17.7 C
Bengaluru
Wednesday, January 22, 2020

ತಿಣುಕಾಡಿ ಗೆದ್ದ ಟೀಮ್ ಇಂಡಿಯಾ

Latest News

ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ತೂಕ ಬಿಟ್ಟು ಎಲ್ಲವೂ ಓಕೆ

ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ...

ಅಂಧರಿಗೆ ವರದಾನ ಆ್ಯನಿ

ಅಂಧರಿಗಾಗಿ ಬ್ರೖೆಲ್ ಲಿಪಿ ಇದ್ದರೂ, ಇಡೀ ತರಗತಿಯ ಮಕ್ಕಳಿಗೆ ಒಟ್ಟಿಗೇ ಹೇಳಿಕೊಡುವುದು ಶಿಕ್ಷಕರಿಗೆ ಸವಾಲಿನ ಕೆಲಸವೇ ಸರಿ. ಒಬ್ಬ ವಿದ್ಯಾರ್ಥಿ ಐದು ನಿಮಿಷಗಳಷ್ಟೇ...

ರೈತರಿಗೆ ತಟ್ಟಿದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ

ಶ್ರೀಕಾಂತ್ ಅಕ್ಕಿ ಬಳ್ಳಾರಿ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ ಈಗ ರಾಜ್ಯದ ಭತ್ತ ಬೆಳೆಗಾರರಿಗೂ...

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಪಂಕ್ಚರ್​ ಹಾಕುತ್ತಿದ್ದವರ ಮೇಲೆ ಲಾರಿ ಹರಿದು ಮೂವರು ಸಾವು

ಬೀದರ್: ಲಾರಿ ಹರಿದು ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೀದರ್ ತಾಲೂಕಿನ ರಾಷ್ಟೀಯ ಹೆದ್ದಾರಿ 09ರ ಮಿನಕೇರಾ ಕ್ರಾಸ್ ಬಳಿ ಬುಧವಾರ ನಸುಕಿನ...

ಕೈ ಕಿತ್ತಾಟ ತೀವ್ರ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಪಕ್ಷದ ಎರಡು ಬಣಗಳ ನಡುವೆ ಹಲವು ವಾರಗಳಿಂದ ನಡೆಯುತ್ತಿರುವ ಶೀತಲ ಸಮರ ತೀವ್ರಗೊಂಡಿದ್ದು, ತಮಗೆ ಸಿಗದ್ದು...

ಕೋಲ್ಕತ: ಬ್ಯಾಟಿಂಗ್​ಗೆ ಕಠಿಣವಾಗಿದ್ದ ಪಿಚ್​ನಲ್ಲಿ ಸಾಧಾರಣ ಮೊತ್ತವನ್ನು ಬೆನ್ನಟ್ಟುವಾಗ ಸಾಕಷ್ಟು ಆತಂಕದ ಕ್ಷಣಗಳನ್ನು ಎದುರಿಸಿದ ಭಾರತ, ಚುಟುಕು ಕ್ರಿಕೆಟ್ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ. 2014ರ ಬಳಿಕ ಭಾರತ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ವಿಂಡೀಸ್ ವಿರುದ್ಧ ಗೆಲುವು ದಾಖಲಿಸಿದೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡ, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ (13ಕ್ಕೆ 3) ಬೌಲಿಂಗ್ ಮೂಲಕ ಪ್ರವಾಸಿ ತಂಡವನ್ನು 8 ವಿಕೆಟ್​ಗೆ 109 ರನ್​ಗಳಿಗೆ ನಿಯಂತ್ರಿಸಿತು. ಪ್ರತಿಯಾಗಿ ಭಾರತ ತಂಡ 45 ರನ್ ಗಳಿಸುವ ವೇಳೆ 4 ವಿಕೆಟ್ ಕಳೆದುಕೊಂಡರೂ, ದಿನೇಶ್ ಕಾರ್ತಿಕ್ (31*) ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ್ದರಿಂದ 17.5 ಓವರ್​ಗಳಲ್ಲಿ 5 ವಿಕೆಟ್​ಗೆ 110 ರನ್ ಪೇರಿಸಿ ಜಯ ಕಂಡಿತು. ಇದು ಟಿ20ಯಲ್ಲಿ ವಿಂಡೀಸ್ ವಿರುದ್ಧದ 9ನೇ ಪಂದ್ಯದಲ್ಲಿ ಭಾರತಕ್ಕೆ 3ನೇ ಗೆಲುವು.

ಸವಾಲಿನ ಪಿಚ್​ನಲ್ಲಿ ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತಕ್ಕೆ, ವಿಂಡೀಸ್ ವೇಗಿ ಒಶಾನೆ ಥಾಮಸ್ ಮುಳ್ಳಾದರು. ಹೊಸ ಚೆಂಡಿನಲ್ಲಿ ಅದ್ಭುತ ಎಸೆತಗಳ ಮೂಲಕ ರೋಹಿತ್ ಶರ್ಮಗೆ ಅಚ್ಚರಿ ಮೂಡಿಸಿದ ಥಾಮಸ್, ಮೊದಲ ಓವರ್​ನಲ್ಲಿಯೇ ವಿಕೆಟ್ ಪಡೆಯುವಲ್ಲಿ ಯಶ ಕಂಡರು. 1 ಬೌಂಡರಿ ಬಾರಿಸಿದ್ದ ರೋಹಿತ್ ಶರ್ಮರನ್ನು ಓವರ್​ನ ಕೊನೆಯ ಎಸೆತದಲ್ಲಿ ಔಟ್ ಮಾಡಿದರು. ಅಂಪೈರ್ ಇದನ್ನು ನಿರಾಕರಿಸಿದರು. ವಿಂಡೀಸ್, ಡಿಆರ್​ಎಸ್ ಮೂಲಕ ಈ ವಿಕೆಟ್ ಪಡೆದುಕೊಂಡಿತು. ಆ ಬಳಿಕ ಧವನ್​ರನ್ನು ಥಾಮಸ್ ಕಾಡಿದರು. ಈಗಾಗಲೇ ಏಕದಿನದಲ್ಲಿ ಎರಡು ಬಾರಿ ಥಾಮಸ್​ಗೆ ವಿಕೆಟ್ ಒಪ್ಪಿಸಿದ್ದ ಧವನ್, ಟಿ20ಯಲ್ಲೂ ಇದನ್ನು ಪುನರಾವರ್ತನೆ ಮಾಡಿದರು. 147 ಕಿ.ಮೀ ವೇಗದಲ್ಲಿ ಬಂದ ಚೆಂಡನ್ನು ಗಮನಿಸುವಲ್ಲಿ ಎಡವಿ ಬೌಲ್ಡ್ ಆದರು.

16 ರನ್​ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ 4ನೇ ಕ್ರಮಾಂಕದಲ್ಲಿ ಆಡಿದ ರಿಷಭ್ ಪಂತ್, 4 ಎಸೆತಗಳಲ್ಲಿ 1 ರನ್ ಬಾರಿಸಿ ಕೆಟ್ಟ ಶಾಟ್ ಬಾರಿಸಿ ವಿಕೆಟ್ ನೀಡಿದರು. ಬ್ರಾಥ್​ವೇಟ್ ಎಸೆತದಲ್ಲಿ ಟಾಪ್ ಎಡ್ಜ್ ಆದ ಚೆಂಡು ಡರೇನ್ ಬ್ರಾವೊ ಕೈ ಸೇರಿತು. ಇದರಿಂದಾಗಿ ಪವರ್ ಪ್ಲೇ ಮುಗಿಯುವ ಹಂತಕ್ಕೆ ಭಾರತ 35 ರನ್​ಗೆ 3 ವಿಕೆಟ್ ಕಳೆದುಕೊಂಡಿತು. 22 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 16 ರನ್ ಬಾರಿಸಿದ್ದ ಕೆಎಲ್ ರಾಹುಲ್, ಬ್ರಾಥ್​ವೇಟ್​ಗೆ ವಿಕೆಟ್ ಒಪ್ಪಿಸಿದಾಗ ಭಾರತಕ್ಕೆ 65 ರನ್ ಗೆಲುವಿಗೆ ಅಗತ್ಯವಿದ್ದವು. ಈ ಹಂತದಲ್ಲಿ 5ನೇ ವಿಕೆಟ್​ಗೆ ದಿನೇಶ್ ಕಾರ್ತಿಕ್ ಹಾಗೂ ಮನೀಷ್ ಪಾಂಡೆ (19) ಅಮೂಲ್ಯ 38 ರನ್​ಗಳ ಜತೆಯಾಟವಾಡಿದ್ದರಿಂದ ಭಾರತದ ಗೆಲುವಿನ ನಿರೀಕ್ಷೆ ಚಿಗುರಿತು. ಕೊನೆಯಲ್ಲಿ ಕೃನಾಲ್ ಪಾಂಡ್ಯ (21*) ಗೆಲುವನ್ನು ಸರಾಗ ಮಾಡಿದರು.

ಭಾರತ ಪರ ಆಡಿದ ಸಹೋದರರು

ಯೂಸುಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ಬಳಿಕ ಭಾರತ ತಂಡವನ್ನು ಟಿ20ಯಲ್ಲಿ ಪ್ರತಿನಿಧಿಸಿದ ಸಹೋದರರು ಎನ್ನುವ ಗೌರವಕ್ಕೆ ಕೃನಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಪಾತ್ರರಾದರು. ವಿಶೇಷವೆಂದರೆ ಈ ಎರಡೂ ಸಹೋದರ ಜೋಡಿಗಳು ಬರೋಡ ಮೂಲವಾಗಿವೆ.

ವಿಂಡೀಸ್​ಗೆ ಕಾಡಿದ ಕೃನಾಲ್ ಕುಲದೀಪ್

ಚೈನಾಮನ್ ಬೌಲರ್ ಕುಲದೀಪ್ ಯಾದವ್ ಹಾಗೂ ಪದಾರ್ಪಣಾ ಪಂದ್ಯವಾಡಿದ ಕೃನಾಲ್ ಪಾಂಡ್ಯ ಜಂಟಿ ಎಂಟು ಓವರ್​ಗಳ ಸ್ಪೆಲ್​ನಲ್ಲಿ ವಿಂಡೀಸ್ ಬ್ಯಾಟಿಂಗ್ ವಿಭಾಗವನ್ನು ಛಿದ್ರಗೊಳಿಸಿದರು. 7 ಓವರ್​ಗಳ ಅಂತ್ಯಕ್ಕೆ 3 ವಿಕೆಟ್​ಗೆ 34 ರನ್​ಗಳಿಸಿ ವಿಂಡೀಸ್ ಕೆಟ್ಟ ಸ್ಥಿತಿಯಲ್ಲಿದ್ದ ವೇಳೆ ಬೌಲಿಂಗ್ ಮಾಡಲಿಳಿದ ಕೃನಾಲ್, ಅನುಭವಿ ಕೈರಾನ್ ಪೊಲ್ಲಾರ್ಡ್ (14) ವಿಕೆಟ್ ಉರುಳಿಸಿದ್ದಲ್ಲದೆ, ಕೇವಲ 15 ರನ್ ನೀಡಿದರು. ಇನ್ನೊಂದೆಡೆ ಕುಲದೀಪ್ ಯಾದವ್ 4 ಓವರ್​ಗಳ ಕೋಟಾದಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇವರ ಸಾಹಸದಿಂದಾಗಿ 15 ಓವರ್​ಗಳ ಅಂತ್ಯಕ್ಕೆ ವಿಂಡೀಸ್ 7 ವಿಕೆಟ್ ಕಳೆದುಕೊಂಡು 63 ರನ್ ಬಾರಿಸಿತ್ತು. ಈ ವೇಳೆ ಫ್ಯಾಬಿಯನ್ ಅಲೆನ್ (27ರನ್, 20 ಎಸೆತ,4 ಬೌಂಡರಿ) ವೆಸ್ಟ್ ಇಂಡೀಸ್ ಇನಿಂಗ್ಸ್​ನ ಗರಿಷ್ಠ ಮೊತ್ತ ಬಾರಿಸಿದರೆ, ಕಿಮೋ ಪೌಲ್ ಅಜೇಯ 15 ಹಾಗೂ ಕ್ಯಾರಿ ಪಿಯರ್ 9 ರನ್ ಬಾರಿಸಿ ತಂಡದ ಮೊತ್ತವನ್ನು ಮೂರಂಕಿಯ ಗಡಿ ದಾಟಿಸಿದರು. ಉಮೇಶ್ ಯಾದವ್ (36ಕ್ಕೆ 1) ಎಸೆದ 19ನೇ ಓವರ್​ನಲ್ಲಿ 16 ರನ್ ಕಸಿದ ವಿಂಡೀಸ್ 100 ರನ್​ಗಳ ಗಡಿ ದಾಟಿತು. ಜಸ್​ಪ್ರೀತ್ ಬುಮ್ರಾ ಹಾಗೂ ಪದಾರ್ಪಣಾ ಪಂದ್ಯವಾಡಿದ ಇನ್ನೊಬ್ಬ ಆಟಗಾರ ಖಲೀಲ್ ಅಹ್ಮದ್ ತಲಾ 1 ವಿಕೆಟ್ ಉರುಳಿಸಿದರು. ಏಕದಿನ ಸರಣಿಯಲ್ಲಿ ಭಾರತವನ್ನು ಕಾಡಿದ್ದ ಶೈ ಹೋಪ್ (14) ಹಾಗೂ ಶಿಮ್ರೋನ್ ಹೆಟ್ಮೆಯರ್ (10) ದೊಡ್ಡ ಮೊತ್ತ ಬಾರಿಸಲು ವಿಫಲವಾಗಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು.

ಐವರು ಪದಾರ್ಪಣೆ

ಕೋಲ್ಕತ ಪಂದ್ಯದ ಮೂಲಕ ಉಭಯ ತಂಡಗಳಿಂದ ಒಟ್ಟು ಐವರು ಅಂತಾರಾಷ್ಟ್ರೀಯ ಟಿ20ಗೆ ಪದಾರ್ಪಣೆ ಮಾಡಿದರು. ಭಾರತ ತಂಡ ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಹಾಗೂ ಎಡಗೈ ವೇಗಿ ಖಲೀಲ್ ಅಹ್ಮದ್​ಗೆ ಟಿ20 ಕ್ಯಾಪ್ ನೀಡಿದರೆ, ವೆಸ್ಟ್ ಇಂಡೀಸ್ ತಂಡ ವೇಗಿ ಒಶಾನೆ ಥಾಮಸ್, ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಕ್ಯಾರಿ ಪಿಯರ್ ಹಾಗೂ ಬ್ಯಾಟಿಂಗ್ ಆಲ್ರೌಂಡರ್ ಫ್ಯಾಬಿಯನ್ ಅಲೆನ್​ಗೆ ಪದಾರ್ಪಣೆ ಅವಕಾಶ ನೀಡಿತು. ಸ್ಟಾರ್ ಆಟಗಾರ ಎಂಎಸ್ ಧೋನಿ ಇಲ್ಲದೆ ಭಾರತ ತಂಡ ತವರಿನಲ್ಲಿ ಆಡಿದ ಮೊದಲ ಟಿ20 ಪಂದ್ಯ ಇದು.

ರಿಷಭ್​ಗಿಲ್ಲ ವಿಕೆಟ್ ಕೀಪಿಂಗ್ ಚಾನ್ಸ್!

ಟಿ20 ತಂಡಕ್ಕೆ ಧೋನಿಯನ್ನು ಕೈಬಿಟ್ಟ ಬಗ್ಗೆ ವಿರಾಟ್ ಕೊಹ್ಲಿಯನ್ನು ಏಕದಿನ ಸರಣಿ ಮುಗಿದ ಬಳಿಕ ಪ್ರಶ್ನಿಸಿದ್ದಾಗ, ರಿಷಭ್ ಪಂತ್​ಗೆ ಟಿ20ಯಲ್ಲಿ ವಿಕೆಟ್ ಕೀಪರ್ ಆಗಿ ಆಡುವ ಅವಕಾಶ ನೀಡುವ ದೃಷ್ಟಿಯಿಂದ ಅವರು ಹೊರಗುಳಿದಿದ್ದಾರೆ ಎಂದಿದ್ದರು. ಆದರೆ, ಮೊದಲ ಟಿ20ಯಲ್ಲಿ ರಿಷಭ್ ಪಂತ್ ಬದಲಾಗಿ ದಿನೇಶ್ ಕಾರ್ತಿಕ್ ವಿಕೆಟ್ಕೀಪರ್ ಆಗಿ ಕಣಕ್ಕಿಳಿದಿದ್ದು ಅಚ್ಚರಿ ಮೂಡಿಸಿತು. ಬಿಸಿಸಿಐ ಶನಿವಾರ 12 ಸದಸ್ಯರ ತಂಡ ಪ್ರಕಟಿಸಿದಾಗ ರಿಷಭ್ ಪಂತ್​ರನ್ನು ವಿಕೆಟ್ಕೀಪರ್ ಎಂದು ಘೋಷಣೆ ಮಾಡಿತ್ತು. ಆದರೆ, ಕೊನೇ ಹಂತದಲ್ಲಿ ದಿನೇಶ್ ಕಾರ್ತಿಕ್ ಕೈಗೆ ಕೀಪಿಂಗ್ ಗ್ಲೌಸ್ ಸೇರಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಧೋನಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ರಾಷ್ಟ್ರೀಯ ಆಯ್ಕೆ ಸಮಿತಿ ಮಾತ್ರ ತಂಡ ಪ್ರಕಟಿಸುವ ವೇಳೆ, ಮೀಸಲು ವಿಕೆಟ್ ಕೀಪರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಗುರಿಯಲ್ಲಿದ್ದು, ಅದಕ್ಕಾಗಿ ಟಿ20 ಸರಣಿಗೆ ಧೋನಿಯನ್ನು ಆಯ್ಕೆ ಮಾಡಿಲ್ಲ ಎಂದು ತಿಳಿಸಿತ್ತು.

2ನೇ ಟಿ20 ಪಂದ್ಯ

ಯಾವಾಗ: ನವೆಂಬರ್ 6, ಮಂಗಳವಾರ

ಎಲ್ಲಿ: ಲಖನೌ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...