PHOTOS| 6ನೇ ಹಂತದ ಮತದಾನದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ ದೇಶದ ಪ್ರಮುಖ ನಾಯಕರು

ನವದೆಹಲಿ: 2019ನೇ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ದೇಶದ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಬಿರುಸಿನಿಂದ ನಡೆಯುತ್ತಿದೆ. ರಾಷ್ಟ್ರದ ಪ್ರಮುಖ ರಾಜಕೀಯ ನಾಯಕರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಭಾರತದ ಮೊದಲ ಪ್ರಜೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ರಾಷ್ಟ್ರಪತಿ ಭವನದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಪಶ್ಚಿಮ ದೆಹಲಿಯ ಪಾಂಡವ ನಗರದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್​​​​​​ ಸಿಸೋಡಿಯಾ ಮತದಾನ ಮಾಡಿ ಸಂಭ್ರಮಿಸಿದರು.

ಹರಿಯಾಣ ಮುಖ್ಯಮಂತ್ರಿ ಮನೋಹರ್​​ ಲಾಲ್​​​​​​​​ ಕತ್ತಾರ್​​​​​​​​ ಅವರು ಕರ್ನಲ್​​ನಲ್ಲಿ ಮತ ಹಾಕಿದರು. ದೆಹಲಿಯ ಈಶಾನ್ಯ ಬಿಜೆಪಿ ಅಭ್ಯರ್ಥಿ ಯಮುನಾ ವಿಹಾರದಲ್ಲಿ ವೋಟ್​​ ಹಾಕಿದರೆ, ಪೂರ್ವ ದೆಹಲಿಯ ಅಮ್​​ ಆದ್ಮಿ ಪಕ್ಷದ ಅಭ್ಯರ್ಥಿ ಅತಿಷಿ ಅವರು ಜಂಗ್​​​ಪುರದ ಕಮಲ ನೆಹರು ಸರ್ಕಾರಿ ಸರ್ವೋದಯ ವಿದ್ಯಾಲಯದಲ್ಲಿ ವೋಟ್​​​​ ಮಾಡಿದರು.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ದೆಹಲಿಯ ಔರಂಗಜೇಬ್​ ಲೇನ್​ನಲ್ಲಿರುವ ಎನ್​ಪಿ ಸಿನಿಯರ್​ ಸೆಕೆಂಡರಿ ಸ್ಕೂಲ್​ ಮತಗಟ್ಟೆಯಲ್ಲಿ ಮತದಾನ ಮಾಡಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಸಿವಿಲ್​ ಲೈನ್ಸ್​ನ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಇನ್ನೂ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​​​​​​​​​ ಅವರು ಔರಂಗಜೇಬ್​ ಲೇನ್​ನಲ್ಲಿರುವ ಎನ್​ಸಿ ಸೀನಿಯರ್​ ಸೆಕೆಂಡರಿ ಸ್ಕೂಲ್​ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಹರಿಯಾಣ ಸೋನಿಪತ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಭೂಪಿಂದರ್​ ಸಿಂಗ್​ ಮತ್ತು ರೋಹ್ಟಕ್​​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ದೀಪೆಂದರ್​ ಸಿಂಗ್​ ಹೂಡ ಅವರು ರೋಹ್ಟಕ್​ನ ಮತಗಟ್ಟೆಯಲ್ಲಿ ಕುಟುಂಬ ಸಮೇತ ಮತ ಹಾಕಿದರು. ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ದೆಹಲಿಯ ನಿರ್ಮಾಣ್ ಭವನ್​ ಮತಗಟ್ಟೆಯಲ್ಲಿ ವೋಟ್​​​ ಮಾಡಿದರು.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಅವರು ತಮ್ಮ ಪತ್ನಿ ರೋಮಿ ಹಾಗೂ ಮಗಳು ಅಮಿಯಾ ಅವರೊಂದಿಗೆ ಮತ ಚಲಾಯಿಸಲು ಡಿಪಿಎಸ್​ ಮಥುರಾ ರಸ್ತೆಯಲ್ಲಿರುವ ಮತಗಟ್ಟೆಗೆ ಆಗಮಿಸಿದರು. (ಏಜನ್ಸೀಸ್​)