2020ರ ಒಲಂಪಿಕ್ಸ್​​​ಗೆ ಭಾರತ ಹಾಕಿ ತಂಡ ಅರ್ಹತೆ ಪಡೆದುಕೊಳ್ಳಲು ಸಜ್ಜು

ದೆಹಲಿ: 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್​​​​​​ಗೆ ಅರ್ಹತೆ ಪಡೆಯಲು ಭಾರತ ಹಾಕಿ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.

ಇದೇ ಜೂನ್​​​ 6 ಒಡಿಶಾದ ಭುವನೇಶ್ವರಿಯಲ್ಲಿ ಆರಂಭವಾಗಲಿರುವ (ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್​​) ಎಫ್​​​​ಐಎಚ್​​​​​​​​​​​​ ಫೈನಲ್​​ನಲ್ಲಿ ಭಾರತ ತಂಡ ಸೇರಿದಂತೆ ವಿಶ್ವದ ಪ್ರಮುಖ ಏಳು ತಂಡಗಳು ಪಾಲ್ಗೊಳ್ಳಲಿವೆ. ಈ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನದೊಂದಿಗೆ ಟ್ರೋಫಿ ಜಯಿಸಿದರೆ, ಮಾತ್ರ 2020ರ ಒಲಂಪಿಕ್ಸ್​​ಗೆ ಅರ್ಹತೆ ಪಡೆಯಲಿದೆ.

ಕಳೆದ ವರ್ಷ ನಡೆದ ಏಷ್ಯನ್​ ಕ್ರೀಡಾಕೂಟದಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದರೆ ಒಲಂಪಿಕ್ಸ್​​ಗೆ ಅರ್ಹತೆ ಪಡೆದುಕೊಳ್ಳುತಿತ್ತು. ಆದರೆ, ಸೆಮಿಫೈನಲ್​​ನಲ್ಲಿ ಮಲೇಷ್ಯಾ ಎದುರು ಸೋತು ಕಂಚಿನ ಪದಕ ಗೆದ್ದಿತ್ತು. ವಿಶ್ವದ ಐದನೇ ಶ್ರೇಯಾಂಕಿತ ಸ್ಥಾನದಲ್ಲಿರುವ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಎ ಗುಂಪಿನಲ್ಲಿ ಭಾರತ ಸೇರಿದಂತೆ ಪೋಲೆಂಡ್​​, ರಷ್ಯಾ, ಮತ್ತು ಉಜ್ಬೇಕಿಸ್ತಾನ ತಂಡಗಳಿದ್ದರೆ, ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಜಪಾನ್​​​, ಯುಎಸ್​ಎ ಮತ್ತು ಮೆಕ್ಸಿಕೊ ತಂಡಗಳು ಸ್ಥಾನ ಪಡೆದಿವೆ.

ಭಾರತ ತಂಡ ಇತ್ತೀಚಿಗೆ ನಡೆದ ಸುಲ್ತಾನ್​ ಆಜ್ಲಾ ಕಪ್​​ನಲ್ಲಿ ರನ್ನರ್​​ ಆಫ್​​ ಆಗಿದ್ದರೆ, 2018ನೇ ಕಾಮನ್​ವೆಲ್ತ್​ ಹಾಗೂ ಏಷ್ಯನ್​ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿತ್ತು. ಈ ಟೂರ್ನಿಯಲ್ಲಿ ತಂಡದ ಎಲ್ಲ ಆಟಗಾರರು ಎದುರಾಳಿ ತಂಡಗಳೊಂದಿಗೆ ಯಶಸ್ವಿ ಹೋರಾಟ ನಡೆಸುವ ಮೂಲಕ ಗೆಲುವು ಸಾಧಿಸುವ ಹಂಬಲದಲ್ಲಿದ್ದಾರೆ. (ಏಜನ್ಸೀಸ್​)

Leave a Reply

Your email address will not be published. Required fields are marked *