ಮತ್ತೆ ಮೋದಿ ಪ್ರಧಾನಿಯನ್ನಾಗಿಸುವುದೇ ನನ್ನ ಗುರಿ

ಇಂಡಿ: ನಾನು ಯಾರಿಗೂ ಅನ್ಯಾಯ ಮಾಡಿಲ್ರೀ, ಭಗವಂತನ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ, ದ್ವೇಷ, ಅಸೂಯೆ ರಾಜಕೀಯ ನಮಗ್ಯಾಕ್ರೀ, ವಿಶ್ವ ಮೆಚ್ಚುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ನಾನೂ ಒಬ್ಬನಿದ್ದೇನೆ ಎಂಬುದೇ ಸಂತೋಷ. ಬಿಜೆಪಿ ತತ್ತ್ವ ಸಿದ್ಧಾಂತವೇ ನನ್ನ ಜೀವನ ಉಸಿರು. ಮತ್ತೇ ಮೋದಿಯವರನ್ನು ಪ್ರಧಾನಿಯನ್ನಾಗಿಸುವುದೇ ನನ್ನ ಗುರಿ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

ತಾಲೂಕಿನ ಸಾಲೋಟಗಿಯಲ್ಲಿ ಲೋಕಸಭಾ ಪ್ರಚಾರಾರ್ಥ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜಗ ಮೆಚ್ಚಿದ ಮಗ ಪ್ರಧಾನಿ ಮೋದಿ ಇಡೀ ವಿಶ್ವದಲ್ಲೇ ಭಾರತದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಉಗ್ರವಾದಿಗಳು ನಮ್ಮ ಸೈನಿಕರ ಮೇಲೆ ಅಟ್ಟಹಾಸದಿಂದ ಮೆರೆದಾಗ ಪಾಕಿಸ್ತಾನದ ಒಳಹೊಕ್ಕು ಉಗ್ರಗಾಮಿಗಳನ್ನು ಅಟ್ಟಾಡಿಸಿ ಹೊಡೆದು ದೇಶದ ಘನತೆ ಎತ್ತಿ ಹಿಡಿದು ದೇಶದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಬಿಜೆಪಿ ಸೋಲಿಸಲು ಮಹಾಘಟಬಂಧನ ಮಾಡಿದ್ದಾರೆ. ಒಬ್ಬ ಸಮರ್ಥ ನಾಯಕನನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ದಯಾಸಾಗರ ಪಾಟೀಲ, ಅಪ್ಪುಗೌಡ ಪಾಟೀಲ, ಅನೀಲ ಜಮಾದಾರ, ಶ್ರೀಶೈಲಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ಮುತ್ತು ದೇಸಾಯಿ, ಸಿದ್ದಲಿಂಗ ಹಂಜಗಿ, ವೇಂಕಟೇಶ ಕುಲಕರ್ಣಿ, ಪುಟ್ಟುಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಸಿದ್ದಣ್ಣ ಶಿವೂರ, ಗಣಪತಿ ಬಾಣಿಕೋಲ, ದಯಾನಂದ ಹುಬ್ಬಳ್ಳಿ, ದೇವೇಂದ್ರ ಕುಂಬಾರ, ಸತೀಶ ಕುಂಬಾರ, ರಾಮಸಿಂಗ್ ಕನ್ನೊಳ್ಳಿ, ರಮೇಶ ಧರೇನ್ನವರ್, ಅದೃಶ್ಯಪ್ಪ ವಾಲಿ ಮತ್ತಿತರರಿದ್ದರು.