರಣಿಗಳು ತವರಿನ ಪಿಚ್​​​​ನಲ್ಲಿ ನಡೆದರೆ, ಇನ್ನುಳಿದ ಮೂರು ಸರಣಿಗಳು ವಿದೇಶದಲ್ಲಿ ಆಡಬೇಕಾಗುತ್ತದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ ಹೆಚ್ಚು ಅಂಕಗಳನ್ನು ಪಡೆದ ಎರಡು ತಂಡಗಳು 2021ರಲ್ಲಿ ಇಂಗ್ಲೆಂಡ್​​ನಲ್ಲಿ ನಡೆಯುವ ಫೈನಲ್​ನಲ್ಲಿ ಮುಖಾಮುಖಿಯಾಗಲಿವೆ. ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್​​​​​​​​​​ ಸೆಣಸಲಿವೆ.

ಭಾರತ ಮತ್ತು ವೆಸ್ಟ್​​ ಇಂಡೀಸ್​​​ ವಿರುದ್ಧ 2 ಟೆಸ್ಟ್​​ ಸರಣಿಗಳು ನಡೆಯಲಿದ್ದು, ಆಗಸ್ಟ್​​ 22ರಂದು ಆ್ಯಂಟಿಗುವಾದಲ್ಲಿ ನಡೆಯಲಿದೆ. ಈ ಸರಣಿಗೂ ಮುನ್ನ ಉಭಯ ತಂಡಗಳು 3 ಟಿ-20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿವೆ.

ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲ್ಯಾಂಡ್​​, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಳ್ಳಲಿವೆ.

ವೆಸ್ಟ್​​ ಇಂಡೀಸ್​ ಎದುರು ಭಾರತದ ಮೂರು ಸರಣಿಗಳ ವೇಳಾ ಪಟ್ಟಿ ಇಂತಿದೆ:
ಟಿ-20 ಸರಣಿ
ಮೊದಲ ಪಂದ್ಯ, ಆಗಸ್ಟ್​​​​ 3, ಫ್ಲೋರಿಡಾ (ಅಮೆರಿಕಾ)
ಎರಡನೇ ಪಂದ್ಯ, ಆಗಸ್ಟ್​​​​​​​ 4, ಫ್ಲೋರಿಡಾ (ಅಮೆರಿಕಾ)
ಮೂರನೇ ಪಂದ್ಯ, ಆಗಸ್ಟ್​​​​​​​​ 6, ಗುಯಾನ (ಅಮೆರಿಕಾ)

ಏಕದಿನ ಸರಣಿ
ಮೊದಲ ಪಂದ್ಯ, ಆಗಸ್ಟ್​​​​​​ 8, ಗುಯಾನ (ಅಮೆರಿಕಾ)
ಎರಡನೇ ಪಂದ್ಯ, ಆಗಸ್ಟ್​​​​​​ 11, ಟ್ರಿನಿಡಾಡ್​​​​​ (ಅಮೆರಿಕಾ)
ಮೂರನೇ ಪಂದ್ಯ, ಆಗಸ್ಟ್​​​​​​​​​ 14, ಟ್ರಿನಿಡಾಡ್​​ (ಅಮೆರಿಕಾ)

ಟೆಸ್ಟ್​​​ ಸರಣಿ
ಮೊದಲ ಪಂದ್ಯ, ಆಗಸ್ಟ್​​​ 22 ರಿಂದ 26, ಆ್ಯಂಟಿಗುವಾ
ಎರಡನೇ ಪಂದ್ಯ, ಆಗಸ್ಟ್​​​​ 30 ರಿಂದ ಸೆಪ್ಟೆಂಬರ್​​​​​​​ 3, ಜಮೈಕಾ
(ಏಜೆನ್ಸೀಸ್​​)

Leave a Reply

Your email address will not be published. Required fields are marked *