ಕರೊನಾ ಸೋಂಕಿನಲ್ಲಿ ಮತ್ತಷ್ಟು ಇಳಿಕೆ ತೋರಿದ ಭಾರತ

ನವದೆಹಲಿ: ಕರೊನಾ ಸೋಂಕಿನ ನಿತ್ಯಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬಂದಿದ್ದು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 14,306 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗಿದ್ದು, ದೇಶಾದ್ಯಂತ ಹಾಲಿ 1,67,695 ಸಕ್ರಿಯ ಕರೊನಾ ಪ್ರಕರಣಗಳಿವೆ. ಭಾನುವಾರ ವರದಿಯಾಗಿರುವ ಪ್ರಕರಣಗಳಲ್ಲಿ ಶೇ. 60 ರಷ್ಟು ಅಂದರೆ 8,538 ಹೊಸ ಕೇಸುಗಳು ಕೇರಳ ಒಂದರಿಂದಲೇ ವರದಿಯಾಗಿದ್ದು, ರಾಜ್ಯದಲ್ಲಿ 363 ಕರೊನಾ ಸಾವುಗಳೂ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಭಾನುವಾರ 1,410 ಸೋಂಕು ಪ್ರಕರಣಗಳು ದಾಖಲಾಗಿದ್ದು, 18 ಜನರು ಮೃತಗೊಂಡಿದ್ದಾರೆ ಎಂದು … Continue reading ಕರೊನಾ ಸೋಂಕಿನಲ್ಲಿ ಮತ್ತಷ್ಟು ಇಳಿಕೆ ತೋರಿದ ಭಾರತ