ಮೋದಿ ಮತ್ತೆ ಪ್ರಧಾನಿ ಖಚಿತ

ಇಂಡಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ಬಾರಿಯೂ ಬಹುಮತ ಸಿಗಲಿದ್ದು, ಮತ್ತೆ ಮೋದಿಯವರು ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯ ಶಂಕರ ಪಾರ್ವತಿ ಸಭಾಭವನದಲ್ಲಿ ಭಾನುವಾರ ಮಧ್ಯಾಹ್ನ ಬಿಜೆಪಿ ಕಾರ್ಯಾಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಾರ್ಯಕರ್ತರು ಪ್ರತಿ ಮನೆ-ಮನೆಗೆ ತೆರಳಿ ಪಕ್ಷದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜನರಿಗೆ ತಿಳಿಸಿ ಹೇಳಬೇಕು. ಈ ಬಾರಿಯೂ ನನ್ನ ಗೆಲುವು ಶತಸಿದ್ಧವಾಗಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲಿದ್ದೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ನರೇಂದ್ರ ಮೋದಿ ಕೇವಲ ಭಾಷಣ ಮಾಡುತ್ತಾರೆ. ಆದರೆ, ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಿರೋಧ ಪಕ್ಷದವರು ಹೇಳಿಕೆ ನೀಡುತ್ತಿರುವುದು ಅಸಮಂಜಸವಾಗಿದೆ. ಏನಿದ್ದರೂ ನರೇಂದ್ರ ಮೋದಿಯವರು ತಮ್ಮ ಕರ್ತೃತ್ವ ಶಕ್ತಿಯಿಂದ ಜಗತ್ತಿನಲ್ಲೇ ಭಾರತವನ್ನು ವಿಶ್ವ ಗುರು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತ ಅಜ್ಜ ಮುತ್ತಾತನ ಕಾಲದಿಂದಲೂ ಗರೀಬಿ ಹಠಾವೋ ಎಂದು ಘೋಷಿಸಿದರೆ ಹೊರತು ದೇಶದಲ್ಲಿನ ಬಡತನ ನಿರ್ಮೂಲನೆಗೊಳಿಸಲಿಲ್ಲ. ದೇಶದ ಪ್ರಜೆಗಳಿಗೆ ಪ್ರತಿ ವರ್ಷ 72 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಇದು ಸಾಧ್ಯವಾಗದ ಮಾತು. ದೇಶದ ಆರ್ಥಿಕ ಸ್ಥಿತಿ ಗಮನಿಸಿದರೆ ದೇಶದ ಅರ್ಥಶಾಸಜ್ಞರು ಸಹಿತ ಈ ವಿಚಾರ ಅಲ್ಲಗಳೆಯುತ್ತಾರೆ. ಆದ್ದರಿಂದ ಹಣ ನೀಡುವುದು ಅಸಾಧ್ಯದ ಮಾತು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ರವಿಕಾಂತ ಬಗಲಿ, ಮಂಜುನಾಥ ವಂದಾಲ, ದಯಾಸಾಗರ ಪಾಟೀಲ, ಮಲ್ಲಯ್ಯ ಪತ್ರಿಮಠ, ಅನೀಲ ಜಮಾದಾರ, ಶರಣಗೌಡ ಬಂಡಿ, ದೇವೇಂದ್ರ ಕುಂಬಾರ, ಶೀಲವಂತ ಉಮರಾಣಿ, ಶ್ರೀನಿವಾಸ ಕಂದಗಲ್, ವೆಂಕಟೇಶ ಕುಲಕರ್ಣಿ, ಬಾಳು ಮುಳಜಿ, ಸಂಜು ದಶವಂತ, ಅದೃಶ್ಯಪ್ಪ ವಾಲಿ, ದಯಾನಂದ ಹುಬ್ಬಳ್ಳಿ, ಬೋರಾಮಣಿ, ರಾಮಸಿಂಗ್ ಕನ್ನೊಳ್ಳಿ, ಸಿದ್ದು ಬೇಲ್ಯಾಳ, ಮಲ್ಲು ಗುಡ್ಲ ಮತ್ತಿತರರಿದ್ದರು.

Leave a Reply

Your email address will not be published. Required fields are marked *