ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ಎದುರು ಭಾರತಕ್ಕೆ 18 ರನ್​ಗಳ ಸೋಲು: ಧೋನಿ, ಜಡೇಜಾ ಹೋರಾಟ ವ್ಯರ್ಥ

ಮ್ಯಾಂಚೆಸ್ಟರ್​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನಲ್ಲಿ ಭಾರತ ತಂಡ ನ್ಯೂಜಿಲೆಂಡ್​ ಎದುರು 18 ರನ್​ಗಳಿಂದ ಸೋಲನುಭವಿಸಿತು. ಈ ಮೂಲಕ ಕಿವೀಸ್​ ಪಡೆ ಸತತ 2ನೇ ಬಾರಿಗೆ ಫೈನಲ್​​ ಪ್ರವೇಶಿಸಿತು.

ಇಲ್ಲಿನ ಎಮಿರೇಟ್ಸ್​​​ ಓಲ್ಡ್​​ ಟ್ರಾಫೋರ್ಡ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್​ನ 240 ರನ್​ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು. ತಂಡ 49.3 ಓವರ್​ಗಳಲ್ಲಿ ಆಲೌಟ್​​ ಆಗುವ ಮೂಲಕ 221 ರನ್​ ಗಳಿಸಿ ಪರಾಭವಗೊಂಡಿತು.

ಭಾರತದ ಕೆ.ಎಲ್​ ರಾಹುಲ್(1) ​, ರೋಹಿತ್​​ ಶರ್ಮಾ(1) , ವಿರಾಟ್​ ಕೊಹ್ಲಿ(1), ದಿನೇಶ್​​ ಕಾರ್ತಿಕ್​​ (6), ರಿಷಬ್​​ ಪಂತ್​ (32) ಹಾಗೂ ಹಾರ್ದಿಕ್​​ ಪಾಂಡ್ಯ (32) ವಿಕೆಟ್​ ಕಳೆದುಕೊಂಡರು.
ಬಳಿಕ ಕ್ರೀಸ್​ಗೆ ಬಂದ ಮಹೇಂದ್ರ ಸಿಂಗ್​ ಧೋನಿ (50) ಹಾಗೂ ರವೀಂದ್ರ ಜಡೇಜಾ (77) ಉತ್ತಮ ಜತೆಯಾಟವಾಡಿದರೂ ಕೊನೆಗೆ ತಂಡ ಮುಗ್ಗರಿಸಿತು.
ನ್ಯೂಜಿಲೆಂಡ್​ನ ಮ್ಯಾಟ್​​ ಹೆನ್ರಿ 3, ಮಿಚೆಲ್​​ ಸ್ಯಾಂಟ್ನರ್​, ಟ್ರೆಂಟ್​​ ಬೌಲ್ಟ್​​ ತಲಾ 2 ವಿಕೆಟ್​​​ ಪಡೆದರೆ, ಲಾಕಿ ಫರ್ಗೂಸನ್​​ ಮತ್ತು ಜೇಮ್ಸ್​ ನೇಶಾಮ್​​​​ ತಲಾ ಒಂದು ವಿಕೆಟ್​ ಪಡೆದು ತಂಡದ ಗೆಲುವಿನ ರೂವಾರಿಗಳಾಗಿ ಮಿಂಚಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *