ಭಾರತ ಎ-ಶ್ರೀಲಂಕಾ ಎ 5ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಭರ್ಜರಿ ಜಯ: ಸರಣಿ ಸಮಬಲ

ಹುಬ್ಬಳ್ಳಿ: ರಾಜನಗರ ಕೆಎಸ್​ಸಿಎ‌ ಮೈದಾನದಲ್ಲಿ ಶನಿವಾರ ನಡೆದ ಭಾರತ-ಶ್ರೀಲಂಕಾ ಏಕದಿನ ಸರಣಿಯ 5ನೇ ಪಂದ್ಯದಲ್ಲಿ ಭಾರತ ಎ ತಂಡದ ವಿರುದ್ಧ ಪ್ರವಾಸಿ ಶ್ರೀಲಂಕಾ ಎ ತಂಡ ನಿರೋಶನ ಡಿಕವೆಲ್ಲ ಬಿರುಸಿನ ಶತಕದ ನೆರವಿನಿಂದ ಭರ್ಜರಿ ಜಯಗಳಿಸಿದ್ದು 7 ವಿಕೆಟ್​ಗಳ ಅಮೋಘ ಜಯದಾಖಲಿಸಿದೆ.

ಭಾರತ ನೀಡಿದ್ದ 260 ಗುರಿಯನ್ನು ಶ್ರೀಲಂಕಾ ಎ ತಂಡ 47.4 ಓವರ್​ಗಳಲ್ಲಿ ಗುರಿ ಮುಟ್ಟಿತು. ಇದರೊಂದಿಗೆ ಉಭಯ ತಂಡಗಳ ನಡುವಿನ 5 ಪಂದ್ಯಗಳ ಏಕದಿನ‌ ಸರಣಿಯಲ್ಲಿ 2-2 ಅಂಕಗಳೊಂದಿಗೆ ಸಮಬಲಗೊಂಡಿದೆ. ಗುರುವಾರ, ಶುಕ್ರವಾರ ನಡೆದ 4ನೇ ಪಂದ್ಯ ಮಳೆಯಿಂದ ರದ್ದಾಗಿತ್ತು.

ಶ್ರೀಲಂಕಾ ತಂಡಕ್ಕೆ ಆರಂಭಿಕ ಜೋಡಿ ನಿರೋಶನ ಡಿಕವೆಲ್ಲ (111) ಹಾಗೂ ಸಂಗೀತ ಕೊರೆ (61) ಭರ್ಜರಿ ಆಟದ ಮೂಲಕ ತಂಡದ ಉತ್ತಮ ಅಡಿಪಾಯ ಹಾಕಿದರು. ನಂತರ ನಾಯಕ‌ ಅಶನ್ ಪ್ರಿಯಾಂಜನ (33), ಶೇಹಾನ್ ಜಯಸೂರ್ಯ (45) ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ ಎ ಪರ ಶ್ರೇಯಸ್ ಗೋಪಾಲ 3 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆತಿಥೇಯರು ನಿಗದಿತ 50 ಓವರ್‌ಗಳಲ್ಲಿ 259ರನ್​ಗಳ ಗುರಿಯನ್ನು ಶ್ರೀಲಂಕಾ ತಂಡಕ್ಕೆ ನೀಡಿದ್ದರು. ಆರಂಭಿಕ ಋತುರಾಜ್​ ಗಾಯಕ್ವಾಡ್ (74), ಅನ್ಮೋಲ್​ ಪ್ರೀತ್ ಸಿಂಗ್ (29), ರಿಕಿ ಬುಯಿ (38), ದೀಪಕ್​ ಹೂಡಾ (37) ರನ್ ಕಾಣಿಕೆ ನೀಡಿದರು.

ಶ್ರೀಲಂಕಾ ಎ ಪರ ಅಖಿಲಾ ಧನಂಜಯ 3, ಅಶನ್ ಪ್ರಿಯಾಂಜನ 2, ಚಮಿಕ ಕರುನರತ್ನೆ, ಇಶಾನ್​ ಜಯರತ್ನೆ, ಲಕ್ಸನ್​ ಸಂದಕನ್​, ಶೇಹಾನ್ ಜಯಸೂರ್ಯ ತಲಾ ಒಂದೊಂದು ವಿಕೆಟ್​ ಪಡೆದರು.

Leave a Reply

Your email address will not be published. Required fields are marked *