ಭಾರತ ತಂಡ ಮಲ್ಲಕಂಬ ವಿಶ್ವ ಚಾಂಪಿಯನ್

ಮುಂಬೈ: ಭಾರತ ಮಲ್ಲಕಂಬ ತಂಡ, ಭಾನುವಾರ ಮುಕ್ತಾಯಗೊಂಡ ಮೊದಲ ಮಲ್ಲಕಂಬ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದೆ. ಸೆಂಟ್ರಲ್ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆದ ಕೂಟದಲ್ಲಿ 15 ದೇಶಗಳಿಂದ ತಂಡಗಳು ಸ್ಪರ್ಧಿಸಿದ್ದವು. ತಂಡ ಚಾಂಪಿಯನ್​ಷಿಪ್ ವಿಭಾಗದಲ್ಲಿ 244.73 ಅಂಕ ಪಡೆದ ಭಾರತ ಚಾಂಪಿಯನ್​ಪಟ್ಟ ಅಲಂಕರಿಸಿದರೆ, 44.45 ಅಂಕ ಪಡೆದ ಸಿಂಗಾಪುರ ಹಾಗೂ 30.22 ಅಂಕ ಪಡೆದ ಮಲೇಷ್ಯಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದವು. ಕರ್ನಾಟಕದ ಮೂಡುಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವೀರಭದ್ರ ಮುದೋಳ್ 6 ಸದಸ್ಯರ ಭಾರತ ತಂಡದ ಭಾಗವಾಗಿದ್ದರು.