ಮಳೆಯಿಂದ ನಿಂತು ಹೋಗಿದ್ದ ಪಂದ್ಯ ಆರಂಭ, ಬ್ಯಾಟಿಂಗ್​​ ಮಾಡಲು ಸಿದ್ಧವಾದ ಲಂಕಾ

ಹುಬ್ಬಳ್ಳಿ: ಗುರುವಾರ ಮಳೆಯಿಂದ ಅರ್ಧಕ್ಕೆ ನಿಂತು ಹೋಗಿದ್ದ ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ವಿರುದ್ಧದ ನಾಲ್ಕನೇ ಏಕದಿನ ಪಂದ್ಯ ಶುಕ್ರವಾರ ಆರಂಭವಾಗಿದೆ.

ಇಲ್ಲಿನ ರಾಜನಗರ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ಗುರುವಾರ ಮಳೆಯಿಂದ 50 ಓವರ್​​​ಗಳ ಪಂದ್ಯ 25 ಓವರ್​ಗಳಿಗೆ ನಿಗದಿಯಾಗಿತ್ತು. ನಂತರ ಬ್ಯಾಟಿಂಗ್​ ಮಾಡಿದ ಭಾರತ 22 ಓವರ್​ಗಳಲ್ಲಿ ನಾಲ್ಕು ವಿಕೆಟ್​​ ನಷ್ಟಕ್ಕೆ 208 ರನ್​ ಗಳಿಸಿತ್ತು.

ಬಳಿಕ ಬ್ಯಾಟಿಂಗ್​ ಆರಂಭಿಸಿದ ಲಂಕಾ 1.5 ಓವರ್​ಗಳಲ್ಲಿ 1 ವಿಕೆಟ್​​ ನಷ್ಟಕ್ಕೆ 10 ರನ್​ ಗಳಿಸಿದ ವೇಳೆ ಮಳೆಯಿಂದ ಪಂದ್ಯ ನಿಂತುಹೋಗಿತ್ತು. ಇಂದು ಪಂದ್ಯ ಆರಂಭವಾಗಿದ್ದು ಶ್ರೀಲಂಕಾ ಬ್ಯಾಟಿಂಗ್​​ ಮಾಡುತ್ತಿದೆ. ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಾಗಿದೆ. (ದಿಗ್ವಿಜಯ ನ್ಯೂಸ್​)