ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್​ಗಳು 48 ಗಂಟೆಗಳಲ್ಲಿ ಸೋಲ್ಡ್​​ ಔಟ್​ !

ಮ್ಯಾಂಚೆಸ್ಟರ್​​: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್​​ ಪಂದ್ಯ ವೀಕ್ಷಿಸಲು ವಿಶ್ವದ ಕ್ರಿಕೆಟ್​​ ಅನೇಕ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದೇ 30 ರಿಂದ ವಿಶ್ವಕಪ್​​ ಮಹಾಸಮರ ಇಂಗ್ಲೆಂಡ್​ನಲ್ಲಿ ಆರಂಭವಾಗಲಿದ್ದು, ವಿಶ್ವದ ಪ್ರಮುಖ 10 ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ. ಭಾರತ ತಂಡ ಜೂನ್​​​ 16 ರಂದು ಪಾಕಿಸ್ತಾನವನ್ನು ಎದುರಿಸಲಿದೆ.

ಇಲ್ಲಿನ ಒಲ್ಡ್​​​​​​​​​​​ ಟ್ರಾಪೋರ್ಡ್​ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಕ್ರೀಡಾಂಗಣದ ಆಡಳಿತ ಮಂಡಳಿ ಟಿಕೆಟ್​​ ಬುಕ್ಕಿಂಗ್​​​​​​​​​​ ಶುರು ಮಾಡಿದ 48 ಗಂಟೆಗಳ ಒಳಗೆ ಎಲ್ಲ ಟಿಕೆಟ್​​ಗಳು ಖರೀದಿಯಾಗಿವೆ. ಭಾರತದಿಂದ ಹೆಚ್ಚಿನ ಟಿಕೆಟ್​​ಗಳು ಬುಕ್​​​ ಆಗಿವೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ವಿಶ್ವಕಪ್​​ಗೆ ಭಾರತ ಕ್ರಿಕೆಟ್​​ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ 15 ಆಟಗಾರರ ತಂಡವನ್ನು ಪ್ರಕಟ ಮಾಡಿದೆ. ಟೂರ್ನಿಗೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಟೀಂ ಇಂಡಿಯಾ ಇದೇ 28 ಮತ್ತು 25 ರಂದು ನಡೆಯುವ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್​​ ಮತ್ತು ಬಾಂಗ್ಲಾದೇಶವನ್ನು ಎದುರಿಸಿದರೆ, ಲೀಗ್​​ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಟ ನಡೆಸಲಿದೆ. (ಏಜನ್ಸೀಸ್​)