Wednesday, 12th December 2018  

Vijayavani

Breaking News

ಈ ವರ್ಷ ಸಹಜ ಮುಂಗಾರು: ಹವಾಮಾನ ಇಲಾಖೆ

Monday, 16.04.2018, 6:54 PM       No Comments

ನವದೆಹಲಿ: ದೇಶಾದ್ಯಂತ ಈ ವರ್ಷ ಸಹಜ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ಜೂನ್​ನಿಂದ ಸೆಪ್ಟೆಂಬರ್​ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಶೇ. 97 ರಷ್ಟು ಸಾಮಾನ್ಯ ಮಳೆ ಬೀಳಲಿದೆ. ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಕೆ.ಜೆ. ರಮೇಶ್‌ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಮಾನ್ಸೂನ್​ ಕೇರಳಕ್ಕೆ ಆಗಮಿಸುವ ದಿನಾಂಕವನ್ನು ಪ್ರಕಟಿಸಲಾಗುವುದು. ಮಳೆಯ ಪ್ರಮಾಣ ಶೇ. 96 ರಿಂದ ಶೇ. 104ರ ಮಧ್ಯೆ ಇದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತಿದೆ ಎಂದು ರಮೇಶ್​ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top