<< ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ಟೀಂ ಇಂಡಿಯಾ ಕ್ಯಾಪ್ಟನ್ >>
ವಿಶಾಖಪಟ್ಟಣ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕ ದಿನ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅತಿ ಕಡಿಮೆ ಇನಿಂಗ್ಸ್ಗಳಲ್ಲಿ ಅಂದರೆ 205 ಇನಿಂಗ್ಸ್ಗಳಲ್ಲಿ 10 ಸಾವಿರ ರನ್ ಪೂರೈಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಈ ಮೂಲಕ ಟೀಂ ಇಂಡಿಯಾದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 81 ರನ್ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಗಡಿ ದಾಟುವ ಮೂಲಕ ದಾಖಲೆ ನಿರ್ಮಿಸಿದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 13 ಮತ್ತು ಭಾರತದ 5ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು.
ಈ ಮೊದಲು ಸಚಿನ್ ತೆಂಡುಲ್ಕರ್ 259 ಇನಿಂಗ್ಸ್ಗಳಲ್ಲಿ 10 ಸಾವಿರ ರನ್ ಗಡಿ ದಾಟುವ ಮೂಲಕ ದಾಖಲೆ ನಿರ್ಮಿಸಿದ್ದರು.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಸ್ವದೇಶಿ ನೆಲದಲ್ಲಿ ಅತ್ಯಂತ ವೇಗವಾಗಿ 4000 ರನ್ ಗಡಿ ದಾಟಿದ ದಾಖಲೆಯನ್ನೂ ನಿರ್ಮಿಸಿದರು. ಕೊಹ್ಲಿ ಈ ಮೈಲಿಗಲ್ಲನ್ನು ಕೇವಲ 78 ಇನಿಂಗ್ಸ್ಗಳಲ್ಲಿ ದಾಟುವ ಮೂಲಕ ಸಚಿನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ತೆಂಡುಲ್ಕರ್ 92 ಇನಿಂಗ್ಸ್ಗಳಲ್ಲಿ 4000 ರನ್ ಗಳಿಸಿದ್ದರು. (ಏಜೆನ್ಸೀಸ್)
🚨🚨 Reigning Supremacy #KingKohli 👑@imVkohli becomes the FASTEST BATSMAN to score 10000 ODI runs.
👏🔥🔥🔥 pic.twitter.com/2YMoFtr2L1
— BCCI (@BCCI) October 24, 2018