Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ, ಭಾರತ 687ಕ್ಕೆ ಡಿಕ್ಲೇರ್

Friday, 10.02.2017, 3:58 PM       No Comments

ಹೈದರಾಬಾದ್: ನಾಯಕ ವಿರಾಟ್ ಕೊಹ್ಲಿ (204ರನ್, 24ಬೌಂಡರಿ) ದ್ವಿಶತಕ ಹಾಗೂ ವೃದ್ಧಿಮಾನ್ ಸಾಹ ಶತಕ (106*ರನ್, 7ಬೌಂಡರಿ, 2ಸಿಕ್ಸರ್)ದ ನೆರವಿನಿಂದ ಭಾರತ ತಂಡ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನ 6 ವಿಕೆಟ್​ಗೆ 687ರನ್ ಗಳಿಸಿ ಡಿಕ್ಲೇರ್ ಘೊಷಿಸಿತು. 166ನೇ ಓವರ್​ನ ಅಂತ್ಯದಲ್ಲಿ ಸಾಹ ಶತಕ ಪೂರೈಸುತ್ತಿದ್ದಂತೆ ನಾಯಕ ಕೊಹ್ಲಿ ಡಿಕ್ಲೇರ್ ಪ್ರಕಟಿಸಿದರು.

ಮೊದಲನೇ ದಿನಾಂತ್ಯಕ್ಕೆ 3 ವಿಕೆಟ್​ಗೆ 356ರನ್ ಗಳಿಸಿದ್ದ ಭಾರತ ತಂಡ ಎರಡನೇ ದಿನದಾಟದಲ್ಲಿಯೂ ಉತ್ತಮ ರನ್ ಕಲೆಹಾಕಿತು. ವಿರಾಟ್ ಕೊಹ್ಲಿ ಮತ್ತು ಅಜೀಂಕ್ಯಾ ರಹಾನೆ (82) ಜೋಡಿ ಉತ್ತಮ ಪ್ರದರ್ಶನವನ್ನೇ ನೀಡಿತು. ರಹಾನೆ ಶತಕದ ಅಂಚಲ್ಲಿ ವಿಕೆಟ್ ಒಪ್ಪಿಸಿದರೆ, ಕೊಹ್ಲಿ ದ್ವಿಶತಕ ಪೂರೈಸಿದ ಬಳಿಕ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ವೃದ್ಧಿಮಾನ್ ಸಾಹ ಮತ್ತು ಆರ್. ಅಶ್ವಿನ್ (34) ಕೆಲಕಾಲ ಜತೆಯಾಗಿ ತಂಡದ ಮೊತ್ತ ಹೆಚ್ಚಿಸಿದರು. ಅಶ್ವಿನ್ ಅವರ ನಿರ್ಗಮನದ ಬಳಿಕ ಬಂದ ರವೀಂದ್ರ ಜಡೇಜ (60*) ಉತ್ತಮ ಸಾಥ್ ನೀಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. 166ನೇ ಓವರ್ ಅಂತ್ಯಕ್ಕೆ ಡಿಕ್ಲೇರ್ ಘೊಷಿಸಲಾಯಿತು.

ಬಾಂಗ್ಲಾಕ್ಕೆ ಆರಂಭಿಕ ಆಘಾತ

ಕೊಹ್ಲಿ ಪಡೆಯ ಬೃಹತ್ ಮೊತ್ತ ಬೆನ್ನತ್ತಿರುವ ಬಾಂಗ್ಲಾದೇಶ ಆರಂಭಿಕ ಸೌಮ್ಯ ಸರ್ಕಾರ್ (15) ಅವರನ್ನು ಬೇಗ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. 2ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 14 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿದೆ. ತಮಿಮ್ ಇಕ್ಬಾಲ್ (24*) ಮತ್ತು ಮೊಮಿನ್ ಉಲ್ ಹಕ್ (1*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕೊಹ್ಲಿ ವಿಶ್ವದಾಖಲೆ

204ರನ್ ಗಳಿಸಿದ ನಾಯಕ ವಿರಾಟ್ ಕೊಹ್ಲಿ ಈ ಸಾಧನೆ ಮೂಲಕ ಸತತ ನಾಲ್ಕು ಸರಣಿಗಳಿಂದ ನಾಲ್ಕು ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದರು. ಕೊಹ್ಲಿ 246 ಎಸೆತಗಳಲ್ಲಿ ಡಬಲ್ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಕಳೆದ ವರ್ಷ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲ ದ್ವಿಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ನಂತರ ನ್ಯೂಜಿಲೆಂಡ್ ವಿರುದ್ಧ ಭಾರತದ ನೆಲದಲ್ಲಿಯೇ ಈ ಸಾಧನೆ ಮಾಡಿದ್ದರು. ಭಾರತದ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ವಿರುದ್ಧವೂ ಸಹ ಆಕರ್ಷಕ 235 ರನ್ ಗಳಿಸಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧ 204 ರನ್ ಗಳಿಸುವ ಮೂಲಕ ಸತತ 4 ಟೆಸ್ಟ್ ಸರಣಿಗಳಲ್ಲಿ ತಲಾ ಒಂದು ದ್ವಿಶತಕ ಗಳಿಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ದ್ವಿಶತಕಗಳ ಪಟ್ಟಿ:

  • ವೆಸ್ಟ್ ಇಂಡೀಸ್ – 200 ರನ್
  • ನ್ಯೂಜಿಲೆಂಡ್ – 211 ರನ್
  • ಇಂಗ್ಲೆಂಡ್ – 235 ರನ್
  • ಬಾಂಗ್ಲಾದೇಶ – 204 ರನ್

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 166 ಓವರ್​ನಲ್ಲಿ 6 ವಿಕೆಟ್​ಗೆ 687ರನ್ (ಕೆ.ಎಲ್. ರಾಹುಲ್ 2, ಮುರಳಿ ವಿಜಯ್ 108, ಚೇತೇಶ್ವರ ಪೂಜಾರ 83, ವಿರಾಟ್ ಕೊಹ್ಲಿ 204, ರಹಾನೆ 82, ವೃದ್ಧಿಮಾನ್ ಸಾಹ 106*, ಅಶ್ವಿನ್ 34, ರವೀಂದ್ರ ಜಡೇಜಾ 60*, ಟಸ್ಕಿನ್ ಅಹ್ಮದ್ 127ಕ್ಕೆ 1, ಮಿರಜ್ 165ಕ್ಕೆ2, ಇಸ್ಲಾಂ 156ಕ್ಕೆ3)

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top