ಕಟಕ್: ಹದಿನಾರರ ಹರೆಯದ ಬ್ಯಾಟುಗಾರ್ತಿ ಶೆಫಾಲಿ ವರ್ಮ (89*ರನ್, 48 ಎಸೆತ, 15 ಬೌಂಡರಿ, 2 ಸಿಕ್ಸರ್) ಸ್ಪೋಟಕ ಆಟದ ನೆರವಿನಿಂದ ಭಾರತ ಸಿ ತಂಡ ಮಹಿಳೆಯರ ಟಿ20 ಚಾಲೆಂಜರ್ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಿದೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ ಸಾರಥ್ಯದ ಭಾರತ ಸಿ ತಂಡ ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿದ್ದ ಭಾರತ ಬಿ ತಂಡಕ್ಕೆ 8 ವಿಕೆಟ್ಗಳಿಂದ ಸೋಲುಣಿಸಿತು. ಬಾರಾಬತಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ಬಿ ತಂಡ ಕನ್ನಡತಿ ವಿಆರ್ ವನಿತಾ (25) ಮತ್ತು ಪೂಜಾ ವಸ್ತ್ರಾಕರ್ (43*) ಉಪಯುಕ್ತ ಬ್ಯಾಟಿಂಗ್ನಿಂದ 6 ವಿಕೆಟ್ಗ 131 ರನ್ ಪೇರಿಸಿತು. ಪ್ರತಿಯಾಗಿ ಭಾರತ ಸಿ ತಂಡ ಶೆಫಾಲಿ ಬಿರುಸಿನ ಆಟ ಮತ್ತು ಮೊದಲ ವಿಕೆಟ್ಗೆ ಮಾಧುರಿ ಮೆಹ್ತಾ (20) ಜತೆಗೆ ಕೂಡಿಹಾಕಿದ 77ರನ್ಗಳ ಭದ್ರ ಅಡಿಪಾಯದಿಂದ 15.2 ಓವರ್ಗಳಲ್ಲೇ 2 ವಿಕೆಟ್ಗೆ 135 ರನ್ ಪೇರಿಸಿ ಜಯಿಸಿತು. ಈ ಮೂಲಕ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಸ್ಮೃತಿ ಮಂದನಾ ಸಾರಥ್ಯದ ಭಾರತ ಬಿ ವಿರುದ್ಧ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು.
ಭಾರತ ಬಿ: 6 ವಿಕೆಟ್ಗೆ 131 (ವಿಆರ್ ವನಿತಾ 25, ಸ್ಮೃತಿ 3, ಜೆಮೀಮಾ 10, ರಿಚಾ 15, ರವಿ ಕಲ್ಪನಾ 4, ಅನುಜಾ ಪಾಟೀಲ್ 20, ಪೂಜಾ ವಸ್ತ್ರಾಕರ್ 43*, ಮನಾಲಿ ದಕ್ಷಿಣಿ 15ಕ್ಕೆ 3, ರಾಜೇಶ್ವರಿ 24ಕ್ಕೆ 1). ಭಾರತ ಸಿ: 15.2 ಓವರ್ಗಳಲ್ಲಿ 2 ವಿಕೆಟ್ಗೆ 135 (ಮಾಧುರಿ 20, ಶೆಫಾಲಿ 89*, ವೇದಾ 15, ಶಿಖಾ ಪಾಂಡೆ 31ಕ್ಕೆ 1).