ವೈಟ್​ಹೌಸ್​ನಲ್ಲಿ ದೀಪಾವಳಿ ಸಂಭ್ರಮ

ವಾಷಿಂಗ್ಟನ್: ಭಾರತೀಯರು ಅತ್ಯುತ್ತಮ ವ್ಯಾಪಾರಿ ಮನೋಭಾವ ಹೊಂದಿರುವವರು. ಚೌಕಾಶಿ ಮಾಡುವುದರಲ್ಲಿ ನಿಸ್ಸೀಮರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ಆಯೋಜನೆಗೊಂಡಿದ್ದ ದೀಪಾವಳಿ ಹಬ್ಬ ಸಮಾರಂಭ ಉದ್ಘಾಟಿಸಿದ ಬಳಿಕ ಮಾತನಾಡಿ, ಭಾರತದೊಂದಿಗೆ ಅಮೆರಿಕ ಗಾಢವಾದ ಸ್ನೇಹ ಹೊಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಆಪ್ತ ಸ್ನೇಹಿತ. ಭಾರತದೊಂದಿಗೆ ಆರೋಗ್ಯಕರ ವ್ಯಾಪಾರ ಸಂಬಂಧ ಹೊಂದಲು ಯತ್ನಿಸುತ್ತಿದ್ದೇವೆ. ಅವರು ಅತ್ಯುತ್ತಮ ವ್ಯಾಪಾರಿ ಮನೋಭಾವ ಹೊಂದಿರುವವರು ಎಂದು ಟ್ರಂಪ್ ಹೇಳಿದರು.

ಹಿಂದುಗಳ ಮರೆತ ಟ್ರಂಪ್: ದೀಪಾವಳಿ ಆಚರಿಸಿದ ಟ್ರಂಪ್, ಹಿಂದುಗಳನ್ನು ಮರೆತು ಬೌದ್ಧರು, ಜೈನರು ಮತ್ತು ಸಿಖ್ಖರು ಮಾತ್ರ ಇದನ್ನು ಪವಿತ್ರದಿನವಾಗಿ ಆಚರಿಸುತ್ತಾರೆ ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು. ಟ್ವಿಟರ್​ನಲ್ಲಿ ಈ ಬಗ್ಗೆ ಭಾರಿ ಆಕ್ಷೇಪ ವ್ಯಕ್ತವಾದ ಬಳಿಕ ಮೊದಲ ಟ್ವೀಟ್ ಅನ್ನು ಡಿಲೀಟ್ ಮಾಡಿದ ಟ್ರಂಪ್, ಬಳಿಕ ಹೊಸದಾಗಿ ಟ್ವೀಟ್ ಮಾಡಿ, ವಿವಾದವನ್ನು ತಣ್ಣಗಾಗಿಸಿದರು.