ಬಂಜಾರರ ಕೊಡುಗೆ ಅಪಾರ

ಇಂಡಿ: ಬಂಜಾರ ಸಮಾಜದವರು ಎಲ್ಲ ಸಮುದಾಯದೊಂದಿಗೆ ಸೌಹಾರ್ದಯುತವಾಗಿ ಬಾಳುತ್ತ ದುಡಿಮೆಯಲ್ಲಿ ದೇವರನ್ನು ಕಾಣುವ ಗುಣ ಹೊಂದಿದ್ದು, ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಇಂಡಿ ತಾಲೂಕು ಬಂಜಾರ ನೌಕರರ ಪತ್ತಿನ ಸಹಕಾರಿ ಸಂಘ ಹಾಗೂ ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ, ಪುರಸ್ಕಾರ, ಬದ್ಧತೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಗಳು ಸಾಮಾಜಿಕ ಕಾರ್ಯಕ್ಕೆ ಹೆಚ್ಚಿನ ಬಲ ನೀಡುತ್ತವೆ. ಯಾವುದೇ ಸಮುದಾಯ ಅಭಿವೃದ್ಧಿ ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸಾಧ್ಯ. ತಾಲೂಕಿನಲ್ಲಿ 42 ತಾಂಡಾಗಳಿದ್ದು ಎಲ್ಲ ವಿಧದ ಅಭಿವೃದ್ಧಿ ಹೊಂದಬೇಕಾಗಿದೆ. ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ರೈತರ ಆಸ್ತಿಯನ್ನಾಗಿ ಮಾಡಿದ್ದೇನೆ. ಇದಕ್ಕೆ ಜನತೆ ಆರ್ಶೀವಾದ ಹಾಗೂ ನೀವು ನೀಡಿದ ಶಕ್ತಿ ಕಾರಣವಾಗಿದೆ ಎಂದು ಹೇಳಿದರು.
ಜೆಒಸಿಸಿ ಅಧ್ಯಕ್ಷ ಅರ್ಜುನ ಲಮಾಣಿ, ಡಾ. ರಮೇಶ ರಾಠೋಡ, ತಾಪಂ ಸದಸ್ಯ ಡಾ. ರವಿದಾಸ ಜಾಧವ ಮಾತನಾಡಿದರು. ಕೆಸರಟ್ಟಿ ಪೀಠದ ಸೋಮಲಿಂಗ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಾಪಂ ಅಧ್ಯಕ್ಷ ಶೇಖರ ನಾಯಕ, ಶಂಕರ ಚವಾಣ್, ರಮೇಶ ಚವಾಣ್, ಉಮೇಶ ಲಮಾಣಿ, ರಮೇಶ ರಾಠೋಡ, ಸುಭಾಷ ರಾಠೋಡ, ಲಿಂಬಾಜೀ ರಾಠೋಡ, ಸತಾರ ಬಾಗವಾನ, ಭೀಮಣ್ಣ ಕೌಲಗಿ, ಪಿಂಟೊ ರಾಠೋಡ, ದೇಸು ರಾಠೋಡ, ಎಸ್.ಕೆ. ರಾಠೋಡ, ಎಸ್.ಎ್. ಲಮಾಣಿ, ಸುನೀಲ ಪವಾರ, ವಿಜಯಕುಮಾರ ನಾಯಕ, ಜಯರಾಮ ಚವಾಣ್, ಶ್ರೀಕಾಂತ ಚವಾಣ್, ಅರ್ಜುನ ಚವಾಣ್ ಇತರರು ಇದ್ದರು.

ಅರುಣ ಜೇಟ್ಲಿ ನಿಧನಕ್ಕೆ ಸಂತಾಪ: ಕೇಂದ್ರ ಮಾಜಿ ಸಚಿವ ಅರುಣ ಜೇಟ್ಲಿ ನಿಧನದಿಂದ ದೇಶ ಒಬ್ಬ ಶ್ರೇಷ್ಠ ಬುದ್ಧಿಜೀವಿ ಹಾಗೂ ಪ್ರಬುದ್ಧ ರಾಜಕಾರಣಿಯನ್ನು ಕಳೆದುಕೊಂಡಿದೆ. ಯಾವುದೇ ಪಕ್ಷದಲ್ಲಿ ಇರಲಿ ದೇಶದ ಪ್ರಗತಿ ಮತ್ತು ಹಿತಚಿಂತನೆ ಇದ್ದವರನ್ನು ಸ್ಮರಿಸುವುದು ಮಾನವೀಯ ಮೌಲ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಸಭೆಯ ಪೂರ್ವ ಅರುಣ ಜೇಟ್ಲಿ ಅವರ ನಿಧನ ಹಿನ್ನೆಲೆ ಎರಡು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *