ಇಂಡೋ-ಪಾಕ್​ ವಿಶ್ವಕಪ್​ ಕದನಕ್ಕೂ ಮುನ್ನವೇ ಸೋಶಿಯಲ್​ ಮೀಡಿಯಾದಲ್ಲಿ ವಾರ್​ ಶುರು!

ನವದೆಹಲಿ: ವಿಶ್ವ ಕ್ರಿಕೆಟ್​ ಮತ್ತೊಂದು ಹೈವೋಲ್ಟೇಜ್​ ಪಂದ್ಯವನ್ನು ಎದುರು ನೋಡುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಹೋರಾಡುವುದನ್ನು ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಜನ ಕಾಯುತ್ತಿದ್ದಾರೆ. ವಿಶ್ವಕಪ್​ನಲ್ಲಿ ಇಂದು ನಡೆಯುವ ಪಂದ್ಯ ಬದ್ಧವೈರಿಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದ್ದು, ವಿರಾಟ್​ ಕೊಹ್ಲಿ ಹಾಗೂ ಸರ್ಫರಾಜ್​ ಅಹಮ್ಮದ್​ ಪಡೆಗಳ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ವಿಶ್ವಕಪ್​​ನ ರಣಾಂಗಣದಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಮುಖಿಯಾಗಲಿದ್ದು, ಇಡೀ ಜಗತ್ತಿನ ಚಿತ್ತ ಈ ಪಂದ್ಯದ ಮೇಲೆ ನೆಟ್ಟಿದೆ. ಇಂಡೋ-ಪಾಕ್​ ಕ್ರಿಕೆಟ್ ಪಂದ್ಯ ಎಂದರೆ ಅದೊಂದು ಯುದ್ಧದ ರೀತಿಯಲ್ಲಿ ಬಿಂಬಿತವಾಗುತ್ತದೆ. ವೈರಿ ರಾಷ್ಟ್ರದ ವಿರುದ್ಧ ಸೈನಿಕರು ಯುದ್ಧ ಭೂಮಿಯಲ್ಲಿ ಹೇಗೆ ಕಾದಾಡುತ್ತಾರೋ ಅದೇ ರೀತಿ ಉಭಯ ತಂಡದ ಆಟಗಾರರಲ್ಲಿ ಹೋರಾಟದ ಕಿಚ್ಚು, ಆವೇಶವಿರುತ್ತೆ. ಇತ್ತ ದೇಶವಾಸಿಗಳ ಹೃದಯಬಡಿತವೂ ಹೆಚ್ಚಾಗಿರುತ್ತೆ.

ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಯ್ತು ಟ್ರೆಂಡ್​
ಇಂಡೋ-ಪಾಕ್​ ಕ್ರಿಕೆಟ್​ ಕದನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​, ಕಮೆಂಟ್​, ಡಿಬೇಟ್​ ಹೀಗೆ ನಾನಾ ರೀತಿಯಲ್ಲಿ ಕ್ರೀಡಾಭಿಮಾನಿಗಳು ಸಕ್ರೀಯರಾಗಿದ್ದು, ತಮ್ಮ ತಮ್ಮ ತಂಡಗಳ ಸಮರ್ಥನೆಗಿಳಿದಿದ್ದಾರೆ. ಅಲ್ಲದೆ, ತಂಡಕ್ಕೆ ಶುಭಕೋರುತ್ತಿದ್ದಾರೆ. ಕೆಲವರಂತು ಮೀಮ್ಸ್​ಗಳ ಮೂಲಕ ಇಂಡಿಯಾ-ಪಾಕ್​ ಪಂದ್ಯವನ್ನು ತಮ್ಮದೇ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. ಪಂದ್ಯ ಫಲಿತಾಂಶದ ನಂತರ ಏನಾಗಬಹುದು ಎಂಬುದನ್ನು ಊಹಿಸುತ್ತಿದ್ದಾರೆ. ಅವುಗಳ ಒಂದು ಝಲಕ್​ ಅನ್ನು ನೀವಿಲ್ಲಿ ಕಾಣಬಹುದಾಗಿದೆ.

ಮ್ಯಾಂಚೆಸ್ಟರನ್​ ಓಲ್ಡ್ ಟ್ರಾಫರ್ಡ್​ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *