ಭಾರತ ‘ಎ’- ಶ್ರೀಲಂಕಾ ‘ಎ’ ನಡುವಿನ 4ನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ

ಹುಬ್ಬಳ್ಳಿ: ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ನಡುವಿನ ನಾಲ್ಕನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಇಲ್ಲಿನ ರಾಜನಗರ ಕರ್ನಾಟಕ ರಾಜ್ಯ ಕ್ರಿಕೆಟ್​​ ಆಸೋಸಿಯೇಷನ್ ​​​(ಕೆಎಸ್​​ಸಿಎ) ಕ್ರೀಡಾಂಗಣದಲ್ಲಿ ಇಂದು ಆರಂಭವಾಗಬೇಕಿದ್ದ ಪಂದ್ಯ ಮಳೆಯಿಂದ ತಡವಾಗಿದೆ. ಬುಧವಾರದಿಂದ ಜಿಲ್ಲೆ ಸೇರಿಂದತೆ ರಾಜ್ಯಾದ್ಯಂತ ಹಲವೆಡೆ ಸುರಿಯುತ್ತಿರುವ ಮಳೆಯಿಂದ ಉಭಯ ತಂಡದ ಆಟಗಾರರು ಅಭ್ಯಾಸ ಮಾಡಲು ಮೈದಾನಕ್ಕೆ ಆಗಮಿಸಲು ಸಾಧ್ಯವಾಗಿಲ್ಲ.

ಬಿಟ್ಟು-ಬಿಟ್ಟು ಸುರಿಯುತ್ತಿರುವ ಮಳೆಯಿಂದ ಪಿಚ್​​​ ಹಾಗೂ ಕ್ರೀಡಾಂಗಣಕ್ಕೆ ಪ್ಲಾಸ್ಟಿಕ್​​​​​​ ಹೊದಿಕೆ ಹಾಸಲಾಗಿದೆ. ವರುಣನ ಅರ್ಭಟದಿಂದ ವಿಶ್ರಾಂತಿ ಕೊಠಡಿಗಳಲ್ಲಿ ಆಟಗಾರರು ಕಾಲ ಕಳೆಯುತ್ತಿದ್ದಾರೆ. ಇಂದು 9 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯಕ್ಕೆ ಮಳೆಯಿಂದ ಟಾಸ್​​​​​​​​​​ ಆಗಿಲ್ಲ. ಒಂದು ವೇಳೆ ಮಳೆ ನಿಂತರೆ ಡಕ್ವರ್ತ್​ ಲೂಯಿಸ್​​ ಮಾದರಿಯನ್ವಯ ಪಂದ್ಯ ಆರಂಭವಾಗಲಿದೆ.

ಸರಣಿಯ ಎರಡು ಪಂದ್ಯಗಳಲ್ಲಿ ಭಾರತ ಎರಡರಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ ಒಂದರರಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *