ಟಿ20 ವಿಶ್ವಕಪ್​ನಲ್ಲಿ ಇಂದು ಭಾರತ-ಇಂಗ್ಲೆಂಡ್​ ಸೆಮಿಫೈನಲ್​ ಫೈಟ್​; 10 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರುವ ತವಕದಲ್ಲಿ ರೋಹಿತ್​ ಬಳಗ

blank

ಗಯಾನಾ: ಹಾಲಿ ಏಕದಿನ-ಟೆಸ್ಟ್​ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ ಎದುರು ಗೆದ್ದು ಸೇಡು ತೀರಿಸಿಕೊಂಡಿರುವ ಟೀಮ್​ ಇಂಡಿಯಾ,17 ವರ್ಷಗಳ ಬಳಿಕ ಚುಟುಕು ಕ್ರಿಕೆಟ್​ ವಿಶ್ವಕಪ್​ ಟ್ರೋಫಿ ಎತ್ತಿಹಿಡಿಯಲು 2 ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ಪ್ರಾವಿಡೆನ್ಸ್​ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಎರಡನೇ ಸೆಮಿೈನಲ್​ನಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡನ್ನು ಎದುರಿಸಲಿದ್ದು, ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ರೋಹಿತ್​ ಶರ್ಮ ಪಡೆ 10 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರುವ ತವಕದಲ್ಲಿದೆ. ಜತೆಗೆ 2022ರ ಸೆಮಿೈನಲ್​ನಲ್ಲಿ ಆಂಗ್ಲರೆದುರು ಅನುಭವಿಸಿದ್ದ ನಿರಾಸೆಗೆ ಸೇಡು ತೀರಿಸಿಕೊಳ್ಳುವ ಅವಕಾಶವನ್ನೂ ಹೊಂದಿದೆ.

ಟೂರ್ನಿಯ ಲೀಗ್​ ಹಾಗೂ ಸೂಪರ್​&8 ಹಂತದ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ತಂಡ ಸೆಮೀಸ್​ನಲ್ಲೂ ಸರ್ವಾಂಗೀಣ ನಿರ್ವಹಣೆಯೊಂದಿಗೆ ಪ್ರಶಸ್ತಿ ಸುತ್ತಿಗೇರುವ ಹಂಬಲದಲ್ಲಿದೆ. ಇದುವರೆಗೆ ಟೂರ್ನಿಯಲ್ಲಿನ ಪ್ರದರ್ಶನ ಆಧಾರದಲ್ಲಿ ಭಾರತವೇ ಫೇವರಿಟ್​ ಎನಿಸಿದೆ. ಆದರೆ ಇಂಗ್ಲೆಂಡ್​ ತಂಡ ಸೂಪರ್​&8 ಹಂತದಲ್ಲಿ ಭರ್ಜರಿ ಕಂಬ್ಯಾಕ್​ ಮಾಡುವ ಮೂಲಕ ಲಯಕ್ಕೆ ಮರಳಿದ್ದು, ನಿಕಟ ಪೈಪೋಟಿ ನೀಡುವ ನಿರೀಕ್ಷೆ ಇದೆ.
ಐಸಿಸಿ ಟಿ20 ರ್ಯಾಂಕಿಂಗ್​ನಲ್ಲಿ ನಂಬರ್​ ಒನ್​ ತಂಡವಾಗಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ ರೋಹಿತ್​ ಪಡೆ ಇಂಗ್ಲೆಂಡ್​ ಎದುರು ಬಲಿಷ್ಠ ಎನಿಸಿದೆ. ಟಿ20 ಬ್ಯಾಟರ್​ಗಳ ರ್ಯಾಂಕಿಂಗ್​ನಲ್ಲಿ ಸೂರ್ಯಕುಮಾರ್​ ಯಾದವ್​ ಹಾಗೂ ಫಿಲ್​ ಸಾಲ್ಟ್​ ಕ್ರಮವಾಗಿ 2, 3ನೇ ಸ್ಥಾನದಲ್ಲಿದ್ದಾರೆ.

ಭಾರತಕ್ಕೆ ಬ್ಯಾಟಿಂಗ್​ ವಿಭಾಗದಲ್ಲಿ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಫಾರ್ಮ್​ ಚಿಂತಿಸುವಂತೆ ಮಾಡಿದೆ. ಆದರೆ ನಾಕೌಟ್​ನಲ್ಲಿ ಲಯ ಕಂಡುಕೊಳ್ಳುವ ನಿರೀಕ್ಷೆ ಇದೆ. ರೋಹಿತ್​ ಶರ್ಮ (191 ರನ್​) ಹಿಂದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ಮೂಲಕ ಫಾಮ್​ರ್ಗೆ ಮರಳಿದ್ದು, ಟೀಮ್​ ಇಂಡಿಯಾ ಪಾಳಯದಲ್ಲಿ ಆತ್ಮವಿಶ್ವಾಸ ವೃದ್ಧಿಸಿದ್ದಾರೆ. ಶಿವಂ ದುಬೆ ನಿರೀಕ್ಷೆಗೆ ತಕ್ಕ ಆಟವಾಡಿಲ್ಲ. ಆದರೂ ಉಪಯುಕ್ತ ರನ್​ ಕೊಡುಗೆಯೊಂದಿಗೆ ನೆರವಾಗಿದ್ದಾರೆ. ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ತಂಡಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ಜಸ್​ಪ್ರೀತ್​ ಬುಮ್ರಾ, ಅರ್ಷದೀಪ್​ ಸಿಂಗ್​ ಜತೆಗೆ ಕುಲದೀಪ್​ ಯಾದವ್​ ಒಳಗೊಂಡ ಬೌಲಿಂಗ್​ ವಿಭಾಗ ವೈವಿಧ್ಯತೆಯಿಂದ ಕೂಡಿದೆ.

ಇನ್ನು ಇಂಗ್ಲೆಂಡ್​ ಲೀಗ್​ ಹಂತದಲ್ಲೇ ಹೊರಬೀಳಲಿದೆ ಎಂಬ ಪರಿಸ್ಥಿತಿಯ ನಡುವೆ ಮೊದಲ ತಂಡವಾಗಿ ಉಪಾಂತ್ಯಕ್ಕೇರಿತ್ತು. ಆರಂಭಿಕರಾದ ಜೋಸ್​ ಬಟ್ಲರ್, ಫಿಲ್​ ಸಾಲ್ಟ್​ ಭರ್ಜರಿ ಲಯದಲ್ಲಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಅಸ್ಥಿರ ನಿರ್ವಹಣೆಯಿಂದ ಬಳಲುತ್ತಿದೆ. ಬೌಲಿಂಗ್​ನಲ್ಲೂ ಜೋ್ರಾ ಅರ್ಚರ್​, ಕ್ರಿಸ್​ ಜೋರ್ಡಾನ್​ ಹಾಗೂ ಆದಿಲ್​ ರಶೀದ್​ ಅವರಿಂದ ನೈಜ ಸವಾಲು ಎದುರಾಗಲಿದೆ.

ಭಾರತ ಗೆದ್ದರೆ ಟಿ20 ವಿಶ್ವಕಪ್​ನಲ್ಲಿ 3ನೇ ಬಾರಿ ಫೈನಲ್​ಗೇರಿದ ಸಾಧನೆ ಮಾಡಲಿದೆ. 2007ರಲ್ಲಿ ಚಾಂಪಿಯನ್​ ಆಗಿದ್ದರೆ, 2014ರಲ್ಲಿ ರನ್ನರ್​ಅಪ್​ ಆಗಿತ್ತು. ಇಂಗ್ಲೆಂಡ್​ ಗೆದ್ದರೆ 4ನೇ ಬಾರಿ ಫೈನಲ್​ಗೇರಿದ ಸಾಧನೆ ಮಾಡಲಿದೆ. ಈ ಮುನ್ನ 2010, 2016, 2022ರಲ್ಲೂ ಫೈನಲ್​ಗೇರಿತ್ತು.

ಪಿಚ್​ ರಿಪೋರ್ಟ್​
ಪ್ರಾವಿಡೆನ್ಸ್​ ಸ್ಟೇಡಿಯಂ ಪಿಚ್​ ಇದುವರೆಗೆ ಸ್ಪಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡಿದೆ. ಜತೆಗೆ ತೀಕ್ಷ$್ಣವಾದ ತಿರುವು ಮತ್ತು ಕಡಿಮೆ ಬೌನ್ಸ್​ನಿಂದ ಕೂಡಿದೆ. ಹೈ ಸ್ಕೋರಿಂಗ್​ ಮೈದಾನವೂ ಇದಾಗಿದೆ. ಇದು ಭಾರತದ ಮೂವರು ಸ್ಪಿನ್ನರ್​ಗಳಾದ ಅಕ್ಷರ್​ ಪಟೇಲ್​, ಕುಲದೀಪ್​ ಯಾದವ್​ ಮತ್ತು ರವೀಂದ್ರ ಜಡೇಜಾಗೆ ಸರಿ ಹೊಂದಲಿದೆ ಎನ್ನಲಾಗಿದೆ. ಇಂಗ್ಲೆಂಡ್​ ಸಹ ರಶೀದ್​ ಜತೆಗೆ ಮೊಯಿನ್​ ಅಲಿ ಮತ್ತು ಲಿವಿಂಗ್​ಸ್ಟೋನ್​ ಸ್ಪಿನ್​ ದಾಳಿಯನ್ನು ಬಳಸಿಕೊಳ್ಳುವ ಆಯ್ಕೆ ಹೊಂದಿದೆ. ಸ್ಥಳಿಯ ಕಾಲಮಾನ ಬೆಳಗ್ಗೆ 10.30ರಿಂದ ಪಂದ್ಯ ನಡೆಯುವುದರಿಂದ ಪಿಚ್​ ವರ್ತನೆ ಊಹಿಸುವುದು ಕಷ್ಟ ಎನ್ನಲಾಗಿದೆ. ಹಾಲಿ ಟೂರ್ನಿಯಲ್ಲಿ ಈ ಅಂಗಣದಲ್ಲಿ ಬೆಳಗ್ಗೆ ನಡೆದ ಏಕೈಕ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡ ಪಪುವಾ ನ್ಯೂಗಿನಿ ವಿರುದ್ಧ 137 ರನ್​ ಚೇಸಿಂಗ್​ಗೆ ಕಠಿಣ ಪರಿಶ್ರಮ ಹಾಕಿತ್ತು.

ಟೀಮ್​ ನ್ಯೂಸ್​:
ಭಾರತ: ಗೆಲುವಿನ ಕಾಂಬಿನೇಷನ್​ನಲ್ಲಿ ಬದಲಾವಣೆಯ ಸಾಧ್ಯತೆ ವಿರಳ. ಮೂವರು ವೇಗಿಗಳು ಮತ್ತು ಮೂವರು ಸ್ಪಿನ್ನರ್​ಗಳು ಒಳಗೊಂಡ ಆರು ಮುಂಚೂಣಿ ಬೌಲಿಂಗ್​ ಆಯ್ಕೆಗಳೊಂದಿಗೆ ಸಮತೋಲನದಿಂದ ಕೂಡಿದೆ. ಪಿಚ್​ ಪರಿಸ್ಥಿತಿಯ ಜತೆಗೆ ಇಂಗ್ಲೆಂಡ್​ನ ಆರು ಬಲಗೈ ಬ್ಯಾಟರ್​ಗಳ ಎದುರು ರಿಸ್ಟ್​ ಸ್ಪಿನ್ನರ್​ ಯಜುವೇಂದ್ರ ಚಾಹಲ್​ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ರೋಹಿತ್​-ಕೊಹ್ಲಿ ಆರಂಭಿಕರಾಗಿ ಮುಂದುವರಿಯಲಿದ್ದಾರೆ.
ಇಂಗ್ಲೆಂಡ್​: ಸೂಪರ್​-8 ಹಂತದ ತಂಡದಲ್ಲಿ ಸಮತೋಲನ ಕಂಡುಕೊಂಡಿರುವ ಆಡುವ 11ರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಎನಿಸಿದೆ. ಬ್ಯಾಟಿಂಗ್​ ವಿಭಾಗವನ್ನು ಬಲಿಷ್ಠಗೊಳಿಸಲು ವಿಲ್​ ಜಾಕ್ಸ್​ ಪ್ರಮುಖ ಆಯ್ಕೆ ಎನಿಸಿದ್ದಾರೆ. ಅರೆಕಾಲಿಕ ಸ್ಪಿನ್ನರ್​ ಆಗಿಯೂ ನೆರವಾಗಬಲ್ಲರು.

ಮುಖಾಮುಖಿ: 23
ಭಾರತ: 12
ಇಂಗ್ಲೆಂಡ್​: 11
ವಿಶ್ವಕಪ್​ನಲ್ಲಿ: 4
ಭಾರತ: 2
ಇಂಗ್ಲೆಂಡ್​: 2

ಆರಂಭ: ರಾತ್ರಿ 8.00
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಸ್ನಿ ಹಾಟ್​ ಸ್ಟಾರ್​

ನಾಕೌಟ್​ ನಿರಾಸೆಗೆ ಅಂತ್ಯ?
ಟೀಮ್​ ಇಂಡಿಯಾ 19 ತಿಂಗಳ ಅಂತರದಲ್ಲಿ 3 ಐಸಿಸಿ ಟೂರ್ನಿಗಳ ನಾಕೌಟ್​ನಲ್ಲಿ ಎಡವಿದೆ. 2022ರ ನವೆಂಬರ್​ನಲ್ಲಿ ಟಿ20 ವಿಶ್ವಕಪ್​ ಸೆಮಿೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧದ ಸೋಲಿನೊಂದಿಗೆ ಆರಂಭಗೊಂಡ ನಾಕೌಟ್​ ನಿರಾಸೆ, ಬಳಿಕ ಆಸೀಸ್​ ವಿರುದ್ಧದ 2023ರ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಹಾಗೂ ಐಸಿಸಿ ಏಕದಿನ ವಿಶ್ವಕಪ್​ ಫೈನಲ್​ನಲ್ಲೂ ಮುಂದುವರಿಯಿತು. ಇಂಗ್ಲೆಂಡ್​ ವಿರುದ್ಧ ಸೋಲಿನೊಂದಿಗೆ ಆರಂಭಗೊಂಡ ನಾಕೌಟ್​ ಸೋಲಿನ ಸರಪಳಿ ಅದರ ವಿರುದ್ಧವೇ ಕಳಚುವ ಮೂಲಕ ಪ್ರಶಸ್ತಿ ಸುತ್ತಿಗೇರುವುದು ರೋಹಿತ್​ ಪಡೆ ಮುಂದಿರುವ ಪ್ರಮುಖ ಸವಾಲಾಗಿದೆ.

ಕಾಡುತ್ತಿದೆ ಮಳೆ ಭೀತಿ…
ಗಯಾನಾದಲ್ಲಿ ಬುಧವಾರ ಭಾರಿ ಮಳೆ ಸುರಿದಿದೆ. ಇದರಿಂದ 2ನೇ ಸೆಮಿೈನಲ್​ಗೆ ಮಳೆ ಭೀತಿ ಕಾಡುತ್ತಿದ್ದು, ಮೀಸಲು ದಿನದ ಸೌಲಭ್ಯವೂ ಇಲ್ಲ. ಹೆಚ್ಚುವರಿ 250 ನಿಮಿಷವನ್ನೂ ನೀಡಲಾಗಿದ್ದು, ಫಲಿತಾಂಶ ನಿರ್ಧರಿಸಲು ಉಭಯ ತಂಡಗಳು ಕನಿಷ್ಠ 10 ಓವರ್​ ಆಡುವುದು ಅಗತ್ಯವಾಗಿದೆ. ಮಳೆಯಿಂದ ಪಂದ್ಯ ರದ್ದಾದರೆ, ಸೂಪರ್​-8 ಹಂತದಲ್ಲಿ ಗುಂಪಿನ ಅಗ್ರಸ್ಥಾನಿಯಾಗಿರುವ ಟೀಮ್​ ಇಂಡಿಯಾ ಫೈನಲ್​ಗೇರಲಿದೆ.

ಡಕ್ವರ್ತ್​-ಲೂಯಿಸ್​ ನಿಯಮಾವಳಿ ರೂಪಿಸಿದ್ದ ಡಕ್ವರ್ತ್​ ಇನ್ನಿಲ್ಲ

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…