ಎರಡನೇ ಟೆಸ್ಟ್​: ನಾಲ್ಕು ವಿಕೆಟ್​ ನಷ್ಟಕ್ಕೆ 308 ರನ್​ ಗಳಿಸಿದ ಭಾರತ

ಹೈದರಾಬಾದ್​: ಎರಡನೇ ಮತ್ತು ಕೊನೆಯ ಟೆಸ್ಟ್ ಎರಡನೇ ದಿನ ದಾಟದಲ್ಲಿ ಭಾರತ ತಂಡವು ನಾಲ್ಕು ವಿಕೆಟ್​ಗಳ ನಷ್ಟದೊಂದಿಗೆ 308 ರನ್​ಗಳನ್ನು ಗಳಿಸಿದೆ.

ಮೊದಲ ದಿನ ಅತ್ಯುತ್ತಮವಾಗಿ ಬ್ಯಾಟಿಂಗ್​ ಮಾಡಿ ಗಮನ ಸೆಳೆದಿದ್ದ ಪ್ರವಾಸಿ ವೆಸ್ಟ್​ ಇಂಡೀಸ್​ ತಂಡ ಎರಡನೇ ದಿನದ ಬೆಳಗಿನ ಅವಧಿಯ ಪ್ರಾರಂಭದಲ್ಲೇ 311 ರನ್​ ಗಳಿಗೆ ಆಲೌಟಾಯಿತು.

ಮೊದಲ ದಿನದ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ 295 ರನ್​ ಗಳಿಸಿದ್ದ ವೆಸ್ಟ್​ ಇಂಡೀಸ್​ ತಂಡ ಎರಡನೇ ದಿನ ಕೇವಲ 16 ರನ್​ ಗಳಿಸುವ ವೇಳೆಗೆ ಉಳಿದ 3 ವಿಕೆಟ್​ ಕೆಳೆದುಕೊಂಡಿತು. ಭಾರತದ ಪರ ಉಮೇಶ್​ ಯಾದವ್​ 88 ರನ್​ ನೀಡಿ 6 ವಿಕೆಟ್​ ಪಡೆದರು.

ಮೊದಲ ಇನಿಂಗ್ಸ್​ ಆರಂಭಿಸಿದ ಭಾರತ ಸದ್ಯ ನಾಲ್ಕು ವಿಕೆಟ್​ಗಳ ನಷ್ಟದೊಂದಿಗೆ 81 ಓವರ್​ಗಳಲ್ಲಿ 308 ರನ್​ ಗಳಿಸಿ ವಿಂಡೀಸ್​ ತಂಡಕ್ಕಿಂತಲೂ ಮೂರು ರನ್​ಗಳ ಹಿಂದಿದೆ.

ಭಾರತದ ಪರ ಪೃಥ್ವಿ ಷಾ 70 ರನ್​ ಗಳಿಸಿ ಮಿಂಚಿದರು. ಕನ್ನಡಿಗ ಕೆ.ಎಲ್​ ರಾಹುಲ್​ ಕೇವಲ 4 ರನ್​ಗಳಿಗಷ್ಟೇ ಸೀಮಿತರಾದರು. ರಹಾನೆ 75 ಮತ್ತು ರಿಷಭ್​ ಪಂಥ್​ 85 ರನ್​ಗಳಿಸಿ ಸ್ಕ್ರೀಸ್​ನಲ್ಲಿದ್ದಾರೆ. ನಾಯಕ ಕೊಹ್ಲಿ 45 ರನ್​ ಗಳಿಸಿ ಔಟಾದರು.

ಮೈದಾನಕ್ಕೆ ಇಳಿಯದ ಶಾರ್ದೂಲ್​

ಮೊದಲ ದಿನದಾಟದ ವೇಳೆ ತೊಡೆಸಂಧು ಗಾಯದಿಂದಾಗಿ ಮೈದಾನದಿಂದ ಹೊರನಡೆದಿದ್ದ ಮುಂಬೈನ ಯುವ ವೇಗಿ ಶಾರ್ದೂಲ್​ ಠಾಕೂರ್​ ಎರಡನೇ ದಿನ ಮೈದಾನಕ್ಕೆ ಇಳಿದಿಲ್ಲ. (ಏಜೆನ್ಸೀಸ್​)

2ನೇ ಟೆಸ್ಟ್​ನಲ್ಲಿ ವಿಂಡೀಸ್ ​ಪ್ರತಿರೋಧ