ಮದ್ಯ ಅಕ್ರಮ ಸಾಗಣೆ, ಆರೋಪಿ ಬಂಧನ

ಇಂಡಿ: ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ 4.320 ಲೀಟರ್ ಮದ್ಯ ಸಾಗಿಸುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ಮಾಡಿ ಹೀರೋ ಹೊಂಡಾ ಫ್ಯಾಶನ್ ಪ್ಲಸ್ ಬೈಕ್ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಕಾಂತು ಹೀರು ರಾಠೋಡ (27) ಬಂಧಿತ ಆರೋಪಿ. ಪಟ್ಟಣದ ಕ್ರೀಡಾಂಗಣ ಮುಂಭಾಗದ ವಿಜಯಪುರ ರಸ್ತೆಯಲ್ಲಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಅಂದಾಜು 26,440 ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಇಂಡಿ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ನಿರೀಕ್ಷಕ ಸತ್ಯನಾರಾಯಣ ತ್ರಿವೇದಿ, ಅಬಕಾರಿ ಸಿಬ್ಬಂದಿ ಸಿದ್ಧರೂಡ ಲಕ್ಕಶೆಟ್ಟಿ, ಬಸವರಾಜ ಜಾಮಗೊಂಡ, ಎಸ್.ಸಿ. ಬಂಡಿ, ಎಸ್.ಟಿ. ದಳವಾಯಿ ದಾಳಿಯಲ್ಲಿ ಪಾಲ್ಗೊಂಡಿದ್ದರು.