17 C
Bangalore
Wednesday, December 11, 2019

37 ವರ್ಷದ ಬಳಿಕ ಮೆಲ್ಬೋರ್ನ್ ಗೆಲುವು

Latest News

ಕ್ರಿಮ್್ಸ ನಿರ್ದೇಶಕ ಹುದ್ದೆಗಾಗಿ ಹುಬ್ಬಳ್ಳಿಯ ಇಬ್ಬರು ಹಿರಿಯ ವೈದ್ಯರ ಪೈಪೋಟಿ

ವಿಜಯವಾಣಿ ಸುದ್ದಿಜಾಲ ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್(ಕ್ರಿಮ್್ಸ) ನಿರ್ದೇಶಕ ಹುದ್ದೆಗಾಗಿ ಹುಬ್ಬಳ್ಳಿಯ ಕಿಮ್ಸ್​ನ ಇಬ್ಬರು ಹಿರಿಯ ವೈದ್ಯರ ನಡುವೆ ಪೈಪೋಟಿ ಇದೆ....

ವಾರಕ್ಕೊಮ್ಮೆ ಬ್ಯಾಗ್​ಲೆಸ್ ಡೇ ಯೋಜನೆ; ಶಿಕ್ಷಣ ಸಚಿವ ಸುರೇಶಕುಮಾರ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ, ಉತ್ಸಾಹ ಹೆಚ್ಚಿಸಲು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂಬರುವ ಶೈಕ್ಷಣಿಕ ವರ್ಷದಿಂದ...

ಬುಡಮೇಲಾದ ಸಿದ್ದು ಭವಿಷ್ಯ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ನುಡಿದಿದ್ದ ಭವಿಷ್ಯವೆಲ್ಲ ಬುಡಮೇಲಾಗಿದೆ. ಅವರು ತಮ್ಮ ಜ್ಯೋತಿಷಾಲಯ ಮುಚ್ಚಿಕೊಂಡು ಹೋಗಿದ್ದಾರೆ. ಬುರುಡೆ ಬಿಡೋದೆ ಅವರ ಕೆಲಸ. ಬುರುಡೆ...

ಪಿಬಿ ರಸ್ತೆಯಲ್ಲಿ ಟಯರ್ ಅಂಗಡಿ!

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸಿಆರ್​ಎಫ್ ಅನುದಾನದಡಿ ನಿರ್ವಿುಸಲಾದ ಚನ್ನಮ್ಮ ವೃತ್ತ- ಬಂಕಾಪುರ ಚೌಕ ವೃತ್ತದ ಪಿಬಿ ರಸ್ತೆ ಈಗ ಅತಿಕ್ರಮಣಕಾರರ ಸ್ವರ್ಗವಾಗಿ ಮಾರ್ಪಟ್ಟಿದೆ....

ಹಳ್ಳಿಗರಿಗೆ ಅಶುದ್ಧ ನೀರೇ ಗತಿ!

ವೀರೇಶ ಹಾರೋಗೇರಿ ಕಲಘಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ವಿುಸಿದ ಶುದ್ಧ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿವೆ. ಇದರಿಂದಾಗಿ...

ಮೆಲ್ಬೋರ್ನ್: ದಿನದ ಮೊದಲ ಅವಧಿಯ ಆಟ ಮಳೆಯಿಂದಾಗಿ ಸಂಪೂರ್ಣ ತೊಳೆದುಹೋಗಿತ್ತು. ಮೆಲ್ಬೋರ್ನ್​ನಲ್ಲಿ ಇಡೀ ದಿನದ ಮಳೆಯ ಮುನ್ಸೂಚನೆ ಇದ್ದ ಹೊತ್ತಿನಲ್ಲಿಯೇ ಸಿಕ್ಕ ಅಲ್ಪ ಅವಕಾಶದಲ್ಲಿ ಭಾರತ ತಂಡ 27 ಎಸೆತಗಳಲ್ಲೇ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 137 ರನ್​ಗಳಿಂದ ಬಗ್ಗುಬಡಿಯಿತು. ವಿಶ್ವ ಕ್ರಿಕೆಟ್​ನ ಮೊಟ್ಟಮೊದಲ ಟೆಸ್ಟ್ ಪಂದ್ಯ ನಡೆದ ಐತಿಹಾಸಿಕ ಮೆಲ್ಬೋರ್ನ್ ಮಣ್ಣಿನಲ್ಲಿ 37 ವರ್ಷಗಳ ಬಳಿಕ ಜಯದ ಸವಿ ಕಂಡ ಭಾರತ, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಕಂಡಿದ್ದಲ್ಲದೆ, ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಬಾಕ್ಸಿಂಗ್ ಡೇ ಟೆಸ್ಟ್​ನ ಅಂತಿಮ ದಿನ ಭಾರತ ಗೆಲುವು ಒಲಿಸಿಕೊಳ್ಳುವ ಮುನ್ನ ಕೆಲವು ನಾಟಕೀಯ ಕ್ಷಣಗಳೂ ಪಂದ್ಯದಲ್ಲಿ ದಾಖಲಾದವು. ಭಾನುವಾರದ ಆಟಕ್ಕೆ ಮಳೆ ಅಡ್ಡಿಪಡಿಸಲೆಂಬ ಪ್ರಾರ್ಥನೆಯಲ್ಲಿದ್ದ ಆಸೀಸ್ ತಂಡಕ್ಕೆ ದಿನದ ಆರಂಭದ ಎರಡೂವರೆ ಗಂಟೆಗಳ ಆಟದಲ್ಲಿ ಈ ಚಮತ್ಕಾರ ನಡೆಯಿತು. ಇದರಿಂದಾಗಿ ಭೋಜನ ವಿರಾಮ ಕೂಡ ಬೇಗನೆ ತೆಗೆದುಕೊಳ್ಳಲಾಯಿತು. ಆ ಬಳಿಕ ಅಲ್ಪ ಮಟ್ಟಿಗೆ ಮಳೆ ಬಿಡುವು ನೀಡಿದ ವೇಳೆಯಲ್ಲಿಯೇ ಭಾರತದ ಬೌಲರ್​ಗಳು ಆಸೀಸ್ ಹೋರಾಟವನ್ನು ಅಂತ್ಯಗೊಳಿಸಿದರು.

399 ರನ್ ಸವಾಲಿಗೆ ಪ್ರತಿಯಾಗಿ 8 ವಿಕೆಟ್​ಗೆ 258 ರನ್​ಗಳಿಂದ ಆಟ ಆರಂಭಿಸಿದ ಆಸೀಸ್, 89.3 ಓವರ್​ಗಳಲ್ಲಿ 261 ರನ್​ಗೆ ಆಲೌಟ್ ಆಯಿತು. 61 ರನ್​ಗಳಿಂದ ಆಟ ಮುಂದುವರಿಸಿದ ಪ್ಯಾಟ್ ಕಮ್ಮಿನ್ಸ್ (63ರನ್, 114 ಎಸೆತ, 5 ಬೌಂಡರಿ, 1 ಸಿಕ್ಸರ್), ಜಸ್​ಪ್ರೀತ್ ಬುಮ್ರಾಗೆ ಪಂದ್ಯದಲ್ಲಿ 9ನೇ ಬಲಿಯಾದರೆ, ಅದರ ಮರು ಓವರ್​ನಲ್ಲಿಯೇ ಇಶಾಂತ್ ಶರ್ಮ ಎಸೆತದಲ್ಲಿ ಹುಕ್ ಮಾಡಲು ಯತ್ನಿಸಿದ ನಾಥನ್ ಲ್ಯಾನ್, ವಿಕೆಟ್ಕೀಪರ್ ಪಂತ್​ಗೆ ಕ್ಯಾಚ್ ನೀಡಿದಾಗ ಎಂಸಿಜಿ ನೆಲದಲ್ಲಿ ಇತಿಹಾಸ ನಿರ್ವಣವಾಯಿತು. ಅದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 150 ಗೆಲುವು ಸಾಧಿಸಿದ ವಿಶ್ವದ ಕೇವಲ 5ನೇ ತಂಡ ಎನ್ನುವ ಶ್ರೇಯ ಪಡೆದುಕೊಂಡಿತು. ಪಂದ್ಯದಲ್ಲಿ ಒಟ್ಟು 86 ರನ್​ಗೆ 9 ವಿಕೆಟ್ ಉರುಳಿಸಿದ ಜಸ್​ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಗೌರವ ಪಡೆದರು. ಇದು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್​ನಲ್ಲಿ ಭಾರತದ ಬೌಲರ್​ವೊಬ್ಬನ ಶ್ರೇಷ್ಠ ನಿರ್ವಹಣೆ ಎನಿಸಿತು. 2017ರಲ್ಲಿ ತವರಿನಲ್ಲಿ 2-1ರಿಂದ ಸರಣಿ ಗೆದ್ದು ಬಾರ್ಡರ್-ಗಾವಸ್ಕರ್ ಟ್ರೋಫಿ ಜಯಿಸಿದ್ದ ಭಾರತ, ಹಾಲಿ ಸರಣಿಯ ಅಂತಿಮ ಪಂದ್ಯದ ಫಲಿತಾಂಶ ಏನೇ ಆದರೂ, ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿದೆ. ‘ಅಂತಿಮ ಟೆಸ್ಟ್ ಗೆಲ್ಲುವ ಗುರಿಯಿಂದ ನಮ್ಮ ತಂಡವನ್ನು ಯಾವ ಅಂಶವೂ ವಿಚಲಿತಗೊಳಿಸಲಾರದು’ ಎಂದಿರುವ ನಾಯಕ ವಿರಾಟ್ ಕೊಹ್ಲಿ, ಆಸೀಸ್ ನೆಲದಲ್ಲಿ ಭಾರತದ ಮೊಟ್ಟಮೊದಲ ಚಾರಿತ್ರಿಕ ಸರಣಿ ಜಯದ ವಿಶ್ವಾಸದಲ್ಲಿದ್ದಾರೆ.

ಕೊಹ್ಲಿ ಹಾಗೂ ಪೂಜಾರ ಹೊರಗುಳಿದರೆ ಭಾರತ ತಂಡದ ಪರಿಸ್ಥಿತಿಯೂ ನಮ್ಮಂತಾಗುತ್ತದೆ. ನಮ್ಮ ಅನನುಭವ, ಒತ್ತಡ ಹಾಗೂ ವಿಶ್ವದರ್ಜೆಯ ಬೌಲಿಂಗ್ ವಿಭಾಗವನ್ನು ಎದುರಿಸಿದ ಕಾರಣದಿಂದ ಸೋಲು ಕಂಡಿದ್ದೇವೆ. ತಂಡದಿಂದ ಹೊರಗಿರುವ ವಿಶ್ವದರ್ಜೆಯ ಆಟಗಾರರು ಮರಳಿ ಬಂದಾಗ, ಫಲಿತಾಂಶದಲ್ಲಿ ಭಿನ್ನತೆಯನ್ನು ಕಾಣಬಹುದು.

| ಟಿಮ್ ಪೇನ್, ಆಸ್ಟ್ರೇಲಿಯಾ ತಂಡದ ನಾಯಕ

ಕೊನೆಯ ಬಾರಿ ಗೆದ್ದಾಗ ಇವರ್ಯಾರೂ ಹುಟ್ಟಿರಲಿಲ್ಲ!

ಭಾರತ ತಂಡ ಬರೋಬ್ಬರಿ 37 ವರ್ಷ 10 ತಿಂಗಳ ಬಳಿಕ ಎಂಸಿಜಿಯಲ್ಲಿ ಗೆಲುವು ಸಾಧಿಸಿತು. 1981ರಲ್ಲಿ ಕೊನೆಯ ಬಾರಿಗೆ ಸುನೀಲ್ ಗಾವಸ್ಕರ್ ನೇತೃತ್ವದಲ್ಲಿ ಭಾರತ ಜಯ ಕಂಡಿತ್ತು. ಈಗಿನ ತಂಡದ ಆಟಗಾರರು ಯಾರೂ ಆಗಿನ್ನೂ ಹುಟ್ಟಿರಲಿಲ್ಲ! ಎಂಸಿಜಿಯಲ್ಲಿ ಇದು ಭಾರತಕ್ಕೆ 3ನೇ ಗೆಲುವು. ನ್ಯೂಜಿಲೆಂಡ್​ನ ಕ್ವೀನ್ಸ್ ಪಾರ್ಕ್ ಓವಲ್ ಹಾಗೂ ಶ್ರೀಲಂಕಾದ ಎಸ್​ಎಸ್​ಸಿ ಮೈದಾನದ ಬಳಿಕ ಭಾರತದ ಯಶಸ್ವಿ ವಿದೇಶಿ ಮೈದಾನ ಎನ್ನುವ ಹಿರಿಮೆ ಎಂಸಿಜಿಯದ್ದಾಗಿದೆ.

ಆರ್ಚಿ ಶೀಲರ್ ಕೈಕುಲುಕಿದ ಟೀಮ್

ಪಂದ್ಯ ಮುಗಿದ ಬಳಿಕ ಎರಡೂ ತಂಡದ ಆಟಗಾರರು ಸಾಲಾಗಿ ಕೈಕುಲುಕುವುದು ಸಂಪ್ರದಾಯ. ಆಸೀಸ್ ತಂಡದ ಭಾಗವಾಗಿದ್ದ 7 ವರ್ಷದ ಆರ್ಚಿ ಶೀಲರ್​ಗೂ ಟೀಮ್ ಇಂಡಿಯಾ ಆಟಗಾರರು ಎಂದಿನ ರೀತಿಯಲ್ಲಿಯೇ ಕೈಕುಲುಕಿ ಕ್ರೀಡಾಸ್ಪೂರ್ತಿ ಮೆರೆದರು.

150 ಜಯದ ಎಲೈಟ್ ಕ್ಲಬ್​ಗೆ ಭಾರತ

ಟೆಸ್ಟ್ ಕ್ರಿಕೆಟ್​ನಲ್ಲಿ 150 ಜಯ ಪಡೆದ ಎಲೈಟ್ ಕ್ಲಬ್​ಗೆ ಭಾರತ, ಮೆಲ್ಬೋರ್ನ್ ವಿಜಯದ ಮೂಲಕ ಸೇರಿಕೊಂಡಿದೆ. ಭಾರತ ತಂಡ ತನ್ನ 532ನೇ ಟೆಸ್ಟ್​ನಲ್ಲಿ ಈ ಸಾಧನೆ ಮಾಡಿತು. 384 ಜಯ ಕಂಡಿರುವ ಆಸ್ಟ್ರೇಲಿಯಾ (817 ಪಂದ್ಯ) ಅಗ್ರಸ್ಥಾನದಲ್ಲಿದ್ದರೆ, 364 ಜಯ ಕಂಡಿರುವ ಇಂಗ್ಲೆಂಡ್ (1007 ಪಂದ್ಯ) 2ನೇ ಸ್ಥಾನದಲ್ಲಿದೆ. 539 ಪಂದ್ಯಗಳಿಂದ 171 ಜಯ ಸಾಧಿಸಿರುವ ವೆಸ್ಟ್ ಇಂಡೀಸ್, 428 ಪಂದ್ಯಗಳಿಂದ 162 ಜಯ ಕಂಡಿರುವ ದಕ್ಷಿಣ ಆಫ್ರಿಕಾ ನಂತರದ ಸ್ಥಾನದಲ್ಲಿವೆ. 1994ರಲ್ಲಿ ಅಜರುದ್ದೀನ್ ನೇತೃತ್ವದಲ್ಲಿ ಭಾರತ 50ನೇ ಟೆಸ್ಟ್ ಜಯ ಕಂಡಿದ್ದರೆ, 2009ರಲ್ಲಿ ಎಂಎಸ್ ಧೋನಿ ಸಾರಥ್ಯದಲ್ಲಿ 100ನೇ ಜಯ ಕಂಡಿತ್ತು. ವಿಶೇಷವೆಂದರೆ, ಈ ಮೈಲಿಗಲ್ಲಿನ ಮೂರೂ ಪಂದ್ಯಗಳಲ್ಲೂ ಬೌಲರ್​ಗಳೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವುದು. 50ನೇ ಗೆಲುವಿಗೆ ಅನಿಲ್ ಕುಂಬ್ಳೆ ಪ್ರಮುಖ ಪಾತ್ರ ವಹಿಸಿದ್ದರೆ, 100ನೇ ಗೆಲುವಿಗೆ ಎಸ್. ಶ್ರೀಶಾಂತ್ ಪ್ರಮುಖ ಕಾರಣರಾಗಿದ್ದರು. 150ನೇ ಗೆಲುವಿಗೆ ಜಸ್​ಪ್ರೀತ್ ಬುಮ್ರಾ ಕಾರಣ ಎನಿಸಿದ್ದಾರೆ.

ದಾದಾ ದಾಖಲೆ ಸಮ

ವಿರಾಟ್ ಕೊಹ್ಲಿ ವಿದೇಶದಲ್ಲಿ ಆಡಿದ 24 ಟೆಸ್ಟ್ ಪಂದ್ಯಗಳಲ್ಲಿ 11 ಗೆಲುವು ಸಾಧಿಸುವ ಮೂಲಕ ಸೌರವ್ ಗಂಗೂಲಿ ದಾಖಲೆಯನ್ನು ಸರಿಗಟ್ಟಿದರು. ಗಂಗೂಲಿ 11 ಗೆಲುವಿವಾಗಿ 28 ಟೆಸ್ಟ್ ಆಡಿದ್ದರು. ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಶ್ರೀಲಂಕಾದಲ್ಲಿ 5, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾದಲ್ಲಿ ತಲಾ 2, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್​ನಲ್ಲಿ ತಲಾ 1 ಪಂದ್ಯದಲ್ಲಿ ಜಯ ಸಾಧಿಸಿದೆ.

ಭಾರತಕ್ಕೆ ಇನಿಂಗ್ಸ್ ಜಯ!

ಪಂದ್ಯದಲ್ಲಿ ಭಾರತ 2 ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ನಡೆಸಿದರೂ, ಆಸೀಸ್​ಗೆ ಭಾರತದ ಮೊದಲ ಇನಿಂಗ್ಸ್ ಮೊತ್ತವನ್ನೇ ಸರಿಗಟ್ಟಲು ಸಾಧ್ಯವಾಗಲಿಲ್ಲ. ಭಾರತ ಮೊದಲ ಇನಿಂಗ್ಸ್​ನಲ್ಲಿ 443 ರನ್ ಗಳಿಸಿದ್ದರೆ, ಆಸೀಸ್ ಗಳಿಸಿದ್ದು 151 ಮತ್ತು 261 ರನ್. ಅಂದರೆ ಭಾರತ ಫಾಲೋಆನ್ ಹೇರದೆ ಇದ್ದರೆ ಇನಿಂಗ್ಸ್ ಮತ್ತು 31 ರನ್​ಗಳಿಂದ ಜಯಿಸುತ್ತಿತ್ತು!

ಅಂತಿಮ ಟೆಸ್ಟ್ ಪಂದ್ಯ: ಯಾವಾಗ: ಜನವರಿ 3-7, ಎಲ್ಲಿ: ಸಿಡ್ನಿ, ಆರಂಭ: ಬೆಳಗ್ಗೆ 5

Stay connected

278,739FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...