ಶಿರಸಿ: ಪ್ರಜಾಪ್ರಭುತ್ವಕ್ಕೆ ಜಗತ್ತನ್ನೇ ಒಗ್ಗೂಡಿಸುವ ಶಕ್ತಿ ಇದೆ. ಈ ಶಕ್ತಿಯನ್ನು ಭಾರತ ಜಗತ್ತಿಗೆ ತೋರಿಸಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ನೀಡಿದ ಶ್ರೇಷ್ಠ ಸಂವಿಧಾನದಿಂದಾಗಿ ಭಾರತ ಜಗತ್ತಿಗೇ ಗುರುವಾಗಿ ಬೆಳೆಯುತ್ತಿದೆ. ಸಂವಿಧಾನ ಎಲ್ಲರಿಗೂ ಸಮಾನತೆ ಹಕ್ಕು ನೀಡಿದೆ. ನಮ್ಮ ಸಂವಿಧಾನದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದರು.
ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಿಕೊಟ್ಟ ಸೈನ್ಯವನ್ನು ನಾವು ಅಭಿನಂದಿಸಬೇಕು. ನಮ್ಮಲ್ಲಿ ಶಾಂತಿ ಕದಡಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಸೈನಿಕರು, ಪೊಲೀಸ್ ವ್ಯವಸ್ಥೆ ತೋರಿದೆ. ನಮ್ಮ ರೈತರ ಶ್ರಮದಿಂದ ದೇಶದ ಆಹಾರ ಭದ್ರತೆಯ ಜತೆಗೆ ವಿದೇಶಕ್ಕೂ ಆಹಾರ ಪೂರೈಸುತ್ತಿದ್ದೇವೆ. ವಿಜ್ಞಾನಿಗಳ ಸೇವೆ ಅವಿಸ್ಮರಣೀಯ ಎಂದರು.
ಧ್ವಜಾರೋಹಣ ನೆರವೇರಿಸಿದ ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಮಾತನಾಡಿ, ವಿದ್ಯಾರ್ಥಿಗಳು ಭಾರತದ ಭವಿಷ್ಯ. ಕಠಿಣ ಪರಿಶ್ರಮದೊಂದಿಗೆ ಸಾಧನೆ ಮಾಡಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.
ಪೊಲೀಸ್ ಇಲಾಖೆ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಂಕೇತ ಹೆಗಡೆ, ಹರ್ಷಿತ ಜೋಗಳೇಕರ, ರಾಹುಲ ರಾಮನಟ್ಟಿ, ಪ್ರಜ್ವಲ ಜೋಗಳೇಕರಾರ್ಜುನ ರಾಮನಟ್ಟಿ, ಮಹಾದೇವ ಸಾಂಬಾಜಿ, ಸುಮಾಂಕ ಗೌಡ, ದಿಗಂತ ಹೆಗಡೆ, ಮಲ್ಲಿಕಾರ್ಜುನ ಹಿರೇಮಠ, ಸರಸ್ವತಿ ಹರಿಜನ, ಅಶೋಕ ಶೆಟ್ಟಿ, ವಿ.ಪಿ. ಹೆಗಡೆ ವೈಶಾಲಿ, ದಿನೇಶ ನೇತ್ರೆಕರ ಇತರರನ್ನು ಸ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ನಗರ ಯೋಜನಾ ಪ್ರಟಧಿಕಾರ ಅಧ್ಯಕ್ಷ ಜಗದೀಶ ಗೌಡ, ತಹಸೀಲ್ದಾರ ಶ್ರೀಧರ ಮುಂದಲಮನಿ ಇತರರಿದ್ದರು.