ವಿವಾದವನ್ನು ಮೈಮೇಲೆ ಎಳೆದುಕೊಂಡ ಟೀಂ ಇಂಡಿಯಾ ನಾಯಕ ಕೊಹ್ಲಿ !…ವಿಡಿಯೋ ವೈರಲ್​

ಮುಂಬೈ: ಭಾರತೀಯ ಕ್ರಿಕೆಟ್​ ತಂಡದ ನಾಯಕ, ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ ಈಗ ತಮ್ಮ ಮಾತಿನಿಂದ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇಂಗ್ಲೆಂಡ್​ ಹಾಗೂ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳನ್ನು ಇಷ್ಟಪಡುವವರು ಭಾರತದಲ್ಲೇಕೆ ವಾಸವಾಗಿದ್ದೀರಿ? ಅಲ್ಲಿಯೇ ಹೋಗಿ ಇರಿ ಎಂದು ಕೊಹ್ಲಿ ಹೇಳಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಕ್ಷೇಪ ವ್ಯಕ್ತವಾಗಿದೆ.
ವಿರಾಟ್​ ಕೊಹ್ಲಿ ತಮ್ಮ ಒಂದು ಅಧಿಕೃತ ಆ್ಯಪ್​ಗಾಗಿ ರೆಕಾರ್ಡಿಂಗ್​ ಮಾಡುತ್ತಿದ್ದರು. ಈ ವೇಳೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿದ ಪೋಸ್ಟ್​, ಫೋಟೋಗಳಿಗೆ ಬಂದ ಲೈಕ್ಸ್​, ಕಾಮೆಂಟ್​ಗಳನ್ನು ಓದಿದ್ದಾರೆ. ಅದರಲ್ಲಿ ಓರ್ವ, ಬ್ಯಾಟಿಂಗ್‌ನಲ್ಲಿ ಕೊಹ್ಲಿಯನ್ನು ಅತಿಯಾಗಿ ಹೊಗಳುತ್ತಾರೆ. ಆದರೆ ನನಗೆ ಅವರಲ್ಲೇನೂ ವಿಶೇಷತೆ ಕಾಣಿಸುವುದಿಲ್ಲ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಆಟ್​ಗಾರರ ಬ್ಯಾಟಿಂಗ್​ ನೋಡುವಾಗ ತುಂಬ ಸಂತೋಷವಾಗುತ್ತದೆ ಎಂದು ಕಮೆಂಟ್​ ಮಾಡಿದ್ದ.

ಅದನ್ನು ಓದಿದ ಕೊಹ್ಲಿ, ಪರವಾಗಿಲ್ಲ, ಆದರೆ ನೀವೇಕೆ ಭಾರತದಲ್ಲಿ ವಾಸವಾಗಿದ್ದೀರಿ ಎಂದು ಅರ್ಥವಾಗುತ್ತಿಲ್ಲ. ನಮ್ಮ ದೇಶದಲ್ಲಿ ಇದ್ದು ಇನ್ನೊಂದು ದೇಶವನ್ನು ಪ್ರೀತಿಸುವ ಬದಲು, ಅಲ್ಲಿಯೇ ಹೋಗಬಹುದಲ್ಲ. ನೀವು ನನ್ನನ್ನು ಇಷ್ಟಪಡುತ್ತಿಲ್ಲ ಎಂಬ ಕಾರಣಕ್ಕೆ ನನಗೇನೂ ಬೇಸರವಿಲ್ಲ. ಆದರೆ ನಮ್ಮ ದೇಶದಲ್ಲಿ ಯಾಕಿದ್ದೀರಾ? ನಿಮ್ಮ ಆದ್ಯತೆಗಳನ್ನು ಸರಿಯಾಗಿ ಗುರುತಿಸಿಕೊಳ್ಳಿ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದೆ

https://twitter.com/twitter/statuses/1059718366288637953

Leave a Reply

Your email address will not be published. Required fields are marked *