ಅಭಿವೃದ್ಧಿಯತ್ತ ಭಾರತ ದಾಪುಗಾಲು

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಭಾರತ ಬದಲಾಗುತ್ತಿದ್ದು, ಅಭಿವೃದ್ಧಿಯೆಡೆ ತೀವ್ರಗತಿಯಲ್ಲಿ ಸಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಬಣ್ಣಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಏಕತಾ ಅಭಿಯಾನದ ಅಂಗವಾಗಿ ಒಂದು ದೇಶ-ಒಂದು ಸಂವಿಧಾನ ಕುರಿತು ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡ 370ನೇ ವಿಧಿ ರದ್ದತಿ ಬಗ್ಗೆ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನ ಮಾನ ಹಿಂಪಡೆದ ಕುರಿತು ವಿವರಿಸಿದ ಅವರು, ಜಮ್ಮು ಕಾಶ್ಮೀರವನ್ನು ಉಳಿದ ರಾಜ್ಯಗಳೊಂದಿಗೆ ಒಗ್ಗೂಡಿಸಿ ಕೊಂಡು ಹೋಗಲು ಸಂವಿಧಾನದ 370ನೇ ವಿಧಿ ಮತ್ತು 35 ಎ ಪರಿಚ್ಛೇದಗಳು ಬಹುದೊಡ್ಡ ತೊಡಕಾಗಿದ್ದವು ಎಂದರು.

ಜನಸಂಘ, ಆನಂತರ ಬಿಜೆಪಿ ನಾಯಕರು 40 ವರ್ಷಗಳಿಂದ ಕಾಶ್ಮೀರ ವಿಚಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಶ್ಯಾಮ್ ಪ್ರಸಾದ್ ಮುಖರ್ಜಿಯವರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ವಿರುದ್ಧದ ಹೋರಾಟದಲ್ಲಿ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಕಾಶ್ಮೀರವು ದೇಶಪ್ರೇಮ ಮತ್ತು ದೇಶಭಕ್ತಿಯ ವಿಚಾರ ಎಂದು ಹೇಳಿದರು.

ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಕಾಶ್ಮೀರ ತಣ್ಣಗಾಗಿದೆ. ಈಗ ಸಫಾಯಿ ಕರ್ಮಚಾರಿ ಕೂಡ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗಲಿದ್ದಾನೆ. ಗ್ರಾಪಂನಿಂದ ವಿಧಾನಸಭೆ ಯವರೆಗೆ ಚುನಾವಣೆ ನಡೆಯಲಿದೆ ಎಂದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆಯುವ ನಿರ್ಧಾರ ಕೈಗೊಂಡ ಒಂದೇ ದಿನದಲ್ಲಿ 370ನೇ ವಿಧಿ ರದ್ದತಿಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ. ಬಿಜೆಪಿಗೆ ಬಹುಮತ ಇಲ್ಲದಿದ್ದರೂ ರಾಜ್ಯಸಭೆಯಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ. ಕೇವಲ ಭಾರತದ ಜನರಷ್ಟೇ ಅಲ್ಲ, ಇಡೀ ಜಗತ್ತು ಭಾರತದ ಜತೆಗೆ ನಿಂತಿತ್ತು. ಯಾವುದೇ ಹಿಂಸೆ, ಅಸಮಾಧಾನವಿಲ್ಲದೆ ಬಹುದೊಡ್ಡ ಬದಲಾವಣೆ ಸಾಧ್ಯವಾಗಿದ್ದು ಇತಿಹಾಸ ಎಂದು ನಡ್ಡಾ ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಡಿಸಿಎಂ ಗೋವಿಂದ ಕಾರಜೋಳ, ಸಚಿವ ವಿ.ಸೋಮಣ್ಣ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಎನ್. ರವಿಕುಮಾರ, ಮಹೇಶ ಟೆಂಗಿನಕಾಯಿ, ಅಭಿಯಾನದ ರಾಜ್ಯ ಸಂಚಾಲಕ ಅರವಿಂದ ಲಿಂಬಾವಳಿ ವೇದಿಕೆಯಲ್ಲಿದ್ದರು.

ನಗರ ಜಿಲ್ಲಾ ಅಧ್ಯಕ್ಷ ಎಸ್.ಮುನಿರಾಜು, ನಗರಾಧ್ಯಕ್ಷ ಬಿ.ಎಲ್.ಸದಾಶಿವ ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

370ನೇ ವಿಧಿ ದೇಶಕ್ಕೆ ಅಂಟಿಕೊಂಡಿದ್ದ ದೊಡ್ಡ ಕಳಂಕ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರಿಂದ ಈ ಕಳಂಕಕ್ಕೆ ಮುಕ್ತಿ ಸಿಕ್ಕಿದೆ. ನಮ್ಮ ಹಿರಿಯರ ಅಭಿಲಾಷೆ ಈಡೇರಿದೆ. ಬಿಜೆಪಿ ಚುನಾವಣೆ ಮುನ್ನ ಘೋಷಿಸಿದಂತೆಯೇ ನಡೆದಿದೆ.

| ಡಿ.ವಿ. ಸದಾನಂದಗೌಡ ಕೇಂದ್ರ ಸಚಿವ

 

ಹಿಂಪಡೆದಿದ್ದರಿಂದ ಅಲ್ಲಿನ ಮೂರು ಕುಟುಂಬಗಳು ಮಾತ್ರ ಕಣ್ಣೀರು ಹಾಕುತ್ತಿವೆ. 370ನೇ ವಿಧಿ ರದ್ದುಗೊಂಡಿದ್ದರಿಂದ 48 ವರ್ಷಗಳ ಇತಿಹಾಸಕ್ಕೆ ಸುದೀರ್ಘ ಹೋರಾಟಕ್ಕೆ ಫಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಕೂಡ ಭಾರತಕ್ಕೆ ಸೇರ್ಪಡೆಯಾಗಲಿದೆ.

| ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

Leave a Reply

Your email address will not be published. Required fields are marked *