Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಭಾರತಕ್ಕೆ ಏಕದಿನ ಸರಣಿಯ ಸವಾಲು

Thursday, 12.07.2018, 3:04 AM       No Comments

ನಾಟಿಂಗ್​ಹ್ಯಾಂ: 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ಧತೆಯಂತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಸಜ್ಜಾಗಿದೆ. ಆಂಗ್ಲರ ನಾಡಿನ ಪ್ರವಾಸದ ಮೊದಲ ಹಂತವಾದ ಟಿ20 ಸರಣಿ ಗೆದ್ದಿರುವ ಭಾರತ ಮತ್ತೊಂದು ಸರಣಿ ಗೆಲುವಿನ ಹಂಬಲದಲ್ಲಿದೆ. ಮೂರು ಏಕದಿನ ಸರಣಿಯ ಮೊದಲ ಪಂದ್ಯ ಗುರುವಾರ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯಲಿದೆ. ಮುಂದಿನ ವರ್ಷ ಇದೇ ಅವಧಿಯಲ್ಲಿ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್​ಗೆ ತಯಾರಿ ನಡೆಸುವ ದೃಷ್ಟಿಯಿಂದ ಈ ಸರಣಿ ಭಾರತದ ಪಾಲಿಗೆ ಮಹತ್ವ ಪಡೆದಿದೆ.

ಕಳೆದ ಒಂದು ವರ್ಷದಿಂದ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ರಿಸ್ಟ್ ಸ್ಪಿನ್ ಜೋಡಿ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಪಾಲಿಗೆ ಈ ಸರಣಿ ನಿಜವಾದ ಅಗ್ನಿಪರೀಕ್ಷೆಯಾಗಿದೆ. ಏಕದಿನ ಕ್ರಿಕೆಟ್​ನ ವಿಶ್ವ ನಂ.1 ಪಟ್ಟ ಹೊಂದಿರುವ ಇಂಗ್ಲೆಂಡ್ ತಂಡ ಈ ಜೋಡಿಗೆ ಸವಾಲಾಗಿದೆ. ಜೋಸ್ ಬಟ್ಲರ್, ಜೇಸನ್ ರಾಯ್, ಅಲೆಕ್ಸ್ ಹ್ಯಾಲ್ಸ್, ಜಾನಿ ಬೇರ್​ಸ್ಟೋ, ಎವೊಯಿನ್ ಮಾರ್ಗನ್ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆಗೆ ಕಡಿವಾಣ ಹಾಕುವುದೇ ಈ ಜೋಡಿ ಮುಂದಿರುವ ದೊಡ್ಡ ಸವಾಲು. 2015ರ ಏಕದಿನ ವಿಶ್ವಕಪ್ ಬಳಿಕ ಭರ್ಜರಿ ನಿರ್ವಹಣೆ ತೋರುತ್ತಿರುವ ಇಂಗ್ಲೆಂಡ್ ತಂಡ, ಟಿ20 ಸರಣಿಯಲ್ಲಿ ಅನುಭವಿಸಿರುವ ಸೋಲಿಗೆ ಸೇಡು ತೀರಿಸಿಕೊಳ್ಳುವ ಛಲದಲ್ಲಿದೆ.

ಪಂದ್ಯ ಆರಂಭ: ಸಂಜೆ 5 ಗಂಟೆಗೆ

ನೇರಪ್ರಸಾರ: ಸೋನಿ ನೆಟ್​ವರ್ಕ್

ಸಂಭಾವ್ಯ ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಕೆಎಲ್ ರಾಹುಲ್, ಸುರೇಶ್ ರೈನಾ, ಎಂಎಸ್ ಧೋನಿ (ವಿಕೀ), ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್.

ಇಂಗ್ಲೆಂಡ್: ಮಾರ್ಗನ್ (ನಾಯಕ), ಜೇಸನ್ ರಾಯ್, ಜಾನಿ ಬೇರ್​ಸ್ಟೋ, ಜೋಸ್ ಬಟ್ಲರ್ (ವಿಕೀ), ಮೊಯಿನ್ ಅಲಿ/ಬೆನ್ ಸ್ಟೋಕ್ಸ್, ಜೋ ರೂಟ್, ಜೇಕ್ ಬಾಲ್, ಡೇವಿಡ್ ವಿಲ್ಲಿ/ಟಾಮ್ ಕುರಾ›ನ್, ಅಲೆಕ್ಸ್ ಹ್ಯಾಲ್ಸ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್.

ಕೊಹ್ಲಿಗೆ ಹನ್ನೊಂದರ ಆಯ್ಕೆ ಗೊಂದಲ

ಮುಂಬರುವ ವಿಶ್ವಕಪ್​ಗೆ ತಂಡ ಕಟ್ಟಲು ಸಜ್ಜಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಆಡುವ ಹನ್ನೊಂದರ ಆಯ್ಕೆ ಹಾಗೂ ಬ್ಯಾಟಿಂಗ್ ಕ್ರಮಾಂಕವೇ ತಲೆನೋವಾಗಿದೆ. ಟಿ20 ಸರಣಿಯಲ್ಲಿ ಐರ್ಲೆಂಡ್ ವಿರುದ್ಧ 70 ಹಾಗೂ ಇಂಗ್ಲೆಂಡ್ ವಿರುದ್ಧ ಅಜೇಯ 101 ರನ್ ಬಾರಿಸಿದ್ದ ಕನ್ನಡಿಗ ರಾಹುಲ್ ಹಾಗೂ ನಾಯಕ ಕೊಹ್ಲಿ ನಡುವೆಯೇ ಮೂರನೇ ಕ್ರಮಾಂಕಕ್ಕೆ ಪೈಪೋಟಿ ಏರ್ಪಟ್ಟಿದೆ. ಒಂದು ವೇಳೆ ರಾಹುಲ್ 3ನೇ ಕ್ರಮಾಂಕದಲ್ಲಿ ಇಳಿದರೆ, ಕೊಹ್ಲಿಗೆ ನಾಲ್ಕನೇ ಕ್ರಮಾಂಕ ಅನಿವಾರ್ಯವಾಗಲಿದೆ. ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಆರಂಭಿಕರಾದರೆ, ಧೋನಿ, ಸುರೇಶ್ ರೈನಾ ಹಾಗೂ ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಜೋಡಿ ಸ್ಪಿನ್ ಮೋಡಿಗೆ ಸಿದ್ಧವಾಗಿದ್ದಾರೆ. ಹೆಚ್ಚುವರಿ ವೇಗಿ ಆಡಿಸಿದರೆ ಸಿದ್ಧಾರ್ಥ್ ಕೌಲ್ ಅಥವಾ ಶಾರ್ದೂಲ್ ಠಾಕೂರ್ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯಲಿದ್ದಾರೆ.

2015ರ ವಿಶ್ವಕಪ್ ಬಳಿಕ ಇಂಗ್ಲೆಂಡ್ ಆಡಿರುವ 69 ಪಂದ್ಯಗಳಲ್ಲಿ 31 ಬಾರಿ 300ಕ್ಕೂ ಅಧಿಕ ಮೊತ್ತ ಪೇರಿಸಿದೆ. ಇದರಲ್ಲಿ 23 ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಜತೆಗೆ 11 ಬಾರಿ 350ಕ್ಕೂ ಹೆಚ್ಚು ರನ್​ಗಳಿಸಿದ್ದು, 3 ಬಾರಿ 400ಕ್ಕೂ ಅಧಿಕ ರನ್ ಗಳಿಸಿದೆ.

ಧೋನಿ ಇನ್ನು 33 ರನ್ ಬಾರಿಸಿದರೆ ಏಕದಿನದಲ್ಲಿ 10 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 12ನೇ ಹಾಗೂ ಭಾರತದ 4ನೇ ಆಟಗಾರ ಎನಿಸಲಿದ್ದಾರೆ. ಸದ್ಯ ಧೋನಿ 318 ಪಂದ್ಯಗಳಿಂದ 9967 ರನ್ ಬಾರಿಸಿದ್ದಾರೆ.

ವಿಶ್ವದಾಖಲೆಯ ಸ್ಟೇಡಿಯಂ

ಕಳೆದ ತಿಂಗಳು ಟ್ರೆಂಟ್​ಬ್ರಿಡ್ಜ್ ಮೈದಾನ ಕ್ರಿಕೆಟ್ ಲೋಕದ ಗಮನಸೆಳೆದಿತ್ತು. ಜೂನ್ 19 ರಂದು ನಡೆದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ, ಏಕದಿನ ಇತಿಹಾಸದ ವಿಶ್ವದಾಖಲೆ ಮೊತ್ತ 6 ವಿಕೆಟ್​ಗೆ 481 ಸಿಡಿಸಿತ್ತು. ಜತೆಗೆ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 242 ರನ್​ಗಳಿಂದ ಸೋಲಿನ ರುಚಿ ತೋರಿಸಿತ್ತು. ವಿಶ್ವ ದಾಖಲೆ ನಿರ್ವಣಗೊಂಡ ಒಂದು ತಿಂಗಳೊಳಗೆ 2ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಈ ಮೈದಾನದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

Back To Top