More

    ಜಿಂಬಾಬ್ವೆ ಪ್ರವಾಸಕ್ಕೆ ಇಂದು ಭಾರತ ತಂಡ ಆಯ್ಕೆ ಸಾಧ್ಯತೆ…

    ನವದೆಹಲಿ: ಟಿ20 ವಿಶ್ವಕಪ್​ ಬೆನ್ನಲ್ಲೇ ನಡೆಯಲಿರುವ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಭಾನುವಾರ ನಡೆಯುವ ನಿರೀಕ್ಷೆ ಇದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಐಪಿಎಲ್​ನಲ್ಲಿ ಮಿಂಚಿದ ಯುವ ಆಟಗಾರರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಟಿ20 ಸರಣಿಯ 5 ಪಂದ್ಯಗಳು ಜುಲೈ 6, 7, 10, 13, 14ರಂದು ನಡೆಯಲಿವೆ. ಎಲ್ಲ ಪಂದ್ಯಗಳು ಹರಾರೆಯಲ್ಲೇ ನಿಗದಿಯಾಗಿವೆ. ಹಾಲಿ ಟಿ20 ವಿಶ್ವಕಪ್​ನಲ್ಲಿ ಆಡುತ್ತಿರುವ ಭಾರತ ತಂಡದ 6-7 ಆಟಗಾರರಷ್ಟೇ ಜಿಂಬಾಬ್ವೆಗೆ ತೆರಳುವ ಸಾಧ್ಯತೆ ಇದೆ. ಹಾರ್ದಿಕ್​ ಪಾಂಡ್ಯ ಅಥವಾ ಸೂರ್ಯಕುಮಾರ್​ ಯಾದವ್​ ಜಿಂಬಾಬ್ವೆ ಪ್ರವಾಸಕ್ಕೆ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎನ್ನಲಾಗಿದೆ.

    ಐಪಿಎಲ್​ನಲ್ಲಿ ಮಿಂಚಿದ ಅಭಿಷೇಕ್​ ಶರ್ಮ, ನಿತೀಶ್​ ರೆಡ್ಡಿ, ರಿಯಾನ್​ ಪರಾಗ್​, ಪ್ರಭ್​ಸಿಮ್ರಾನ್​ ಸಿಂಗ್​ಗೂ ಅವಕಾಶ ಲಭಿಸುವ ನಿರೀಕ್ಷೆ ಇದೆ. ವಿಶ್ವಕಪ್​ನ ಅಮೆರಿಕ ಚರಣದ ಬಳಿಕ ಭಾರತ ತಂಡ ತೊರೆದು ತವರಿಗೆ ಮರಳಿರುವ ಆರಂಭಿಕ ಶುಭಮಾನ್​ ಗಿಲ್​ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.
    ಭಾರತ ತಂಡ ಮುಂದಿನ ಒಂದು ವರ್ಷದ ಅವಧಿಯಲ್ಲಿ 20 ಟಿ20 ಪಂದ್ಯಗಳನ್ನು ಆಡಲಿದೆ.

    ಕನ್ನಡಿಗ ವೈಶಾಕ್​ ಆಯ್ಕೆ ಸಾಧ್ಯತೆ
    ಕಳೆದ ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿದ ಕರ್ನಾಟಕದ ವೇಗಿ ವೈಶಾಕ್​ ವಿಜಯ್​ ಕುಮಾರ್​ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಲಿದ್ದಾರೆ ಎನ್ನಲಾಗಿದೆ. ಎಡಗೈ ವೇಗಿ ಅರ್ಷದೀಪ್​ ಸಿಂಗ್​ ವೇಗದ ಬೌಲಿಂಗ್​ ವಿಭಾಗದ ಸಾರಥ್ಯ ವಹಿಸುವ ಸಾಧ್ಯತೆ ಇದೆ. ವಿಶ್ವಕಪ್​ ತಂಡದಲ್ಲಿ ಮೀಸಲು ಆಟಗಾರರಾಗಿರುವ ವೇಗಿ ಖಲೀಲ್​ ಅಹ್ಮದ್​ ಮತ್ತು ಐಪಿಎಲ್​ನಲ್ಲಿ ಆರ್​ಸಿಬಿ ಪರ ಮಿಂಚಿದ ಉತ್ತರ ಪ್ರದೇಶದ ವೇಗಿ ಯಶ್​ ದಯಾಳ್​ಗೂ ಅವಕಾಶದ ನಿರೀಕ್ಷೆ ಇದೆ. ಆವೇಶ್​ ಖಾನ್​ ಮತ್ತು ಮುಕೇಶ್​ ಕುಮಾರ್​ ವೇಗದ ಬೌಲರ್​ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆ.

    ಕರ್ನಾಟಕದ ಕ್ರಿಕೆಟಿಗ ಮನೀಷ್​ ಪಾಂಡೆ ದಾಂಪತ್ಯದಲ್ಲಿ ಬಿರುಕು?

    See also  ಕೇಂದ್ರ ಸಚಿವ ಸುರೇಶ್​ ಅಂಗಡಿ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts