ಇಂದು ಭಾರತ-ಲಂಕಾ ಎರಡನೇ ಏಕದಿನ: ಮುನ್ನಡೆ ಹಂಬಲದಲ್ಲಿ ರೋಹಿತ್ ಪಡೆ

ಕೊಲಂಬೊ: ಗೆಲುವಿನ ಹೊಸ್ತಿಲಲ್ಲಿ ಎಡವಿ ಸರಣಿಯಲ್ಲಿ ಮುನ್ನಡೆಯ ಅವಕಾಶ ಕೈಚೆಲ್ಲಿರುವ ಭಾರತ ಹಾಗೂ ಆತಿಥೇಯ ಶ್ರೀಲಂಕಾ ತಂಡಗಳು ಭಾನುವಾರ ಎರಡನೇ ಏಕದಿನ ಪಂದ್ಯದಲ್ಲಿ ಎದುರಾಗಲಿವೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮ ಪಡೆ ಮುನ್ನಡೆ ಸಾಧಿಸಿದರೆ, ಸರಣಿ ಸೋಲುವ ಅಪಾಯದಿಂದಲೂ ಪಾರಾಗಲಿದೆ.

ಸತತ ಎರಡು (ಟಿ20 ಸೇರಿ) ಪಂದ್ಯಗಳಲ್ಲಿ ಭಾರತ ಹಾಗೂ ಲಂಕಾ ತಂಡಗಳು ಟೈ ಸಾಧಿಸಿವೆ. ಮೊದಲ ಪಂದ್ಯದಲ್ಲಿ 130 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಟೀಮ್ ಇಂಡಿಯಾ ನಂತರ ಸ್ಪಿನ್ನರ್‌ಗಳ ದಾಳಿಗೆ ಲಯ ತಪ್ಪಿತು. ಟಿ20 ಸರಣಿ ಸೋಲಿನ ಬಳಿಕ ನಿಕಟ ಪೈಪೋಟಿ ನೀಡಿರುವ ಶ್ರೀಲಂಕಾ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ರೋಹಿತ್ ಅರ್ಧಶತಕ ಸಿಡಿಸಿ ಲಯದಲ್ಲಿ ಕಾಣಿಸಿಕೊಂಡರೆ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ವಿಲರಾದರು. ವಾಷಿಂಗ್ಟನ್ ಸುಂದರ್‌ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿದ ಯೋಜನೆ ಲಿಸಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಹಾಗೂ ಕೊಹ್ಲಿ ಅವರಂಥ ಆಟಗಾರರನ್ನು ಹೊಂದಿರುವ ಟೀಮ್ ಇಂಡಿಯಾ ಬಲಿಷ್ಠವಾಗಿದೆ.

ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ವಿರಾಮದ ಬಳಿಕವೂ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ವಾನಿಂದು ಹಸರಂಗ, ಯುವ ಆಲ್ರೌಂಡರ್ ದುನಿತ್ ವೆಲ್ಲಲಗೆ ಮತ್ತೆ ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಸವಾಲೊಡ್ಡಲಿದ್ದಾರೆ. ಟೀಮ್ ಇಂಡಿಯಾ ಸ್ಪಿನ್ನರ್‌ಗಳು ಮೊದಲ ಪಂದ್ಯದಲ್ಲಿ ಎಸೆದ 30 ಓವರ್‌ಗಳಲ್ಲಿ 126 ರನ್ ಬಿಟ್ಟುಕೊಟ್ಟರೆ, ಲಂಕಾ 38 ಓವರ್‌ಗಳಲ್ಲಿ 167 ರನ್ ಮಾತ್ರ ನೀಡಿತು. ಕುಲದೀಪ್ ಯಾದವ್ ಜತೆಗೆ ವಾಷಿಂಗ್ಟನ್ ಸುಂದರ್ ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆಗಳಿವೆ.

ಇನ್ನು ಟೀಮ್ ಇಂಡಿಯಾ ವಿರುದ್ಧ ಆಡಿದ ಹಿಂದಿನ ಮೂರು ಪಂದ್ಯಗಳ ಪೈಕಿ ಒಮ್ಮೆ ಮಾತ್ರ ಮೂರಂಕಿ ಮೊತ್ತ ದಾಖಲಿಸಿರುವ ಶ್ರೀಲಂಕಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆದರೆ ಪ್ರಮುಖ ವೇಗಿಗಳ ಗೈರಿನ ನಡುವೆ ನಡುವೆ ಯುವ ಬೌಲರ್‌ಗಳು ಸಾಧಾರಣ ಮೊತ್ತ ರಕ್ಷಿಸಿಕೊಂಡಿದ್ದಾರೆ.

ಟೀಮ್ ನ್ಯೂಸ್
ಭಾರತ: ಆಡುವ ಬಳಗದಲ್ಲಿ ಬದಲಾವಣೆ ಸಾಧ್ಯತೆ ವಿರಳ. ಟಿ20 ಸರಣಿ ಹಾಗೂ ಮೊದಲ ಪಂದ್ಯದಲ್ಲಿ ಸತತವಾಗಿ ಆಡಿರುವ ಮೊಹಮದ್ ಸಿರಾಜ್ ವಿಶ್ರಾಂತಿ ಕಲ್ಪಿಸಿ, ಆಲ್ರೌಂಡರ್ ರಿಯಾನ್ ಪರಾಗ್ ಅಥವಾ ವೇಗಿ ಹರ್ಷಿತ್ ರಾಣಾಗೆ ಅವಕಾಶ ಲಭಿಸಬಹುದು.

ಶ್ರೀಲಂಕಾ: ಮೊದಲ ಪಂದ್ಯದ ಪ್ರದರ್ಶನ ಆಧರಿಸಿ ಹನ್ನೊಂದರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಆದರೆ ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ನೀಡಲು ಹಿಂದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಮೊಹಮದ್ ಶಿರಾಜ್ ಸ್ಥಾನ ಕಳೆದುಕೊಳ್ಳುವ ನಿರೀಕ್ಷೆ ಇದೆ.

ಆರಂಭ: ಮಧ್ಯಾಹ್ನ 2.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…