ಅಹರ್ನಿಶಿ ಟೆಸ್ಟ್​ನಲ್ಲಿ ಭಾರತಕ್ಕೆ ಸೇಡಿನ ತವಕ; ಅಡಿಲೇಡ್​ನಲ್ಲಿ 36ಕ್ಕೆ ಆಲೌಟ್​ ಆಗಿದ್ದ ನೋವು ಮರೆಸುವ ಅವಕಾಶ!

blank

ಅಡಿಲೇಡ್​: ನಾಲ್ಕು ವರ್ಷಗಳ ಹಿಂದೆ ಅಹರ್ನಿಶಿ ಟೆಸ್ಟ್​ ಪಂದ್ಯಗಳ ಹ್ಯಾಟ್ರಿಕ್​ ಗೆಲುವಿನ ವಿಶ್ವಾಸದೊಂದಿಗೆ ಅಡಿಲೇಡ್​ನಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ, ಮೊದಲ ಇನಿಂಗ್ಸ್​ನಲ್ಲಿ 53 ರನ್​ಗಳ ಅಮೂಲ್ಯ ಮುನ್ನಡೆ ಸಾಧಿಸಿದರೂ, ಪಂದ್ಯದ ಮೂರನೇ ದಿನದಾಟದಲ್ಲಿ ಕೇವಲ 36 ರನ್​ಗಳಿಗೆ ಆಲೌಟ್​ ಆಗಿ ಸೋಲು ಅನುಭವಿಸಿತ್ತು. ಆ ಸೋಲಿನಿಂದ ಕುಗ್ಗದೆ ಭಾರತ ತಂಡ ನಂತರ ಪುಟಿದೆದ್ದು ಐತಿಹಾಸಿಕ ಸರಣಿ ಗೆಲುವು ದಾಖಲಿಸಿದ್ದರೂ, ಆ ಪ್ರವಾಸದಲ್ಲಿ ತನ್ನ ನಿಕೃಷ್ಟ ಮೊತ್ತಕ್ಕೆ ಆಲೌಟ್​ ಆದ ನೋವು ಕಾಡುತ್ತಲೇ ಬಂದಿದೆ. ಅದನ್ನು ನಿವಾರಿಸಲು ಭಾರತಕ್ಕೆ ಈ ಸಲದ ಆಸ್ಟ್ರೆಲಿಯಾ ಪ್ರವಾಸದಲ್ಲಿ ಉತ್ತಮ ಅವಕಾಶ ಎದುರಾಗಿದೆ. ಮುಂದಿನ ಶುಕ್ರವಾರದಿಂದ ಅಡಿಲೇಡ್​ನಲ್ಲಿ ಹೊನಲು&ಬೆಳಕಿನಲ್ಲೇ ನಡೆಯಲಿರುವ ಬಾರ್ಡರ್​-ಗಾವಸ್ಕರ್​ ಟ್ರೋಫಿಯ 2ನೇ ಟೆಸ್ಟ್​ ಪಂದ್ಯ ಭಾರತಕ್ಕೆ ಆತಿಥೇಯ ಆಸ್ಟ್ರೆಲಿಯಾದ ಪಿಂಕ್​ಬಾಲ್​ ಪ್ರಾಬಲ್ಯಕ್ಕೆ ಸೆಡ್ಡುಹೊಡೆದು ಸೇಡು ತೀರಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. 2020ರ ಅಡಿಲೇಡ್​ ಟೆಸ್ಟ್​ನಲ್ಲಿ 36 ರನ್​ಗಳಿಗೆ ಆಲೌಟ್​ ಆದ ಭಾರತ 3 ಆಟಗಾರರಷ್ಟೇ (ಕೊಹ್ಲಿ, ಬುಮ್ರಾ, ಅಶ್ವಿನ್​) ಈಗಿನ ತಂಡದಲ್ಲೂ ಇದ್ದಾರೆ.

ಪಿಂಕ್​ಬಾಲ್​ನಲ್ಲಿ ಆಸೀಸ್​ ಪ್ರಾಬಲ್ಯ: ಆಸ್ಟ್ರೆಲಿಯಾ ತಂಡ ಇದುವರೆಗೆ 12 ಅಹರ್ನಿಶಿ ಟೆಸ್ಟ್​ ಪಂದ್ಯಗಳನ್ನು ಆಡಿದ್ದು, ಈ ಪೈಕಿ 11ರಲ್ಲಿ ಗೆದ್ದ ಬಲಿಷ್ಠ ದಾಖಲೆ ಹೊಂದಿದೆ. ವರ್ಷಾರಂಭದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಬ್ರಿಸ್ಬೇನ್​ನಲ್ಲಿ ಆಡಿದ ತನ್ನ ಕೊನೇ ಪಿಂಕ್​ಬಾಲ್​ ಟೆಸ್ಟ್​ನಲ್ಲಿ ಆಸೀಸ್​ ಸೋಲು ಕಂಡಿತ್ತು.

ತವರಿನ ಡೇ-ನೈಟ್​ ಟೆಸ್ಟ್​ಗಳಲ್ಲಿ ಭಾರತ ಮೇಲುಗೈ: ಭಾರತ ತಂಡ ಆಸೀಸ್​ ನೆಲದಲ್ಲಿ 2020ರಲ್ಲಿ ಆಡಿದ ಏಕೈಕ ಪಿಂಕ್​ಬಾಲ್​ ಟೆಸ್ಟ್​ನಲ್ಲಿ ಸೋತಿದ್ದರೂ, ಅದಕ್ಕೆ ಮುನ್ನ ತವರಿನಲ್ಲಿ ಆಡಿದ ಮೂರೂ ಅಹರ್ನಿಶಿ ಟೆಸ್ಟ್​ಗಳಲ್ಲಿ ಗೆದ್ದ ದಾಖಲೆ ಹೊಂದಿದೆ. 2019ರಲ್ಲಿ ಬಾಂಗ್ಲಾ ವಿರುದ್ಧ ಕೋಲ್ಕತದಲ್ಲಿ, 2021ರಲ್ಲಿ ಇಂಗ್ಲೆಂಡ್​ ವಿರುದ್ಧ ಅಹಮದಾಬಾದ್​ನಲ್ಲಿ ಮತ್ತು 2022ರಲ್ಲಿ ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ಭಾರತ ಗೆಲುವು ದಾಖಲಿಸಿತ್ತು. ಅಹರ್ನಿಶಿ ಟೆಸ್ಟ್​ನಲ್ಲಿ 2019ರಲ್ಲಿ ಕೋಲ್ಕತದಲ್ಲಿ 9 ವಿಕೆಟ್​ಗೆ 347 ರನ್​ ಗಳಿಸಿರುವುದೇ ಭಾರತದ ಗರಿಷ್ಠ ಮೊತ್ತವಾಗಿದೆ. ವಿರಾಟ್​ ಕೊಹ್ಲಿ ಅಹರ್ನಿಶಿ ಟೆಸ್ಟ್​ಗಳಲ್ಲಿ ಭಾರತ ಪರ ಗರಿಷ್ಠ 277 ರನ್​ ಬಾರಿಸಿದ ದಾಖಲೆ ಹೊಂದಿದ್ದಾರೆ. ಆರ್​. ಅಶ್ವಿನ್​ ಗರಿಷ್ಠ 18 ವಿಕೆಟ್​ ಕಬಳಿಸಿದ್ದಾರೆ.

ಎಲ್ಲ 22 ಪಂದ್ಯಗಳಲ್ಲಿ ಫಲಿತಾಂಶ!
ಇದುವರೆಗೆ 22 ಅಹರ್ನಿಶಿ ಟೆಸ್ಟ್​ ಪಂದ್ಯಗಳು ನಡೆದಿದ್ದು, ಎಲ್ಲ ಪಂದ್ಯಗಳಲ್ಲೂ ಸ್ಪಷ್ಟ ಫಲಿತಾಂಶ ದಾಖಲಾಗಿವೆ. ಈ ಪೈಕಿ 5 ಪಂದ್ಯಗಳಲ್ಲಿ ಮಾತ್ರ 5ನೇ ದಿನದವರೆಗೂ ಆಟ ನಡೆದಿದೆ. 2 ಪಂದ್ಯಗಳು ಎರಡೇ ದಿನಗಳಲ್ಲಿ ಮುಗಿದಿವೆ. ಆಸೀಸ್​ 10ಕ್ಕಿಂತ ಅಧಿಕ ಅಹರ್ನಿಶಿ ಟೆಸ್ಟ್​ ಆಡಿರುವ ಏಕೈಕ ದೇಶವಾಗಿದೆ.

ಅಡಿಲೇಡ್​ನಲ್ಲೇ ಮೊದಲ ಪಿಂಕ್​ ಟೆಸ್ಟ್​!
ಅಡಿಲೇಡ್​ ಅಂಗಣದಲ್ಲೇ 2015ರ ನವೆಂಬರ್​ 27ರಿಂದ ಡಿಸೆಂಬರ್​ 1ರವರೆಗೆ ಮೊಟ್ಟಮೊದಲ ಅಹರ್ನಿಶಿ ಟೆಸ್ಟ್​ ಪಂದ್ಯ ನಡೆದಿತ್ತು. ನ್ಯೂಜಿಲೆಂಡ್​ ವಿರುದ್ಧದ ಆ ಪಂದ್ಯದಲ್ಲಿ ಆಸೀಸ್​ 3 ವಿಕೆಟ್​ಗಳಿಂದ ಗೆದ್ದಿತ್ತು.

ವೇಗದ ಬೌಲಿಂಗ್​ ಸ್ನೇಹಿ ಪಿಚ್​
ಪಿಂಕ್​ಬಾಲ್​ ಟೆಸ್ಟ್​ಗಳಲ್ಲಿ ಇದುವರೆಗೆ ವೇಗಿಗಳೇ ಪ್ರಾಬಲ್ಯ ಸಾಧಿಸುತ್ತ ಬಂದಿದ್ದಾರೆ. ಈ ಸಲವೂ ಅಡಿಲೇಡ್​ನಲ್ಲಿ ಅದೇ ಸಂಪ್ರದಾಯ ಮುಂದುವರಿಯುವ ನಿರೀಕ್ಷೆ ಇದೆ. ಭಾರತ&ಆಸೀಸ್​ 2ನೇ ಟೆಸ್ಟ್​ಗೆ ಅಡಿಲೇಡ್​ನಲ್ಲಿ ಸಿದ್ಧಗೊಂಡಿರುವ ಪಿಚ್​ ಇದರ ಮುನ್ಸೂಚನೆಯನ್ನು ನೀಡಿದೆ. ಅಡಿಲೇಡ್​ನಲ್ಲಿ ಈ ಹಿಂದೆ ಬ್ಯಾಟರ್​ಗಳು ಮೇಲುಗೈ ಸಾಧಿಸಿದ್ದರೂ, ಇಲ್ಲಿ ಪಿಂಕ್​ಬಾಲ್​ ಟೆಸ್ಟ್​ ಆಡಲಾರಂಭಿಸಿದ ಬಳಿಕ ವೇಗಿಗಳ ಸ್ವರ್ಗವಾಗಿ ಮಾರ್ಪಟ್ಟಿದೆ. ಹೊನಲು ಬೆಳಕಿನಲ್ಲಿ ಆಟ ನಡೆದಾಗ ಪಿಂಕ್​ಬಾಲ್​ ಭಿನ್ನವಾಗಿ ವರ್ತಿಸಿ ವೇಗಿಗಳಿಗೆ ಹೆಚ್ಚಿನ ನೆರವು ಒದಗಿಸಿದೆ. ಮಧ್ಯಾಹ್ನದ ನಂತರ ಆಟ ಶುರುವಾದಾಗ ಬ್ಯಾಟರ್​ಗಳಿಗೆ ಅನುಕೂಲವಿದ್ದರೂ, ಸೂರ್ಯ ಮುಳುಗಿದ ಬಳಿಕ ವೇಗಿಗಳೇ ಪ್ರಾಬಲ್ಯ ಸಾಧಿಸಿದ್ದಾರೆ.

ಅಡಿಲೇಡ್​ ತಲುಪಿದ ಭಾರತ
ಕ್ಯಾನ್​ಬೆರಾದಲ್ಲಿ ಪಿಂಕ್​ಬಾಲ್​ ಅಭ್ಯಾಸ ಪಂದ್ಯ ಆಡಿದ ಬಳಿಕ ಭಾರತ ತಂಡ 2ನೇ ಟೆಸ್ಟ್​ ಪಂದ್ಯಕ್ಕಾಗಿ ಸೋಮವಾರ ಅಡಿಲೇಡ್​ ತಲುಪಿದೆ. ಮಂಗಳವಾರದಿಂದ ಭಾರತ ತಂಡ ನೆಟ್ಸ್​ ಅಭ್ಯಾಸಕ್ಕಿಳಿಯುವ ನಿರೀಕ್ಷೆ ಇದೆ.

ಅಡಿಲೇಡ್​ಗೆ ಗಂಭೀರ್​ ಪ್ರಯಾಣ
ಪರ್ತ್​ ಟೆಸ್ಟ್​ ಬಳಿಕ ಕುಟುಂಬದ ತುರ್ತು ಕಾರಣಗಳಿಂದಾಗಿ ತವರಿಗೆ ಮರಳಿದ್ದ ಭಾರತ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಸೋಮವಾರ ಮತ್ತೆ ಆಸೀಸ್​ಗೆ ಪ್ರಯಾಣಿಸಿದ್ದಾರೆ. ಅವರು ಮಂಗಳವಾರ ಅಡಿಲೇಡ್​ನಲ್ಲಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಭಾರತ ತಂಡದ ಅಭ್ಯಾಸ ಪಂದ್ಯ ತಪ್ಪಿಸಿಕೊಂಡಿದ್ದ ಗಂಭೀರ್​, ಅಡಿಲೇಡ್​ ಟೆಸ್ಟ್​ಗೆ ಭಾರತ ತಂಡದ ಬ್ಯಾಟಿಂಗ್​ ಕ್ರಮಾಂಕ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇದೆ. ರಾಹುಲ್​ರನ್ನು ಆರಂಭಿಕರಾಗಿಯೇ ಉಳಿಸಿ, ರೋಹಿತ್​ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಗಂಭೀರ್​ ಕೂಡ ಒಲವು ತೋರುವರೇ ಎಂಬ ಕುತೂಹಲವಿದೆ.

ಆಸೀಸ್​ ತಂಡದಲ್ಲಿ ಒಡಕು ವರದಿ ನಿರಾಕರಿಸಿದ ಹೆಡ್​
ಆಸ್ಟ್ರೆಲಿಯಾ ತಂಡದ ಬ್ಯಾಟರ್ಸ್​ ಮತ್ತು ಬೌಲಿಂಗ್​ ವಿಭಾಗದ ನಡುವೆ ಒಡಕು ಮೂಡಿದೆ ಎಂಬವರ ವರದಿಯನ್ನು ಬ್ಯಾಟರ್​ ಟ್ರಾವಿಸ್​ ಹೆಡ್​ ಸೋಮವಾರ ತಳ್ಳಿಹಾಕಿದ್ದಾರೆ. ಪರ್ತ್​ ಟೆಸ್ಟ್​ನ 3ನೇ ದಿನದಾಟದ ಬಳಿಕ ವೇಗಿ ಜೋಶ್​ ಹ್ಯಾಸಲ್​ವುಡ್​ ತಂಡದ ಬ್ಯಾಟರ್​ಗಳನ್ನು ದೂರಿದ್ದರು. ಇದರ ಬೆನ್ನಲ್ಲೇ ಆಸೀಸ್​ ತಂಡದಲ್ಲಿ ಎರಡು ಗುಂಪುಗಳಿರುವ ವರದಿಯಾಗಿತ್ತು. ಆದರೆ ತಂಡದಲ್ಲಿ ಯಾವುದೇ ಒಡಕು ಇಲ್ಲ. ಬ್ಯಾಟರ್​ಗಳು ತಂಡದ ಬೌಲಿಂಗ್​ ವಿಭಾಗದ ಬೆಂಬಲ ಬಯಸುತ್ತಾರೆ. ಅದೇ ರೀತಿ ಬೌಲರ್​ಗಳೂ ತಂಡದ ಬ್ಯಾಟರ್​ಗಳಿಂದ ಉತ್ತಮ ನಿರ್ವಹಣೆಯನ್ನು ಬಯಸುತ್ತಾರೆ ಎಂದು ಹೆಡ್​ ಸ್ಪಷ್ಟಪಡಿಸಿದ್ದಾರೆ.

ನ್ಯೂಜಿಲೆಂಡ್​ಗೆ ಸೋಲುಣಿಸಿದ ಇಂಗ್ಲೆಂಡ್​; ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ರೇಸ್​ನಲ್ಲಿ ಭಾರತಕ್ಕೆ ಲಾಭ!

 

TAGGED:
Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…