ಲಖನೌ: ಬರೋಬ್ಬರಿ 12 ತಿಂಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಭಾನುವಾರ ಮರಳಿ ಕಣಕ್ಕಿಳಿಯಲಿದೆ. ಏಕದಿನ ವಿಶ್ವಕಪ್ ಟೂರ್ನಿ ಸಿದ್ಧತೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ತಂಡ ವಿರುದ್ಧದ ದ್ವಿಪಕ್ಷೀಯ ಸರಣಿಯ ಮೊದಲ ಏಕದಿನ ಪಂದ್ಯಕ್ಕೆ ಮಿಥಾಲಿ ರಾಜ್ ಪಡೆ ಸಜ್ಜಾಗಿದೆ. 2020ರ ಮಾರ್ಚ್ 8ರಂದು ಟಿ20 ವಿಶ್ವಕಪ್ ಟೂರ್ನಿಯ ೈನಲ್ ಪಂದ್ಯವೇ ಭಾರತ ಮಹಿಳಾ ತಂಡ ಆಡಿದ ಕಡೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಕ್ವಾರಂಟೈನ್ ಅವಧಿ ಮುಕ್ತಾಯಗೊಂಡ ಬಳಿಕ ಕಳೆದ ಎರಡು ದಿನಗಳಿಂದ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಭಾರತ ಮಹಿಳಾ ತಂಡದಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಡಬ್ಲ್ಯುಟಿಸಿ ಫೈನಲ್‌ಗೇರಿದ ಭಾರತ
ಕರೊನಾ ಕಾಲದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಭಾರತ ತಂಡದ ಪಾಲಿಗೆ ಈ ಸರಣಿ ಮಹತ್ವ ಪಡೆದಿದೆ. ಸರಣಿಗೆ 6 ಹೊಸ ಆಟಗಾರ್ತಿಯರಿಗೆ ಸ್ಥಾನ ಕಲ್ಪಿಸಲಾಗಿದ್ದು, ಮೂವರು ಅನುಭವಿ ಆಟಗಾರ್ತಿಯರನ್ನು ಕೈಬಿಡಲಾಗಿದೆ. ಕನ್ನಡತಿ ವೇದಾ, ಶಿಖಾ ಪಾಂಡೆ, ತಾನಿಯಾ ಭಾಟಿಯಾಗೆ ಕೊಕ್ ನೀಡಲಾಗಿತ್ತು. ಕರ್ನಾಟಕದ ಪತ್ಯುಷಾ.ಸಿ ಹಾಗೂ ಮೋನಿಕಾ ಪಟೇಲ್ ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ. ಸರಣಿಯಲ್ಲಿ 5 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತವರಿನಲ್ಲಿ ಪಾಕಿಸ್ತಾನ ಎದುರು ಟಿ20 ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದ ವಿಶ್ವಾಸದಲ್ಲಿದ್ದು, ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
ಪಂದ್ಯ ಆರಂಭ: ಬೆಳಗ್ಗೆ 9.00; ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್2.
💬 "We are not looking rusty, excited to take the field."👍👍#TeamIndia ODI skipper @M_Raj03 speaks about the mood in the camp ahead of the @Paytm #INDWvSAW ODI series starting tomorrow. pic.twitter.com/vRDvHhEIlq
— BCCI Women (@BCCIWomen) March 6, 2021