18 C
Bangalore
Friday, December 6, 2019

ಪಿಂಕ್ ಟೆಸ್ಟ್​ನಲ್ಲಿ ಬಾಂಗ್ಲಾ ಪಲ್ಟಿ:ಬ್ಯಾಟಿಂಗ್-ಬೌಲಿಂಗ್​ನಲ್ಲಿ ಟೀಮ್ ಇಂಡಿಯಾ ಸೂಪರ್

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಕೋಲ್ಕತ: ಅಹರ್ನಿಶಿ ಟೆಸ್ಟ್ ಕುರಿತಾಗಿ ಭಾರತಕ್ಕೆ ಇದ್ದ ಕುತೂಹಲ, ಗೊಂದಲಗಳಿಗೆ ಶುಕ್ರವಾರ ಐತಿಹಾಸಿಕ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ತೆರೆಬಿದ್ದಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಕೇವಲ 183 ಎಸೆತಗಳಲ್ಲೇ ನಿಯಂತ್ರಿಸಿದ ಭಾರತ, ಬಳಿಕ ಬ್ಯಾಟಿಂಗ್​ನಲ್ಲಿ ಎಚ್ಚರಿಕೆಯ ಆಟವಾಡುವ ಮೂಲಕ ಬೃಹತ್ ಮೊತ್ತದತ್ತ ಮುಖ ಮಾಡಿದೆ. ಎಸ್​ಜಿ ಪಿಂಕ್ ಚೆಂಡು ಯಾವ ರೀತಿಯ ವರ್ತನೆ ತೋರಲಿದೆ ಎಂಬ ಕುತೂಹಲದ ನಡುವೆಯೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾದೇಶ, 7ನೇ ಓವರ್​ನಿಂದಲೇ ಕುಸಿಯಲಾರಂಭಿಸಿತು. ವೇಗಿಗಳಿಂದ ಮಾರಕ ದಾಳಿ ಸಂಘಟಿಸಿದ ಭಾರತ ತಂಡ, 30.3 ಓವರ್​ಗಳಲ್ಲಿ ಕೇವಲ 106 ರನ್​ಗೆ ಎದುರಾಳಿಯನ್ನು ಆಲೌಟ್ ಮಾಡಿತು. ತ್ರಿಮೂರ್ತಿ ವೇಗಿಗಳಾದ ಇಶಾಂತ್ ಶರ್ಮ (22ಕ್ಕೆ 5), ಉಮೇಶ್ ಯಾದವ್(29ಕ್ಕೆ 3) ಹಾಗೂ ಮೊಹಮದ್ ಶಮಿ (36ಕ್ಕೆ 2) ಫ್ಲಡ್​ಲೈಟ್ ಬೆಳಗುವ ಮುನ್ನವೇ ಬಾಂಗ್ಲಾ ಇನಿಂಗ್ಸ್ ಅಂತ್ಯಗೊಳಿಸಿದರು. ಎಂದಿನ ಟೆಸ್ಟ್ ಮಾದರಿಯಲ್ಲಿ ದಿನದಾಟ ಕೊನೆಗೊಳ್ಳುವ ಸಮಯದಲ್ಲಿ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಚೇತೇಶ್ವರ ಪೂಜಾರ (55 ರನ್, 105 ಎಸೆತ, 8 ಬೌಂಡರಿ) ಹಾಗೂ ನಾಯಕ ವಿರಾಟ್ ಕೊಹ್ಲಿ (59* ರನ್, 93 ಎಸೆತ, 8 ಬೌಂಡರಿ) ಬಾರಿಸಿದ ಅರ್ಧಶತಕಗಳ ನೆರವಿನಿಂದ ದಿನದಂತ್ಯಕ್ಕೆ 46 ಓವರ್​ಗಳಲ್ಲಿ 3 ವಿಕೆಟ್​ಗೆ 174 ರನ್ ಪೇರಿಸಿದ್ದು, 68 ರನ್​ಗಳ ಮುನ್ನಡೆಯಲ್ಲಿದೆ. 2005ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಟೆಸ್ಟ್ ಬಳಿಕ ಭಾರತ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದ ಮೊದಲ ದಿನದ ಆಟದಲ್ಲಿಯೇ ಮುನ್ನಡೆ ಪಡೆದುಕೊಂಡಿದೆ. ಅಹರ್ನಿಶಿ ಟೆಸ್ಟ್​ನಲ್ಲಿ ಸಂಧ್ಯಾಕಾಲದ ಅವಧಿಯಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ ಎನ್ನುವ ಎಚ್ಚರದೊಂದಿಗೆ ಮಯಾಂಕ್ ಅಗರ್ವಾಲ್ (14) ಹಾಗೂ ರೋಹಿತ್ ಶರ್ಮ (21) ಬ್ಯಾಟಿಂಗ್ ಆರಂಭಿಸಿದರು. ಆದರೆ, 28 ಎಸೆತಗಳಲ್ಲಿ 26 ರನ್ ಸೇರಿಸಿದ್ದ ವೇಳೆ ಕಳೆದ ಟೆಸ್ಟ್ ದ್ವಿಶತಕವೀರ ಮಯಾಂಕ್, ಅಲ್ ಅಮೀನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ರೋಹಿತ್​ಗೆ ಜತೆಯಾದ ಚೇತೇಶ್ವರ ಪೂಜಾರ ಚಹಾ ವಿರಾಮದ ವೇಳೆಗೆ ಹೆಚ್ಚಿನ ಅಪಾಯವಿಲ್ಲದೆ ತಂಡವನ್ನು 1 ವಿಕೆಟ್​ಗೆ 35 ರನ್​ಗೆ ಏರಿಸಿದ್ದರು. ಬಳಿಕ ರೋಹಿತ್ ಬಹಳ ಹೊತ್ತು ನಿಲ್ಲಲಿಲ್ಲ.

ವಿರಾಟ್-ಪೂಜಾರ ಭರ್ಜರಿ ಜತೆಯಾಟ

ಆರಂಭಿಕರ ವಿಕೆಟ್​ಗಳನ್ನು ಅರ್ಧಶತಕದ ಗಡಿ ದಾಟುವ ಮುನ್ನವೇ ಕಳೆದುಕೊಂಡಿದ್ದ ಭಾರತಕ್ಕೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ ಆಸರೆಯಾದರು. 3ನೇ ವಿಕೆಟ್​ಗೆ 94 ರನ್ ಜತೆಯಾಟವಾಡಿತು. ಈ ಹಂತದಲ್ಲಿ ಕೆಲವೊಂದು ಮನಸೆಳೆಯುವ ಶಾಟ್​ಗಳನ್ನೂ ಇಬ್ಬರೂ ಬ್ಯಾಟ್ಸ್​ಮನ್​ಗಳು ಬಾರಿಸಿದರು. ಇನಿಂಗ್ಸ್ ಮುನ್ನಡೆ ಪಡೆದ ಬಳಿಕ ಈ ಜೋಡಿ ಬಿರುಸಿನ ಆಟವಾಡಿತು. ಟೆಸ್ಟ್ ಜೀವನದ 24ನೇ ಅರ್ಧಶತಕ ಬಾರಿಸಿ ಪೂಜಾರ ನಿರ್ಗಮಿಸಿದರೆ, ಬಳಿಕ ಕೊಹ್ಲಿಗೆ ಜತೆಯಾದ ಉಪನಾಯಕ ಅಜಿಂಕ್ಯ ರಹಾನೆ (23*ರನ್, 22 ಎಸೆತ, 3 ಬೌಂಡರಿ) 4ನೇ ವಿಕೆಟ್​ಗೆ 37 ರನ್​ಗಳ ಉತ್ತಮ ಜತೆಯಾಟವಾಡಿದ್ದಾರೆ. ಕೊಹ್ಲಿ ತಾವು ಎದುರಿಸಿದ 76ನೇ ಎಸೆತದಲ್ಲಿ ಬೌಂಡರಿ ಸಿಡಿಸಿ 23ನೇ ಅರ್ಧಶತಕ ಮುಗಿಸಿದರು.

ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ

ಟೆಸ್ಟ್ ಕ್ರಿಕೆಟ್​ನಲ್ಲಿ ನಾಯಕನಾಗಿ ಅತಿವೇಗದಲ್ಲಿ 5 ಸಾವಿರ ರನ್ ಪೂರೈಸಿದ ಆಸ್ಟ್ರೇಲಿಯಾದ ಖ್ಯಾತ ಆಟಗಾರ ರಿಕಿ ಪಾಂಟಿಂಗ್​ರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದರು. ಕೊಹ್ಲಿ 86ನೇ ಇನಿಂಗ್ಸ್​ನಲ್ಲಿ 5 ಸಾವಿರ ರನ್ ಗಡಿ ದಾಟಿದರೆ, ರಿಕಿ ಪಾಂಟಿಂಗ್ 97 ಇನಿಂಗ್ಸ್ ಆಡಿದ್ದರು. ವೆಸ್ಟ್ ಇಂಡೀಸ್​ನ ಕ್ಲೈವ್ ಲಾಯ್್ಡ 106 ಇನಿಂಗ್ಸ್ ನಲ್ಲಿ 5 ಸಾವಿರ ರನ್ ಗಡಿ ದಾಟಿದ್ದರು.

ಮೊದಲ ದಿನ ಹಾಜರಿದ್ದ ಗಣ್ಯರು

ಭಾರತದ ಮಾಜಿ ಕ್ರಿಕೆಟಿಗರು: ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ಸಡಗೋಪನ್ ರಮೇಶ್, ಸಾಬಾ ಕರೀಂ, ಸುನೀಲ್ ಜೋಶಿ, ಅಜಿತ್ ಅಗರ್ಕರ್, ವೆಂಕಟೇಶ್ ಪ್ರಸಾದ್, ಕಪಿಲ್ ದೇವ್, ದಿಲೀಪ್ ವೆಂಗ್ಸರ್ಕಾರ್, ಮೊಹಮದ್ ಅಜರುದ್ದೀನ್, ಕೆ. ಶ್ರೀಕಾಂತ್, ಫಾರುಖ್ ಇಂಜಿನಿಯರ್, ಚಂದು ಬೋರ್ಡೆ. ಇತರ ಕ್ರೀಡೆಯ ಗಣ್ಯರು: ಅಭಿನವ್ ಬಿಂದ್ರಾ, ಪಿವಿ ಸಿಂಧು, ಪುಲ್ಲೇಲ ಗೋಪಿಚಂದ್, ಸಾನಿಯಾ ಮಿರ್ಜಾ, ಮೇರಿ ಕೋಮ್ ಬಾಂಗ್ಲಾದ ಮಾಜಿ ಆಟಗಾರರು: ಎಎಂ ನೈಮೂರ್ ರೆಹಮಾನ್, ಮೊಹಮದುಲ್ಲಾ ಹಸನ್, ಮಹರಬ್ ಹುಸೇನ್, ಹಸೀಬುಲ್ ಹುಸೇನ್, ಕಾಜಿ ಹಬೀಬುಲ್ ಬಶರ್, ಅಕ್ರಮ್ ಖಾನ್ ಹಾಗೂ ಇತರರು.

ಬಾಂಗ್ಲಾ ಪ್ರಧಾನಿ ಹಾಜರಿ: ಟಾಸ್ ಆಗುವ 10 ನಿಮಿಷ ಮುನ್ನ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಡನ್ ಗಾರ್ಡನ್ಸ್ ಮೈದಾನಕ್ಕೆ ಆಗಮಿಸಿದರು. ಮಮತಾ ಬ್ಯಾನರ್ಜಿ ಗುಲಾಬಿ ಬಣ್ಣದ ಅಂಚು ಇದ್ದ ಸೀರೆಯನ್ನು ಉಟ್ಟು ಮೈದಾನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

ಬಾಂಗ್ಲಾದೇಶ ಮೊದಲ ಇನಿಂಗ್ಸ್: 30.3 ಓವರ್​ಗಳಲ್ಲಿ 106

ಶದ್ಮನ್ ಇಸ್ಲಾಂ ಸಿ ಸಾಹ ಬಿ ಉಮೇಶ್ 29

ಇಮ್ರುಲ್ ಕಯೀಸ್ ಎಲ್​ಬಿಡಬ್ಲ್ಯು ಬಿ ಇಶಾಂತ್ 4

ಮಾಮಿನುಲ್ ಹಕ್ ಸಿ ರೋಹಿತ್ ಬಿ ಉಮೇಶ್ 0

ಎಂ. ಮಿಥುನ್ ಬಿ ಉಮೇಶ್ ಯಾದವ್ 0

ಮುಶ್ಪಿಕರ್ ರಹೀಂ ಬಿ ಮೊಹಮದ್ ಶಮಿ 0

ಮಹಮದುಲ್ಲಾ ಸಿ ಸಾಹ ಬಿ ಇಶಾಂತ್ 6

ಲಿಟನ್ ದಾಸ್ ಗಾಯಗೊಂಡು ನಿವೃತ್ತಿ 24

ನಯೀಮ್ ಹಸನ್ ಬಿ ಇಶಾಂತ್ ಶರ್ಮ 19

ಇಬಾದತ್ ಹುಸೇನ್ ಬಿ ಇಶಾಂತ್ ಶರ್ಮ 1

ಮೆಹಿದಿ ಹಸನ್ ಸಿ ಪೂಜಾರ ಬಿ ಇಶಾಂತ್ 8

ಅಲ್ ಅಮಿನ್ ಹುಸೇನ್ ಔಟಾಗದೆ 1

ಅಬು ಜಯೆದ್ ಸಿ ಪೂಜಾರ ಬಿ ಶಮಿ 0

ಇತರೆ: 14. ವಿಕೆಟ್ ಪತನ: 1-15, 2-17, 3-17, 4-26, 5-38, 6-60, 6-73 (ಲಿಟನ್ ದಾಸ್ ಗಾಯಗೊಂಡು ನಿವೃತ್ತಿ), 7-82, 8-98, 9-105. ಬೌಲಿಂಗ್: ಇಶಾಂತ್ ಶರ್ಮ 12-4-22-5, ಉಮೇಶ್ ಯಾದವ್ 7-2-29-3, ಮೊಹಮದ್ ಶಮಿ 10.3-2-36-2, ರವೀಂದ್ರ ಜಡೇಜಾ 1-0-5-0.

ಭಾರತ ಮೊದಲ ಇನಿಂಗ್ಸ್: 46 ಓವರ್​ಗಳಲ್ಲಿ 3 ವಿಕೆಟ್​ಗೆ 174

ಮಯಾಂಕ್ ಅಗರ್ವಾಲ್ ಸಿ ಮೆಹಿದಿ ಬಿ ಅಮಿನ್ 14

ರೋಹಿತ್ ಶರ್ಮ ಎಲ್​ಬಿಡಬ್ಲ್ಯು ಬಿ ಇಬಾದತ್ 21

ಚೇತೇಶ್ವರ ಪೂಜಾರ ಸಿ ಶದ್ಮನ್ ಬಿ ಇಬಾದತ್ 55

ವಿರಾಟ್ ಕೊಹ್ಲಿ ಬ್ಯಾಟಿಂಗ್ 59

ಅಜಿಂಕ್ಯ ರಹಾನೆ ಬ್ಯಾಟಿಂಗ್ 23

ಇತರೆ: 2. ವಿಕೆಟ್ ಪತನ: 1-26, 2-43, 3-137. ಬೌಲಿಂಗ್: ಅಲ್ ಅಮಿನ್ ಹುಸೇನ್ 14-3-49-1, ಅಬು ಜಯೆದ್ 12-3-40-0, ಇಬಾದತ್ ಹುಸೇನ್ 12-1-61-2, ತೈಜುಲ್ ಇಸ್ಲಾಂ 8-0-23-0.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...